ಮಹಾರಾಷ್ಟ್ರ ಎಲೆಕ್ಷನ್‌ನಲ್ಲಿ NDA ಮ್ಯಾಚ್ ಫಿಕ್ಸಿಂಗ್‌; ರಾಹುಲ್ ಗಾಂಧಿ ಸ್ಫೋಟಕ ಹೇಳಿಕೆ

author-image
admin
Updated On
ಮಹಾರಾಷ್ಟ್ರ ಎಲೆಕ್ಷನ್‌ನಲ್ಲಿ NDA ಮ್ಯಾಚ್ ಫಿಕ್ಸಿಂಗ್‌; ರಾಹುಲ್ ಗಾಂಧಿ ಸ್ಫೋಟಕ ಹೇಳಿಕೆ
Advertisment
  • 2024ರ ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ
  • ಎನ್‌ಡಿಎ 5 ಹಂತದ ಮಾಡೆಲ್ ಮೂಲಕ ಗೆಲುವು ಸಾಧಿಸಿದೆ
  • ಬಿಜೆಪಿ ಪಕ್ಷ 132 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು 5 ಮಾಡೆಲ್‌ ಕಾರಣ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ. ಬಿಜೆಪಿ ನೇತೃತ್ವದ NDA ಗೆಲುವಿಗೆ ಮ್ಯಾಚ್ ಫಿಕ್ಸಿಂಗ್ ಕಾರಣ ಎಂದು ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

2024ರ ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆದಿತ್ತು. ಈ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ ಅವರು ಎನ್‌ಡಿಎ 5 ಹಂತದ ಮಾಡೆಲ್ ಮೂಲಕ ಗೆಲುವು ಸಾಧಿಸಿದೆ ಎಂದು ಆರೋಪಿಸಿದ್ದಾರೆ.

5 ಹಂತದ ಮಾಡೆಲ್ ಯಾವುದು?
1. ಎಲೆಕ್ಷನ್ ಕಮಿಷನ್ ಅಧಿಕಾರಿಗಳನ್ನು ರಿಗ್ಗಿಂಗ್ ಮಾಡಿದ್ದಾರೆ
2. ಮತದಾರರ ಪಟ್ಟಿಗೆ ನಕಲಿ ಮತದಾರರ ಸೇರ್ಪಡೆ
3. ಶೇಕಡಾವಾರು ಮತದಾನವನ್ನು ಹೆಚ್ಚಿಸುವುದು
4. ಬಿಜೆಪಿಗೆ ಗೆಲುವ ಅವಶ್ಯಕತೆ ಇರುವ ಕಡೆ ಬೋಗಸ್ ವೋಟಿಂಗ್ ಟಾರ್ಗೆಟ್ ಮಾಡುವುದು
5. ಸಾಕ್ಷ್ಯವನ್ನು ಮುಚ್ಚಿಡುವುದು

ಈ 5 ಹಂತದ ಮಾಡೆಲ್ ಮಹಾರಾಷ್ಟ್ರದ 288 ಕ್ಷೇತ್ರಗಳಲ್ಲಿ 235 ಕ್ಷೇತ್ರಗಳನ್ನ ಎನ್‌ಡಿಎ ಗೆದ್ದಿದೆ. ಚುನಾವಣೆಯಲ್ಲಿ ಬಿಜೆಪಿ ಪಕ್ಷವೇ 132 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ದಾಖಲಿಸಿತ್ತು. ಇದಕ್ಕೆಲ್ಲಾ ಈ 5 ಹಂತದ ಬಿಜೆಪಿ ಕಾರ್ಯತಂತ್ರವೇ ಕಾರಣ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

publive-image

ಇನ್ನು ಮುಂದುವರಿದು ಮಾತನಾಡಿದ ರಾಹುಲ್ ಗಾಂಧಿ ಅವರು ನಾನು ಸಣ್ಣ ಮಟ್ಟದ ಚೀಟಿಂಗ್ ಬಗ್ಗೆ ಮಾತನಾಡುತ್ತಿಲ್ಲ. ನಮ್ಮ ರಾಷ್ಟ್ರೀಯ ಸಂಸ್ಥೆಗಳನ್ನು ದೊಡ್ಡ ಮಟ್ಟದಲ್ಲಿ ಆಕ್ರಮಿಸಿಕೊಳ್ಳುವ ಬಗ್ಗೆ ಮಾತನಾಡುತ್ತಿರುವೆ.

ಇದನ್ನೂ ಓದಿ: ನೀರಿಗಾಗಿ ಅಂಗಲಾಚುತ್ತಿದೆ ಪಾಕಿಸ್ತಾನ; 4 ಪತ್ರ ಬರೆದು ಭಿಕ್ಷೆ ಕೇಳಿದ್ದಕ್ಕೆ ಭಾರತದ ದಿಟ್ಟ ಉತ್ತರ 

2019ರಲ್ಲಿ 8.98 ಕೋಟಿ ಮತದಾರರಿದ್ದರು. ಆದರೆ 2024ರ ವೇಳೆಗೆ 9.29 ಕೋಟಿ ಮತದಾರರಿದ್ದರು. 5 ವರ್ಷದಲ್ಲಿ 31 ಲಕ್ಷ ಮತದಾರರ ಸಂಖ್ಯೆ ಹೆಚ್ಚಾಗಿತ್ತು. 2024ರ ಮೇ ತಿಂಗಳಿನಿಂದ ನವೆಂಬರ್ ವೇಳೆಗೆ 41 ಲಕ್ಷ ಮತದಾರರ ಸಂಖ್ಯೆ ಹೆಚ್ಚಳವಾಗಿತ್ತು. ಹೀಗೆ ಮಹಾರಾಷ್ಟ್ರದಲ್ಲಿ ನಕಲಿ ಮತದಾರರ ಮೂಲಕ ಎನ್‌ಡಿಎ ಗೆದ್ದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment