newsfirstkannada.com

ರಾಮಮಂದಿರ ಸಮಾರಂಭ ಬಹಿಷ್ಕಾರ ಸಮರ್ಥಿಸಿಕೊಂಡ ರಾಹುಲ್ ಗಾಂಧಿ.. RSS-BJP ಕಾರ್ಯಕ್ರಮ ಎಂದು ಕಿಡಿ!

Share :

Published January 17, 2024 at 6:46am

  100 ದೇವಾಲಯಗಳಿಗೆ ತೆರಳಲು ಕಾಂಗ್ರೆಸ್​​ ಮಹಾ ಪ್ಲಾನ್​​​

  ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕೇವಲ 5 ದಿನಗಳು ಬಾಕಿ

  ಬಸ್​​​ನಲ್ಲಿ ಪ್ರಯಾಣಿಸಲು ವಿಶೇಷ ಟಿಕೆಟ್​​ ಘೋಷಣೆ

ರಾಮಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗದಿರುವಂತೆ ಈಗಾಗಲೇ ಕಾಂಗ್ರೆಸ್​​​ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರದ ಬಗ್ಗೆ ಚರ್ಚೆಗಳು ಮತ್ತು ರಾಜಕೀಯ ವಾಕ್ಸಮರ ನಡೀತಾ ಇರುವಂತಯೇ, ಮೊದಲ ಬಾರಿಗೆ ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ನಿಲುವನ್ನ ಅವರು ಸಮರ್ಥಿಸಿಕೊಂಡಿದ್ದು ಇದು ಬಿಜೆಪಿಯ ರಾಜಕೀಯ ಕಾರ್ಯಕ್ರಮ ಎಂದು ಹೇಳಿದ್ದಾರೆ.

ಇದು ಆರ್​​ಎಸ್​​ಎಸ್​​​, ಮೋದಿ ಪಂಕ್ಷನ್​​ ಎಂದು ವಾಗ್ದಾಳಿ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಕೇವಲ 5 ದಿನ ಬಾಕಿ ಉಳಿದಿದೆ. ಸಾವಿರಾರು ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಆದ್ರೆ ಕಾಂಗ್ರೆಸ್​​ ಮಾತ್ರಾ ಇದು ಒಂದು ಪಕ್ಷದ ರಾಜಕೀಯ ಪ್ರೇರಿತ ಕಾರ್ಯಕ್ರಮ ಎಂದು ಬಾಲರಾಮನ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಗೈರಾಗಲು ಕಾಂಗ್ರೆಸ್​​ ತಿರ್ಮಾನಿಸಿದೆ. ಇದೇ ವಿಚಾರವಾಗಿ ಮೊದಲ ಬಾರಿಗೆ ಮಾತನಾಡಿರುವ ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಅವರು,  ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮ ಮೋದಿ ಕಾರ್ಯಕ್ರಮ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಈ ಮೂಲಕ ಕಾಂಗ್ರೆಸ್ ಪಕ್ಷ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದನ್ನು ರಾಹುಲ್ ಗಾಂಧಿ ಸಮರ್ಥಿಸಿಕೊಂಡಿದ್ದಾರೆ. ಸದ್ಯ ರಾಹುಲ್​​ ಗಾಂಧಿಯವರು ಭಾರತ್​​ ಜೋಡೋ ರೀತಿಯ 2ನೇ ಹಂತದ ಯಾತ್ರೆ , ಭಾರತ್​​ ನ್ಯಾಯ ಯಾತ್ರೆಯಲ್ಲಿದ್ದಾರೆ.

ಆರ್​ಎಸ್‌ಎಸ್ ಮತ್ತು ಬಿಜೆಪಿಯು ಜನವರಿ 22 ರಂದು ಕಾರ್ಯಕ್ರಮವನ್ನು ಸಂಪೂರ್ಣ ಮೋದಿ ರಾಜಕೀಯ ಕಾರ್ಯಕ್ರಮವಾಗಿ ಮಾಡಿದೆ. ಇದು ಆರ್​ಎಸ್‌ಎಸ್- ಬಿಜೆಪಿ ಕಾರ್ಯಕ್ರಮ. ಬಹುಶಃ ಇದಕ್ಕೆ ಕಾಂಗ್ರೆಸ್ ಅಧ್ಯಕ್ಷರು ಈ ಕಾರ್ಯಕ್ರಮಕ್ಕೆ ತೆರಳುವುದಿಲ್ಲ. ನಾವು ಎಲ್ಲ ಧರ್ಮೀಯರಿಗೆ, ಎಲ್ಲ ಆಚರಣೆಗಳಿಗೆ ಮುಕ್ತರಾಗಿದ್ದೇವೆ. ಹಿಂದೂ ಧರ್ಮದ ಹಿರಿಯ ಮುಖಂಡರೂ ಕೂಡಾ ಜನವರಿ 22ರ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದು ರಾಜಕೀಯ ಕಾರ್ಯಕ್ರಮ ಅಲ್ಲವೇ?

-ರಾಹುಲ್​ ಗಾಂಧಿ

ಯಾತ್ರೆಗಾಗಿ ‘ಮೊಹಬ್ಬತ್​​ ಕಿ ದುಕಾನ್​’ ಬಸ್

ಮಣಿಪುರದಿಂದ ಆರಂಭವಾದ ರಾಹುಲ್​ ಗಾಂಧಿ ನೇತೃತ್ವದ ಭಾರತ್​​​ ಜೋಡೋ ಯಾತ್ರೆ ನ್ಯಾಗಲ್ಯಾಂಡ್​​ ತಲುಪಿದೆ. ಕಾಲ್ನಡಿಗೆ ಮತ್ತು ಬಸ್​​ ಮೂಲಕ ಯಾತ್ರೆ ಸಾಗುತ್ತಿದ್ದು, ಇದಕ್ಕಾಗಿ ವಿಶೇಷ ರೀತಿಯಲ್ಲಿ ಬಸ್​​ ವಿನ್ಯಾಗೊಳಿಸಲಾಗಿದ್ದು. ಈ ಬಸ್​​​ನಲ್ಲಿ ಪ್ರಯಾಣಿಸಬೇಕು ಎಂದುಕೊಂಡವರಿಗೆ ರಾಹುಲ್​​ ಗಾಂಧಿ ಚಿತ್ರ ಮತ್ತು ಅವರ ಸಹಿ ಇರುವ ವಿಶೇಷ ಟಿಕೆಟ್​​ ಅನ್ನು ಕೊಡಲು ಕಾಂಗ್ರೆಸ್​​ ಪಕ್ಷ ನಿರ್ಧರಿಸಿದೆ.

ನೂರಾರು ದೇವಾಲಯಗಳಿಗೆ ತೆರಳಲು ಕಾಂಗ್ರೆಸ್​​ ಪ್ಲಾನ್​​​!

ಇನ್ನು, ಭಾರತ್​ ಜೋಡೋ ನ್ಯಾಯ ಯಾತ್ರೆ ಪೂರ್ವದಿಂದ ಪಶ್ಚಿಮದ 15 ರಾಜ್ಯಗಳಲ್ಲಿ 110 ಜಿಲ್ಲೆಗಳಲ್ಲಿ ಸುಮಾರು 6, 713 ಕಿಲೋ ಮೀಟರ್​​ ಸಾಗಲಿದೆ. ಅಯೋಧ್ಯೆ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಇದ್ರೂ ಯಾತ್ರೆಯ ಸಂದರ್ಭದಲ್ಲಿ ಪಕ್ಷದ ನಾಯಕರು ನೂರಾರು ದೇವಾಲಯಗಳಿಗೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆ ಸಮಾರಂಭಕ್ಕೆ ಇಡೀ ವಿಶ್ವವೇ ಕಾದು ಕುಳಿತ್ತಿದೆ. ಇದೇ ವೇಳೆ ಕಾಂಗ್ರೆಸ್​​​ ರಾಮಮಂದಿರ ಕಾರ್ಯಕ್ರಮದ ಆಹ್ವಾನ ತಿರಸ್ಕರಿಸಿರುವುದು ರಾಮಭಕ್ತರು ಮತ್ತು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಮಂದಿರ ಸಮಾರಂಭ ಬಹಿಷ್ಕಾರ ಸಮರ್ಥಿಸಿಕೊಂಡ ರಾಹುಲ್ ಗಾಂಧಿ.. RSS-BJP ಕಾರ್ಯಕ್ರಮ ಎಂದು ಕಿಡಿ!

https://newsfirstlive.com/wp-content/uploads/2023/08/Rahul-Gandhi.jpg

Load More