newsfirstkannada.com

ಅಮೆರಿಕದಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ; ದೇಶದ ಮರ್ಯಾದೆ ಹರಾಜು ಹಾಕ್ತಾರೆ ಎಂದು ಬಿಜೆಪಿಗರ ಆಕ್ರೋಶ

Share :

Published June 2, 2023 at 3:12am

  ಮೋದಿಗೆ ಬಗ್ಗೆ ರಾಹುಲ್ ಅಮೆರಿಕದಲ್ಲಿ​ ವಾಗ್ದಾಳಿ

  ವಿದೇಶಿ ನೆಲದಲ್ಲಿ ಭಾರತದ ಬಗ್ಗೆ ರಾಹುಲ್​ ಟಾಕ್​

  ರಾಹುಲ್​ ಮಾತಿಗೆ ಬಿಜೆಪಿಗರಿಂದ ಆಕ್ರೋಶ

ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಕ್ಸಮರ ಮುಂದುವರಿದಿದೆ. ಅಮೆರಿಕ ಪ್ರವಾಸದಲ್ಲಿರೋ ರಾಹುಲ್ ಗಾಂಧಿ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಲಿದ್ದಾರೆ. ನಿರುದ್ಯೋಗ ಹಾಗೂ ಸಂಸತ್​ಗೆ ಬ್ಯಾನ್​. ಸೇರಿದಂತೆ ಹಲವು ವಿಚಾರಗಳನ್ನ ಹಿಡಿದು ಕೇಂದ್ರದ ವಿರುದ್ಧ ರಾಹುಲ್​ ಮಾತಿನ ಮಿಸೈಲ್​ ಪ್ರಯೋಗಿಸಿದ್ದಾರೆ.

ವಿದೇಶಿ ನೆಲದಲ್ಲಿ ಕಾಂಗ್ರೆಸ್​ ನಾಯಕರ ರಾಹುಲ್​ ಗಾಂಧಿ, ಮೋದಿ ವಿರುದ್ಧ ಕೆಂಡ ಕೆಂಡ ಕಾರಿದ್ದಾರೆ. ಸದಾ ಒಂದಿಲ್ಲೊಂದು ಕಾಂಟ್ರವರ್ಸಿ ಮೂಲಕ ವಿವಾದಗಳನ್ನ ತಲೆ ಮೇಲೆ ಎಳೆದುಕೊಳ್ಳೋ ರಾಹುಲ್​ ಗಾಂಧಿ ಮತ್ತೆ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸದಾ ಕಿಡಿಕಾರುವ ರಾಹುಲ್​, ಮತ್ತದೇ ದಾಳಿ ಮುಂದುವರೆಸಿದ್ದಾರೆ.

ನಿರುದ್ಯೋಗ, ಕೋಮುಭಾವನೆ ಬಗ್ಗೆ ರಾಹುಲ್​ ಆಕ್ರೋಶ

ಅಮೆರಿಕಾದ ವಾಷಿಂಗ್ಟನ್‌ ಡಿಸಿಯಲ್ಲಿರೋ ನ್ಯಾಷನಲ್ ಪ್ರೆಸ್ ಕ್ಲಬ್‌ ನಲ್ಲಿ  ಮಾತನಾಡಿದ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ಬಾಣಗಳನ್ನ ಬಿಟ್ಟಿದ್ದಾರೆ. ನಿರುದ್ಯೋಗ, ಕೋಮುದ್ವೇಷ, ಮೋದಿ ಸರ್ಕಾರದ ಲೋಪದೋಷಗಳನ್ನ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲೂ ರಾಹುಲ್ ನಿರುದ್ಯೋಗ, ಬೆಲೆ ಏರಿಕೆ ದೇಶದಲ್ಲಿ ತಾಂಡವಾಡುತ್ತಿದೆ ಅಂತಾ ವಿದೇಶದಲ್ಲಿ ಕುಳಿತು ಕೇಂದ್ರದ ಬಗ್ಗೆ ಕುಹಕವಾಡಿದ್ದಾರೆ.

ರಾಹುಲ್​ ಗಾಂಧಿ, ಸಂಸದ

ಇದಷ್ಟೇ ಅಲ್ಲ. ಭಾರತದಲ್ಲಿ ಮೋದಿ ಸರ್ಕಾರ ದ್ವೇಷದ ಭಾವನೆ ಮೂಡಿಸಲು ಪ್ರಯತ್ನಿಸುತ್ತಿದೆ. ಸಮಾಜದಲ್ಲಿ ಕೋಮುಭಾವನೆ ಮೂಡಿಸಿ ಸಮಾಜವನ್ನ ಇಬ್ಭಾಗ ಮಾಡುತ್ತಿದೆ ಅಂತಲೂ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

ಇನ್ನು ಮೋದಿ ಎಂಬ ಉಪನಾಮದ ಬಗ್ಗೆ ಮಾತನಾಡಿದ್ದಕ್ಕೆ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆಯಾಗಿತ್ತು. ಅಲ್ಲದೇ ಅವರ ವಯನಾಡು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.. ಈ ಬಗ್ಗೆಯೂ ಮಾತನಾಡಿರೋ ರಾಹುಲ್​. ಬಿಜೆಪಿ ಮಾಡಿದ ಅನರ್ಹತೆಯಿಂದ ನನಗೆ ಅನುಕೂಲವಾಗಿದೆ. ಇದು ಒಂಥರಾ ಮೋದಿ ಸರ್ಕಾರ ಕೊಟ್ಟಿರೋ ಗಿಫ್ಟ್‌ ಅಂತಾ ರಾಹುಲ್ ಹೇಳಿಕೆ ನೀಡಿದ್ದಾರೆ.

ಒಟ್ಟಾರೆ ಅಮೆರಿಕ ನೆಲದಲ್ಲಿ ಕೂತು ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ನಾಯಕ ರಾಹುಲ್ ಗಾಂಧಿ ವಾಗ್ಬಾಣ ಬಿಡುತ್ತಿದ್ದಾರೆ.. ಈ ರೀತಿ ಹೇಳಿಕೆಗಳಿಂದ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಮೋದಿ ವಿರುದ್ಧ ಮಾತಿನ ಮಿಸೈಲ್‌ ಫೈರ್ ಮಾಡ್ತಿದ್ದಾರೆ.. ಆದ್ರೆ, ವಿದೇಶಕ್ಕೆ ಹೋಗಿ ಅಲ್ಲಿ ದೇಶದ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜು ಹಾಕುತ್ತಿದ್ದಾರೆ ಅನ್ನೋದು ಬಿಜೆಪಿಗರ ಅಭಿಪ್ರಾಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕದಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ; ದೇಶದ ಮರ್ಯಾದೆ ಹರಾಜು ಹಾಕ್ತಾರೆ ಎಂದು ಬಿಜೆಪಿಗರ ಆಕ್ರೋಶ

https://newsfirstlive.com/wp-content/uploads/2023/06/Rahul-Gandhi.jpg

Load More