newsfirstkannada.com

‘ರಾಹುಲ್ ಗಾಂಧಿ ಪ್ರಧಾನಮಂತ್ರಿ ಸ್ಥಾನದ ಅಭ್ಯರ್ಥಿ’ ಎಂದ ಗೆಹ್ಲೋಟ್; INDIA ಕೂಟದಲ್ಲಿ ಹೊಸ ಸಂಚಲನ..!

Share :

27-08-2023

    INDIA ಒಕ್ಕೂಟದಲ್ಲಿ ತೀರ್ಮಾನ ಮಾಡಿದ್ದೇವೆ ಎಂದ ಗೆಹ್ಲೋಟ್

    ಭಾರೀ ಚರ್ಚೆಗೆ ಕಾರಣವಾಗಿದೆ ಅಶೋಕ್ ಗೆಹ್ಲೋಟ್​ ಸ್ಟೇಟ್​​ಮೆಂಟ್

    26 ಪಕ್ಷಗಳ INDIA ಕೂಟದ ಪ್ರಧಾನಿ ಕ್ಯಾಂಡಿಡೇಟ್ ರಾಹುಲ್ ಪಕ್ಕಾನಾ?

2024ರ ಲೋಕಸಭೆ ಚುನಾವಣೆಯಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್​ನ ಪ್ರಧಾನಮಂತ್ರಿ ಸ್ಥಾನದ ಅಭ್ಯರ್ಥಿ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಣೆ ಮಾಡಿದ್ದಾರೆ. 26 ಪಕ್ಷಗಳ INDIA ಒಕ್ಕೂಟದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಪಕ್ಷಗಳ ಸಮಾಲೋಚನೆ ಮತ್ತು ಚರ್ಚೆ ನಡೆಸಿಯೇ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

ಪ್ರತಿ ಚುನಾವಣೆಯಲ್ಲೂ ಲೋಕಲ್ ಫ್ಯಾಕ್ಟರ್​ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಸದ್ಯದ ಪರಿಸ್ಥಿತಿ ದೇಶದ ಎಲ್ಲಾ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಸೃಷ್ಟಿಯಾಗಿದೆ ಎಂದಿದ್ದಾರೆ. ಗೆಹ್ಲೋಟ್ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

2024ಕ್ಕೆ ಲೋಕಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್​ಡಿಎ ಒಕ್ಕೂಟವನ್ನು ಸೋಲಿಸಲು ವಿಪಕ್ಷಗಳೆಲ್ಲ ಕಾಂಗ್ರೆಸ್​ ನೇತೃತ್ವದಲ್ಲಿ ಒಂದಾಗಿವೆ. ಈ ಹಿಂದೆ ಇದ್ದ ಯುಪಿಎ ಬದಲಾಗಿ, ಇಂಡಿಯಾ ಎಂದು ತಮ್ಮ ಮೈತ್ರಿಕೂಟಕ್ಕೆ ನಾಮಕರಣ ಮಾಡಿಕೊಂಡಿವೆ. ಈಗಾಗಲೇ ಹಲವು ಸಭೆಗಳನ್ನು ಮಾಡಿರುವ ಇಂಡಿಯಾ ಒಕ್ಕೂಟ ಎಲ್ಲಿಯೂ ಪ್ರಧಾನಮಂತ್ರಿ ಅಭ್ಯರ್ಥಿ ಬಗ್ಗೆ ತುಟಿ ಬಿಚ್ಚಿಲ್ಲ. ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ರಾಹುಲ್ ಗಾಂಧಿ ಹೆಸರುಗಳು ಪ್ರಧಾನಿ ಸ್ಥಾನದ ರೇಸ್​ನಲ್ಲಿ ಕೇಳಿಬಂದಿದೆ. ಆದರೆ ಈ ಬಗ್ಗೆ ಮೈತ್ರಿಕೂಟ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಹೀಗಿದ್ದೂ ಗೆಹ್ಲೋಟ್​, ಖಾಸಗಿ ಮಾಧ್ಯಮವೊಂದಕ್ಕೆ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅಂದಿರೋದು ಚರ್ಚೆಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ರಾಹುಲ್ ಗಾಂಧಿ ಪ್ರಧಾನಮಂತ್ರಿ ಸ್ಥಾನದ ಅಭ್ಯರ್ಥಿ’ ಎಂದ ಗೆಹ್ಲೋಟ್; INDIA ಕೂಟದಲ್ಲಿ ಹೊಸ ಸಂಚಲನ..!

https://newsfirstlive.com/wp-content/uploads/2023/08/RAHULGANDHI.jpg

Load More