ಮೋದಿ ಟೀಕಿಸೋ ಭರದಲ್ಲಿ ರಾಗಾ ಯಡವಟ್ಟು?ಬ್ಯಾನ್ ಆದ ಚೀನಿ ಡ್ರೋನ್ ಹಾರಿಸಿದ ರಾಹುಲ್​

author-image
Gopal Kulkarni
Updated On
ಮೋದಿ ಟೀಕಿಸೋ ಭರದಲ್ಲಿ ರಾಗಾ ಯಡವಟ್ಟು?ಬ್ಯಾನ್ ಆದ ಚೀನಿ ಡ್ರೋನ್ ಹಾರಿಸಿದ ರಾಹುಲ್​
Advertisment
  • ಮೋದಿ ಕಾಲೆಳೆಯೋ ಭರದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡರಾ ರಾಗಾ?
  • ನಿಷೇಧಿತ ಚೀನಾದ ಡ್ರೋಣ್ ಹಾರಿಸಿ ಮತ್ತೊಮ್ಮೆ ವಿವಾದದಲ್ಲಿ ವಿಪಕ್ಷ ನಾಯಕ?
  • ರಾಹುಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಮಿತ್ ಶಾ ಮಾಡಿದ ಆರೋಪವೇನು?

ಚೀನಾ ನಮ್ಮ ಶತೃವಲ್ಲ ಅಂತಾ ಕಾಂಗ್ರೆಸ್ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಹೇಳಿಕೆ ನೀಡಿರೋದು ವಿವಾದದ ಜ್ವಾಲೆ ಎಬ್ಬಿಸಿದೆ. ವಿರೋಧಿಗಳಿಗೂ ರಾಜಕೀಯ ಅಸ್ತ್ರವಾಗಿದೆ. ಈ ನಡುವೆ ರಾಹುಲ್ ಗಾಂಧಿ ಕೂಡ ಚೀನಾ ವಿಚಾರವಾಗಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಅದಕ್ಕೆ ಕಾರಣ ಆ ಡ್ರೋನ್. ಇದೇ ಫೆಬ್ರವರಿ 15ರಂದು ರಾಹುಲ್‌ ಗಾಂಧಿ ಡಿಜೆಐ ಡ್ರೋನ್‌ ಹಾರಿಸಿದ್ದರು. ನೀವಿಗ ನೋಡ್ತಿರೋದು ಅದೇ ದೃಶ್ಯವನ್ನ. ಹೀಗೆ ಡ್ರೋನ್ ಹಾರಿಸೋ ಮೂಲಕ ರಾಹುಲ್‌ ಗಾಂಧಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ.

ಡ್ರೋನ್ ಹಾರಿಸಿದ್ದ ರಾಹುಲ್​ ಗಾಂಧಿ ಮಾಡಿರೋ ವಿಡಿಯೋದಲ್ಲಿ ಪ್ರಧಾನಿ ಮೋದಿ ವಿರುದ್ಧ ಟೀಕೆ ಮಾಡಿದ್ದರು. ನಮ್ಮ ಪ್ರತಿಸ್ಪರ್ಧಿಗಳು ಹೊಸ ಹೊಸ ತಂತ್ರಜ್ಞಾನಗಳನ್ನ ಅಳವಡಿಸಿಕೊಳ್ತಿದ್ದಾರೆ. ಈಗ ನಡೀತಿರೋ ಯುದ್ಧದಲ್ಲಿ ಡ್ರೋನ್​ಗಳ ಬಳಕೆ ಹೆಚ್ಚಾಗಿದೆ. ಆದ್ರೆ ಪ್ರಧಾನಿ ಮೋದಿ ಸರ್ಕಾರ, ಇಂತಹ ಡ್ರೋನ್‌ ಬಳಕೆಯ ಲಾಭ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಟೆಲಿಪ್ರಾಮ್ಟರ್‌ ಭಾಷಣ ಮಾಡೋದ್ರಲ್ಲೇ ಬ್ಯುಸಿ ಇದ್ದಾರೆ ಅಂತಾ ರಾಹುಲ್ ಕುಟುಕಿದ್ರು. ಈ ವೇಳೆ ಡ್ರೋನ್ ಹಾರಿಸಿ ಕೌಂಟರ್ ಕೊಟ್ಟಿದ್ರು. ಆದ್ರೆ ಹೀಗೆ ಹಾರಿಸಿದ್ದು ನಿಷೇಧಿತ ಚೀನಿ ಡ್ರೋನ್‌.. ಇದೇ ವಿವಾದಕ್ಕೆ ಕಾರಣವಾಗಿದೆ.

publive-image

ಭಾರತದ ಡ್ರೋನ್ ಉದ್ಯಮಕ್ಕೆ ರಾಹುಲ್​ ಅವಮಾನ
ರಾಹುಲ್​ ಗಾಂಧಿಯ ಮಾತುಗಳು ಡ್ರೋನ್ ಫೆಡರೇಶನ್ ಆಫ್ ಇಂಡಿಯಾದ ಆಕ್ರೋಶಕ್ಕೆ ಕಾರಣವಾಗಿದೆ ದೇಶದ ಡ್ರೋನ್ ಉದ್ಯಮಕ್ಕೆ ಅವಮಾನ ಮಾಡಿದ್ದಾಗಿ ಸಿಡಿಗುಂಡು ಸಿಡಿದಿದೆ.

ಭಾರತದಲ್ಲಿ ಡ್ರೋನ್‌ಗಳನ್ನು ತಯಾರಿಸುವ 400ಕ್ಕೂ ಹೆಚ್ಚು ಕಂಪನಿಗಳಿವೆ. ಅಲ್ಲಿ ಅನೇಕ ರೀತಿಯ ಡ್ರೋನ್​ಗಳನ್ನ ತಯಾರಿಸಲಾಗುತ್ತೆ.. ಇದಲ್ಲದೆ 50ಕ್ಕೂ ಹೆಚ್ಚು ಡ್ರೋನ್ ಘಟಕ ಕಂಪನಿಗಳು ಭಾರತದಲ್ಲಿವೆ. ಬ್ಯಾಟರಿಗಳು, ಮೋಟಾರ್‌ಗಳು, ಪ್ರೊಪೆಲ್ಲರ್‌ಗಳು, ಫ್ಲೈಟ್ ಕಂಟ್ರೋಲರ್‌ಗಳು, GNSS ಮತ್ತು ಇತರ ಘಟಕಗಳನ್ನು ತಯಾರಿಸುತ್ತವೆ. ಭಾರತೀಯ ಪರಿಸರ ವ್ಯವಸ್ಥೆಗೆ ಡ್ರೋನ್ ಭಾಗಗಳನ್ನು ತಯಾರಿಸುವ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ ಎಂಬ ಹೇಳಿಕೆ ತುಂಬಾ ವಿಚಿತ್ರವಾಗಿದೆ. ಇದು ಇಡೀ ಭಾರತೀಯ ಪರಿಸರ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.

ಇದನ್ನೂ ಓದಿ:ಮಾರ್ಚ್ ನಂತರ ಸಚಿವ ಸಿದ್ದು ಸಂಪುಟಕ್ಕೆ ಸರ್ಜರಿ? ಕ್ಯಾಬಿನೆಟ್ ಎಕ್ಸ್​ಪ್ಯಾನ್ಶನ್ ಸುಳಿವು ಕೊಟ್ಟ ಕುಲಕರ್ಣಿ

ಹೀಗೆ ಆಕ್ರೋಶ ವ್ಯಕ್ತಪಡಿಸಿರೋ ಸ್ಮಿತ್ ಶಾ, DJI ಡ್ರೋನ್‌ಗಳ ಆಮದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಹೀಗಿದ್ರೂ ರಾಹುಲ್ ಗಾಂಧಿ ಹಾರಿಸಿದ ಡ್ರೋನ್ ಬಂದಿದ್ದು ಎಲ್ಲಿಂದ? ಅದಕ್ಕೆ ಲೈಸೆನ್ಸ್ ಇದ್ಯಾ ಅಂತಾ ಪ್ರಶ್ನಿಸಿದ್ದಾರೆ.

publive-image

ಚೀನಾ ನಮ್ಮ ಶತ್ರುವಲ್ಲ ಅಂತಾ ಕಾಂಗ್ರೆಸ್ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಹೇಳಿಕೆ ವಿವಾದದ ಸುನಾಮಿ ಎಬ್ಬಿಸಿರೋ ನಡುವೆ ರಾಹುಲ್ ಗಾಂಧಿ ಚೀನಾ ಡ್ರೋನ್ ಹಾರಿಸಿರೋದು ಚರ್ಚೆಗೆ ಕಾರಣವಾಗಿದೆ. ಸಾಕಷ್ಟು ಪ್ರಶ್ನೆಗಳು ಉದ್ಭವಿಸಿದೆ. ಆರೋಪಗಳು ಕೇಳೀ ಬಂದಿದೆ. ಇದಕ್ಕೆಲ್ಲಾ ರಾಹುಲ್ ಗಾಂಧಿ ಏನ್ ಉತ್ತರ ಕೊಡ್ತಾರೆ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment