/newsfirstlive-kannada/media/post_attachments/wp-content/uploads/2024/12/RAHUL-GANDI-SARANGI.jpg)
ಇಂದು ಸಂಸತ್ ಭವನದ ಎದುರು ಕಾಂಗ್ರಸ್ ಹಾಗೂ ಬಿಜೆಪಿಯ ಹೈಡ್ರಾಮಾ ನಡೆದಿದೆ. ಅಂಬೇಡ್ಕರ್ ವಿಚಾರವಾಗಿ ಅಮಿತ್ ಶಾ ಆಡಿದ ಮಾತುಗಳನ್ನು ಹಿಡಿದುಕೊಂಡು ಉಭಯ ಪಕ್ಷಗಳು ಪ್ರತಿಭಟನೆಗೆ ಮುಂದಾಗಿವೆ. ಅಮಿತ್ ಶಾ ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದರೆ,
ಬಿಜೆಪಿ ತಿರುಚಿದ ವಿಡಿಯೋ ಹಾಕಿ ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿದೆ ಎಂದು ದೂರುತ್ತಿದೆ. ಇದೇ ವಿಚಾರವಾಗಿ ಇಂದು ಸಂಸತ್ ಭವನದಲ್ಲಿ ಇಂಡಿಯಾ ಒಕ್ಕೂಟ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿಯವರನ್ನು ರಾಹುಲ್ ಗಾಂಧಿ ತಳ್ಳಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಸಂಸತ್ ಭವನದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಬಿಜೆಪಿ- ಕಾಂಗ್ರೆಸ್ ಉಭಯ ಪಕ್ಷಗಳು ದೊಡ್ಡ ಹೈಡ್ರಾಮಾ ನಡೆಸಿವೆ. ಪ್ರತಿಭಟನೆ ವೇಳೆ ಸಂಸದ ಪ್ರತಾಪ್ ಚಂದ್ರ ಸಾರಂಗಿಯವರನ್ನು ತಳ್ಳಿದ್ದಾರೆ ಎಂದು ಬಿಜೆಪಿ ಸಂಸದರು ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿ ತಳ್ಳಿದ್ದರಿಂದಲೇ ನಾನು ಆಯತಪ್ಪಿ ಬಿದ್ದಿದ್ದು ಎಂದು ಸಾರಂಗಿ ಹೇಳುತ್ತಿದ್ದಾರೆ. ಸದ್ಯ ಬಿದ್ದು ಗಾಯಗೊಂಡಿರುವ ಪ್ರತಾಪ್ ಚಂದ್ರ ಸಾರಂಗಿಯವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಾಪ್ ಚಂದ್ರ ಸಾರಂಗಿ ನಾನು ತಳ್ಳಿದ್ದರಿಂದಲೇ ಬಿದ್ದಿದ್ದು, ನನ್ನಿಂದಾಗಿಯೇ ಅವರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us