newsfirstkannada.com

BIG BREAKING: ರಾಹುಲ್ ಗಾಂಧಿಗೆ ಬಿಗ್​ ರಿಲೀಫ್; ಅನರ್ಹತೆ ಶಿಕ್ಷೆಯಿಂದ ಪಾರು..!

Share :

Published August 4, 2023 at 1:41pm

Update August 4, 2023 at 2:05pm

    ಹೇಳಿಕೆಗಳನ್ನು ಎಚ್ಚರಿಕೆಯಿಂದ ಕೊಡಬೇಕು-ಸುಪ್ರೀಂ ಎಚ್ಚರಿಕೆ

    ರಾಹುಲ್ ಗಾಂಧಿ ವಿಧಿಸಿದ ಶಿಕ್ಷೆಗೆ ತಡೆಯಾಜ್ಞೆ ಕೊಟ್ಟ ಸುಪ್ರೀಂ

    ರಾಹುಲ್ ಗಾಂಧಿ ಸಂಸದರಾಗಿ ಮತ್ತೆ ಮುಂದುವರಿಯಲಿದ್ದಾರೆ

‘ಮೋದಿ ಎಂಬ ಸರ್ ನೇಮ್ ಹೊಂದಿರೋರೆಲ್ಲ ಕಳ್ಳರೇ’ ಎಂಬ ಹೇಳಿಕೆ ನೀಡಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್​ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಇದೀಗ ರಾಹುಲ್ ಗಾಂಧಿ ಸಂಸದ ಸ್ಥಾನದ ಅನರ್ಹತೆಯಿಂದ ಬಚಾವ್ ಆಗಿದ್ದು, ಕೇರಳದ ವೈಯನಾಡು ಲೋಕಸಭೆ ಕ್ಷೇತ್ರದ ಸಂಸದರಾಗಿ ಮುಂದುವರಿಯಲಿದ್ದಾರೆ.

ರಾಹುಲ್​ ಕಿವಿ ಹಿಂಡಿದ ಸುಪ್ರೀಂ

ನೀವು ಹೇಳಿಕೆಗಳನ್ನು ನೀಡುವಾಗ ಎಚ್ಚರಿದಿಂದ ಮಾತನಾಡಬೇಕು. ಅಂದಿನ ನಿಮ್ಮ ಹೇಳಿಕೆ ಒಳ್ಳೆಯ ಉದ್ದೇಶದಿಂದ ಕೂಡಿರಲಿಲ್ಲ. ಇನ್ಮುಂದೆ ಜಾಗೃತೆ ವಹಿಸಿ. ನಿಮ್ಮನ್ನು ಸಂಸದ ಸ್ಥಾನದಿಂದ ಅನರ್ಹತೆ ಮಾಡೋದ್ರಿಂದ ನಷ್ಟ ಆಗಲಿದೆ ಎಂದ ಸುಪ್ರೀಂ ಕೋರ್ಟ್​, ಜೈಲು ಶಿಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.  ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಸಂಸದ ಸ್ಥಾನದಿಂದ ಮುಂದುವರಿಯಲಿದ್ದಾರೆ. ಅನರ್ಹತೆಯಿಂದ ಪಾರಾಗಿದ್ದಾರೆ. ರಾಹುಲ್ ಗಾಂಧಿ ಮತ್ತೆ ಲೋಕಸಭಾ ಚುನಾವಣೆಗೂ ಸ್ಪರ್ಧಿಸಬಹುದಾಗಿದೆ.

ರಾಹುಲ್ ಗಾಂಧಿ ಕೋರ್ಟ್​ನಲ್ಲಿ ಹೇಳಿದ್ದೇನು..? 

ನಾನು ಮೋದಿ ಸರ್ ನೇಮ್ ಹೇಳಿಕೆಗೆ ಕ್ಷಮೆ ಕೇಳಲ್ಲ. ಮೋದಿ ಹೆಸರಿನ ಯಾವುದೇ ಸಮುದಾಯ, ಸಮಾಜ ಇಲ್ಲ. ಹೀಗಾಗಿ ಸಮುದಾಯ, ಸಮಾಜಕ್ಕೆ ಮಾನನಷ್ಟ ಎಂಬುವುದು ‌ತಪ್ಪು. ಮಾಡದ ತಪ್ಪಿಗೆ ಕ್ಷಮೆ ಕೇಳುವಂತೆ ಆಗ್ರಹಿಸುವುದು ನ್ಯಾಯಾಂಗ ವ್ಯವಸ್ಥೆಯ ದುರುಪಯೋಗ. ಕೇಸ್ ರದ್ದುಪಡಿಸಿ ಲೋಕಸಭಾ ಸದಸ್ಯರಾಗಿ ಮುಂದುವರಿಯಲು ಅವಕಾಶ ನೀಡಬೇಕು. ಒಂದು ವೇಳೆ ಹೇಳಿಕೆಗೆ ಕ್ಷಮೆ ಕೇಳುವುದಾಗಿದ್ದರೆ ಹಿಂದೆಯೇ ಕೇಳುತ್ತಿದ್ದೆ. ಮೋದಿ ಸರ್ ನೇಮ್ ಹೊಂದಿರುವವರು ಭಿನ್ನಭಿನ್ನ ಸಮುದಾಯ, ಸಮಾಜಕ್ಕೆ ಸೇರಿದ್ದಾರೆ. ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಕ್ಸಿ ಒಂದೇ ಜಾತಿಗೆ ಸೇರಿಲ್ಲ ಎಂದು ಒಪ್ಪಿಕೊಳ್ಳಲಾಗಿದೆ.

ದೂರುದಾರ ಪೂರ್ಣೇಶ್ ಮೋದಿ ಹಾಗೂ ಮೋದಿ ವಾಮಿಕ ಸಮಾಜಕ್ಕೆ ಸೇರಿದ್ದಾರೆ. ಮೋದಿ ಸರ್ ನೇಮ್ ಬೇರೆ ಜಾತಿಗಳಲ್ಲಿಯೂ ಇದೆ ಎಂದು ಪೂರ್ಣೇಶ್ ಮೋದಿ ಒಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿಯ ವಿರುದ್ಧ ಎದುರಾಳಿ ರಾಜಕೀಯ ಪಕ್ಷದ ನಾಯಕರು‌ ಕೇಸ್​ಗಳನ್ನು ಹಾಕಿದ್ದಾರೆ. ಯಾವುದೇ ಕೇಸ್ ನಲ್ಲೂ ರಾಹುಲ್ ಗಾಂಧಿ ಅಪರಾಧಿ ಎಂದು ತೀರ್ಪು ಬಂದಿಲ್ಲ ಎಂದು ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್​ಗೆ ಹೇಳಿದ್ದರು.

ಏನಿದು ಕೇಸ್..?

2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ, ಕರ್ನಾಟಕದ ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದ್ದರು. ಎಲ್ಲಾ ಕಳ್ಳರ ಉಪನಾಮ ಮೋದಿ ಎಂದು ಹೇಗೆ ಬರುತ್ತದೆ ಅಂತಾ ಪ್ರಶ್ನೆ ಮಾಡಿದ್ದರು. ರಾಹುಲ್ ಗಾಂಧಿಯ ಈ ಹೇಳಿಕೆ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಲಾಗಿತ್ತು.

ವಿಚಾರಣೆ ನಡೆಸಿದ್ದ ಸೂರತ್‌ನ ಸಿಜೆಎಂ (Surat Chief Judicial Magistrate) ಕೋರ್ಟ್​, ರಾಹುಲ್ ಗಾಂಧಿಗೆ ಮಾರ್ಚ್​ 23 ರಂದು ಎರಡು ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಿ, ದಂಡ ಕೂಡ ವಿಧಿಸಿತ್ತು. ಈ ತೀರ್ಪು ಬೆನ್ನಲ್ಲೇ ರಾಹುಲ್ ಗಾಂಧಿಯ ಲೋಕಸಭಾ ಸದಸ್ಯತ್ವವೂ ರದ್ದಾಗಿತ್ತು. ಸಿಜೆಎಂ ಕೋರ್ಟ್​ನ ತೀರ್ಪನ್ನು ರಾಹುಲ್ ಗಾಂಧಿ, ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಕೋರ್ಟ್ ತೀರ್ಪನ್ನು ಪರಿಶೀಲಿಸಿ, ಜೈಲು ಶಿಕ್ಷೆಗೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲಿ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಏಪ್ರಿಲ್ 25 ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್​, ಜುಲೈ 7 ರಂದು ತೀರ್ಪು ಪ್ರಕಟಿಸಿತ್ತು. ರಾಹುಲ್ ಗಾಂಧಿಗೆ ಕೆಳ ನ್ಯಾಯಾಲಯವು ನೀಡಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIG BREAKING: ರಾಹುಲ್ ಗಾಂಧಿಗೆ ಬಿಗ್​ ರಿಲೀಫ್; ಅನರ್ಹತೆ ಶಿಕ್ಷೆಯಿಂದ ಪಾರು..!

https://newsfirstlive.com/wp-content/uploads/2023/07/Rahul-Gandhi.jpg

Load More