newsfirstkannada.com

VIDEO: ದೇವಸ್ಥಾನಕ್ಕೆ ಹೋಗಲು ರಾಹುಲ್​​ ಗಾಂಧಿಗೆ ಅವಕಾಶ ನೀಡದ ಬಿಜೆಪಿ ಸರ್ಕಾರ!

Share :

Published January 22, 2024 at 4:41pm

  ರಾಮಲಲ್ಲಾ ಪ್ರತಿಷ್ಠಾಪನೆ ಹೊತ್ತಲ್ಲೇ ಭಾರತ್ ಜೋಡೋ ನ್ಯಾಯ ಯಾತ್ರೆ

  ರಾಹುಲ್​ ಗಾಂಧಿಗೆ ಅಸ್ಸಾಂನ ದೇಗುಲವೊಂದರ ಪ್ರವೇಶಕ್ಕೆ ಅನುಮತಿ ಇಲ್ಲ

  ಪ್ರವೇಶ ನಿರಾಕರಣೆ ಬೆನ್ನಲ್ಲೇ ಆಕ್ರೋಶಗೊಂಡ ರಾಹುಲ್​ ಗಾಂಧಿ ಏನಂದ್ರು?

ಅಸ್ಸಾಂ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹೊತ್ತಲ್ಲೇ ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಸುತ್ತಿರೋ ಕಾಂಗ್ರೆಸ್​ ವರಿಷ್ಠ ರಾಹುಲ್​ ಗಾಂಧಿ ಅವರಿಗೆ ಅಸ್ಸಾಂನ ದೇಗುಲವೊಂದರ ಪ್ರವೇಶಕ್ಕೆ ಅನುಮತಿ ನಿರಾಕರಣೆ ಮಾಡಲಾಗಿದೆ. ನಾಗೋನ್‌ ಪ್ರಾಂತ್ಯದ ಅಸ್ಸಾಂ ಸಂತ ಸ್ರೀಮಂತ ಸಂಕರ್‌ ದೇವಾ ಜನ್ಮಸ್ಥಳ ಎಂದೇ ಕರೆಯೋ ಬಟದ್ರವ ಸತ್ರಾ ದೇಗುಲಕ್ಕೆ ರಾಹುಲ್​ ಗಾಂಧಿಗೆ ಪ್ರವೇಶ ನಿರಾಕರಿಸಲಾಗಿದೆ.

ಇನ್ನು, ಪ್ರವೇಶ ನಿರಾಕರಣೆ ಬೆನ್ನಲ್ಲೇ ಆಕ್ರೋಶಗೊಂಡ ರಾಹುಲ್​ ಗಾಂಧಿ, ನಾನು ದೇಗುಲಕ್ಕೆ ಹೋಗಬೇಕು ಎಂದು ಬಯಸಿದ್ದೇನೆ. ಆದರೆ, ನನಗೆ ಅವಕಾಶ ನೀಡುತ್ತಿಲ್ಲ. ನಾನು ಮಾಡಿದ ತಪ್ಪೇನು? ಎಂದು ದೇಗುಲ ಆಡಳಿತ ಮಂಡಳಿಗೆ ಪ್ರಶ್ನೆ ಕೇಳಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ. ಇಲ್ಲಿಗೆ ಯಾವುದೇ ಸಮಸ್ಯೆ ಸೃಷ್ಟಿಸಲು ಬಂದಿಲ್ಲ. ಕೇವಲ ಪ್ರಾರ್ಥನೆ ಸಲ್ಲಿಸಿ ಪೂಜೆ ಮಾಡಲು ಬಂದಿದ್ದೇವೆ. ದೇಗುಲ ಪ್ರವೇಶಕ್ಕೆ ಅನುಮತಿ ನೀಡುವತನಕ ಎಲ್ಲಿಗೂ ಹೋಗಲ್ಲ ಎಂದಿದ್ದಾರೆ ರಾಹುಲ್​.

ಅನುಮತಿ ನಿರಾಕರಣೆ ಯಾಕೆ..?

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಇದೆ. ಭದ್ರತಾ ಕಾರಣಗಳಿಂದಾಗಿ ರಾಹುಲ್​ ಗಾಂಧಿ ಅವರಿಗೆ ಭಾರತ್ ಜೋಡೋ ನ್ಯಾಯ ಯಾತ್ರೆ ಮಾರ್ಗ ಬದಲಾವಣೆ ಮಾಡಿ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಸರ್ಮಾ ಮನವಿ ಮಾಡಿದ್ದಾರೆ ಎಂದು ವರಿದಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ದೇವಸ್ಥಾನಕ್ಕೆ ಹೋಗಲು ರಾಹುಲ್​​ ಗಾಂಧಿಗೆ ಅವಕಾಶ ನೀಡದ ಬಿಜೆಪಿ ಸರ್ಕಾರ!

https://newsfirstlive.com/wp-content/uploads/2024/01/Rahul-Gandhi.jpg

Load More