newsfirstkannada.com

‘ನೀವು ಏನಾದರೂ ಕರೆದುಕೊಳ್ಳಿ ನಾವು INDIA’- ಪ್ರಧಾನಿ ಮೋದಿ ಹೇಳಿಕೆಗೆ ರಾಹುಲ್​ ಗಾಂಧಿ ಟಾಂಗ್

Share :

Published July 25, 2023 at 8:10pm

    ಪ್ರತಿಪಕ್ಷಗಳ INDIA ಎನ್ನುವ ಒಕ್ಕೂಟಕ್ಕೆ PM ಮೋದಿ ಟೀಕೆ

    ನರೇಂದ್ರ ಮೋದಿ ಟೀಕೆಗೆ ಟಾಂಗ್​ ಕೊಟ್ಟ ರಾಹುಲ್ ಗಾಂಧಿ

    ಮಣಿಪುರದ ಹಿಂಸಾಚಾರದ ಬಗ್ಗೆ ರಾಹುಲ್ ಹೇಳಿದ್ದೇನು..?

ಪ್ರತಿಪಕ್ಷಗಳ INDIA ಒಕ್ಕೂಟದ ಹೆಸರಿನ ಬಗ್ಗೆ ಟೀಕಿಸಿದ್ದ ಪ್ರಧಾನಿ ಮೋದಿಯವರಿಗೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯವರು ತಿರುಗೇಟು ಕೊಟ್ಟಿದ್ದಾರೆ. ಮಿಸ್ಟರ್​ ಮೋದಿ ನೀವು ಏನಾದರೂ ಕರೆದುಕೊಳ್ಳಿ ನಾವು ಇಂಡಿಯಾ​​ (We are INDIA) ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿಯವರು ವಿರೋಧ ಪಕ್ಷಗಳ ಬಗ್ಗೆ ವಾಗ್ದಾಳಿ ನಡೆಸುತ್ತಿದ್ದರು. ಈ ವೇಳೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ INDIA ಎಂದು ಹೆಸರಿಡಲಾಗಿತ್ತು. ಇದಕ್ಕೆ ಇಂಡಿಯನ್ ಮುಜಾಹಿದ್ದೀನ್ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಲ್ಲೂ ಇಂಡಿಯಾ ಇದೆ ಎಂದು ನರೇಂದ್ರ ಮೋದಿ ಟೀಕಿಸಿದ್ದರು.

ಪ್ರಧಾನಿ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರು, ಮಿಸ್ಟರ್​ ಮೋದಿ ನಮ್ಮನ್ನು ಏನಾದರೂ ಕರೆದುಕೊಳ್ಳಿ, ಆದ್ರೆ ನಾವು ಇಂಡಿಯಾ​ (We are INDIA) ಎಂದಿದ್ದಾರೆ. ಹಿಂಸಾಚಾರದಲ್ಲಿ ಬೇಸತ್ತು ಹೋಗಿರುವ ಮಣಿಪುರವನ್ನು ಸುಧಾರಿಸಲು ಶ್ರಮಿಸುತ್ತೇವೆ. ಅಲ್ಲಿನ ಪ್ರತಿಯೊಬ್ಬ ಮಹಿಳೆ ಮತ್ತು ಮಗುವಿನ ಜವಾಬ್ದಾರಿ ತೆಗೆದುಕೊಂಡು ಅವರ ಕಣ್ಣೀರನ್ನು ಒರೆಸುತ್ತೇವೆ. ಮಣಿಪುರದ ಜನರಿಗೆ ಬೇಕಾದ ಪ್ರೀತಿ, ಸಂತಸ ಹಾಗೂ ಶಾಂತಿಯನ್ನು ಪುನರ್​ ಸ್ಥಾಪಿಸಿ ಆ ರಾಜ್ಯದ ಭಾರತದ ಕಲ್ಪನೆಯನ್ನು ಮರುನಿರ್ಮಾಣ ಮಾಡುತ್ತೇವೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನೀವು ಏನಾದರೂ ಕರೆದುಕೊಳ್ಳಿ ನಾವು INDIA’- ಪ್ರಧಾನಿ ಮೋದಿ ಹೇಳಿಕೆಗೆ ರಾಹುಲ್​ ಗಾಂಧಿ ಟಾಂಗ್

https://newsfirstlive.com/wp-content/uploads/2023/07/RAHUL_GANDHI_MODI.jpg

Load More