Advertisment

ರಾಹುಲ್ ಗಾಂಧಿಗೆ ಪಾಕಿಸ್ತಾನದಿಂದ ಭರ್ಜರಿ ಉಡುಗೊರೆ..? ಹೊಸ ವಿವಾದ..!

author-image
Ganesh
Updated On
ರಾಹುಲ್ ಗಾಂಧಿಗೆ ಪಾಕಿಸ್ತಾನದಿಂದ ಭರ್ಜರಿ ಉಡುಗೊರೆ..? ಹೊಸ ವಿವಾದ..!
Advertisment
  • ಕೇಂದ್ರ ಸಚಿವ ಗಿರಿರಾಜ್ ಸಿಂಗ್​ರಿಂದ ಗಂಭೀರ ಆರೋಪ
  • ಅಷ್ಟಕ್ಕೂ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಸ್ವೀಕರಿಸಿದ್ದು ಏನು?
  • ರಾಹುಲ್ ಅಷ್ಟೇ ಅಲ್ಲ, ಇನ್ನೂ ಹಲವರಿಂದ ಗಿಫ್ಟ್​ ಸ್ವೀಕರಿಸಿದ ಆರೋಪ

ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಏಳು ಸಂಸದರು ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಿಂದ ಮಾವಿನ ಹಣ್ಣುಗಳನ್ನು ಸ್ವೀಕರಿಸಿದ್ದಾರೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆರೋಪಿಸಿದ್ದಾರೆ.

Advertisment

ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಮಾತನಾಡಿರುವ ಸಚಿವ ಗಿರಿರಾಜ್ ಸಿಂಗ್, ರಾಹುಲ್ ಗಾಂಧಿ ಪಾಕಿಸ್ತಾನದ ಜೊತೆ ಸಂಬಂಧ ಇದೆ. ರಾಹುಲ್ ಗಾಂಧಿಗೆ ಯುಪಿ ಮಾವಿನ ಹಣ್ಣು ಇಷ್ಟವಿಲ್ಲ. ಕೆಲ ಸಮಯದ ಹಿಂದೆ ಅವರೇ ಹೇಳಿದ್ದನ್ನು ನಾನು ದೇಶಕ್ಕೆ ಹೇಳಲು ಬಯಸುತ್ತೇನೆ. ಪಾಕಿಸ್ತಾನದ ರಾಯಭಾರ ಕಚೇರಿ ಅವರಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದೆ. ಪಾಕಿಸ್ತಾನದ ಮಾವಿನ ಹಣ್ಣುಗಳ ಜೊತೆಗೆ ಅವರು ಪಡೆದ ಇತರ ವಸ್ತುಗಳು ಯಾವುವು? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:Big Updates: ಸುನಿತಾ ವಿಲಿಯಮ್ಸ್​ಗೆ ಮತ್ತೊಂದು ಸಂಕಷ್ಟ.. ಮತ್ತೆ ಏನಾಯ್ತು..?

ರಾಹುಲ್ ಗಾಂಧಿ ಅವರಲ್ಲದೆ, ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಮತ್ತೊಬ್ಬ ಹಿರಿಯ ನಾಯಕ ಶಶಿ ತರೂರ್ ಅವರಿಗೂ ಮಾವಿನ ಹಣ್ಣುಗಳನ್ನು ಕಳುಹಿಸಲಾಗಿದೆ. ಸಮಾಜವಾದಿ ಪಕ್ಷದ ರಾಂಪುರ ಸಂಸದ ಮೊಹಿಬುಲ್ಲಾ ನದ್ವಿ, ಸಂಭಾಲ್ ಸಂಸದ ಜಿಯಾ-ಉರ್-ರೆಹಮಾನ್ ಬರ್ಕೆ, ಕೈರಾನಾ ಸಂಸದ ಇಕ್ರಾ ಹಸನ್ ಮತ್ತು ಗಾಜಿಪುರ ಸಂಸದ ಅಫ್ಜಲ್ ಅನ್ಸಾರಿಗೂ ಪಾಕಿಸ್ತಾನದ ಹೈಕಮಿಷನ್ ಮಾವಿನ ಹಣ್ಣುಗಳನ್ನು ಉಡುಗೊರೆಯಾಗಿ ಕಳುಹಿಸಿದೆ ಎನ್ನಲಾಗಿದೆ. ಆದರೆ ಇದುವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

Advertisment

ಇದನ್ನೂ ಓದಿ:ವಿನೇಶ್ ಫೋಗಟ್ ಅನರ್ಹ; ಬ್ರಿಜ್ ಭೂಷಣ್​ರ ಇಬ್ಬರು ಮಕ್ಕಳಿಂದ ಅಚ್ಚರಿಯ ಪ್ರತಿಕ್ರಿಯೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment