newsfirstkannada.com

ಐಶ್ವರ್ಯ ರೈ, ಬಿಗ್​ಬಿ ಹೆಸರು ಪ್ರಸ್ತಾಪಿಸಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ..!

Share :

Published February 19, 2024 at 12:27pm

    ರಾಮ ಮಂದಿರ ವಿಚಾರಕ್ಕೆ ಮತ್ತೆ ರಾಹುಲ್ ಆಕ್ರೋಶ

    ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ವೇಳೆ ಬಿಗ್​​ಬಿ ಹೆಸರು

    ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ

ರಾಮ ಮಂದಿರ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೆ ಗುರಿಯಾಗಿಸಿ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಕೆಳಜಾತಿಗೆ ಪ್ರಾತಿನಿಧ್ಯ ನೀಡಿಲ್ಲ ಎಂದು ರಾಹುಲ್ ಆರೋಪಿಸಿದ್ದಾರೆ.

ಬಾಲಿವುಡ್ ಸ್ಟಾರ್ ಅಮಿತಬ್ ಬಚ್ಚನ್, ಐಶ್ವರ್ಯ ರೈ ಅವರಂಥ ಗಣ್ಯರಿಗೆ ಆಹ್ವಾನಿ ನೀಡಿರೋದನ್ನು ಪ್ರಸ್ತಪಾಸಿರುವ ರಾಹುಲ್ ಗಾಂಧಿ, ನೀವು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ನೋಡಿದ್ದೀರಾ? ಅಲ್ಲಿ ಯಾವುದೇ ಒಬ್ಬನೇ ಒಬ್ಬ ವ್ಯಕ್ತಿ OBC ವರ್ಗಕ್ಕೆ ಸೇರಿದವರು ಇದ್ದರಾ? ಅಲ್ಲಿದ್ದವರು ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಮತ್ತು ನರೇಂದ್ರ ಮೋದಿ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 73 ರಷ್ಟಿರುವ ಜನರು ಈ ಸಮಾರಂಭದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ದೇಶದ ಆಡಳಿತವನ್ನು ಬಿಜೆಪಿ ವಹಿಸಿಕೊಳ್ಳುವುದನ್ನು ಅವರು ಎಂದಿಗೂ ಬಯಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿದೆ. ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ಈ ರೀತಿಯ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಶ್ವರ್ಯ ರೈ, ಬಿಗ್​ಬಿ ಹೆಸರು ಪ್ರಸ್ತಾಪಿಸಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ..!

https://newsfirstlive.com/wp-content/uploads/2024/02/RAHUL-GANDHI-6.jpg

Load More