newsfirstkannada.com

VIDEO: ತಲೆ ಮೇಲೆ ದಬದಬನೇ ನೀರು ಸುರಿದುಕೊಂಡ ರಾಹುಲ್ ಗಾಂಧಿ; ಮೋದಿಗೆ ಖಡಕ್ ಸವಾಲು!

Share :

Published May 28, 2024 at 6:22pm

  ಬಿರು ಬಿಸಿಲಿನಲ್ಲೂ ರಾಹುಲ್ ಗಾಧಿ ಅವರಿಂದ ಅಬ್ಬರದ ಪ್ರಚಾರ

  ಉತ್ತರ ಪ್ರದೇಶದ ದಿಯೋರಿಯೋದಲ್ಲಿ ಮೋದಿ ವಿರುದ್ಧ ಅಬ್ಬರದ ಭಾಷಣ

  ಮೋದಿಯನ್ನು ಪರಮಾತ್ಮ ಅಂಬಾನಿ, ಅದಾನಿಗೆ ಸಹಾಯ ಮಾಡಲು ಕಳಿಸಿದ್ದಾರೆ

ಲೋಕಸಭಾ ಚುನಾವಣೆಯ ಪ್ರಚಾರದ ಅಬ್ಬರ ಅಂತಿಮ ಹಂತಕ್ಕೆ ಬಂದು ತಲುಪಿದೆ. ಜೂನ್‌ 1ರಂದು 7ನೇ ಹಂತದ ಮತದಾನ ನಡೆಯುತ್ತಿದ್ದು, ಜೂನ್‌ 4ರಂದು ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದೆ. ಕೊನೇ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು 2 ದಿನವಷ್ಟೇ ಬಾಕಿ ಉಳಿದಿದೆ. ಅಂತಿಮ ಹಂತದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉತ್ತರಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಉತ್ತರ ಪ್ರದೇಶದ ದಿಯೋರಿಯೋದಲ್ಲಿ ರಾಹುಲ್ ಗಾಂಧಿ ಅವರು ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಭಾಷಣ ಮಾಡಿದರು. ಬಿಸಿಲು ಜಾಸ್ತಿ ಇದೆ ಅಲ್ಲವೇ ಎಂದ ರಾಹುಲ್ ಗಾಂಧಿ ಅವರು ಭಾಷಣದ ವೇಳೆ ತಲೆ ಮೇಲೆ ನೀರು ಸುರಿದುಕೊಂಡಿದ್ದಾರೆ.

ಇದನ್ನೂ ಓದಿ: ಹೊಟ್ಟೆ ತುಂಬಾ ಬಿರಿಯಾನಿ ತಿಂದ ಮಹಿಳೆ ದಿಢೀರ್‌ ಸಾವು; ಬರೋಬ್ಬರಿ 178 ಮಂದಿ ಆಸ್ಪತ್ರೆಗೆ ದಾಖಲು 

ಉತ್ತರಪ್ರದೇಶದಲ್ಲಿ ಸದ್ಯ 42 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗಿದೆ. ಬಿರು ಬಿಸಿಲಿನಲ್ಲೂ ಪ್ರಚಾರ ಮಾಡುತ್ತಿರುವ ರಾಹುಲ್ ಗಾಂಧಿ ಅವರು ಬಾಟಲಿಯಲ್ಲಿ ನೀರು ಕುಡಿದು ಬಳಿಕ ಅದೇ ಬಾಟಲಿನ ನೀರನ್ನು ತಲೆ ಮೇಲೆ ಸುರಿದುಕೊಂಡು ಕೂಲ್ ಆಗಿದ್ದಾರೆ.

ಮೋದಿ ಪರಮಾತ್ಮ ಎಂದು ವ್ಯಂಗ್ಯ!
ಉತ್ತರಪ್ರದೇಶದಲ್ಲಿ ಮತಯಾಚನೆ ಮಾಡುತ್ತಿರುವ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಎಲ್ಲರೂ ಜೈವಿಕವಾಗಿ ಹುಟ್ಟಿರುವವರು. ಆದರೆ ನರೇಂದ್ರ ಮೋದಿ ಅವರು ಮಾತ್ರ ಜೈವಿಕವಾಗಿ ಹುಟ್ಟಿಲ್ಲ. ಪರಮಾತ್ಮ, ಮೋದಿಯನ್ನು ರೈತರು, ಕಾರ್ಮಿಕರಿಗೆ ಸಹಾಯ ಮಾಡಲು ಕಳಿಸಿಲ್ಲ. ನರೇಂದ್ರ ಮೋದಿಯವರನ್ನು ಅವರ ಪರಮಾತ್ಮ ಅಂಬಾನಿ, ಅದಾನಿಗೆ ಸಹಾಯ ಮಾಡಲು ಕಳಿಸಿದ್ದಾರೆ.
ಒಂದು ವೇಳೆ ಪರಮಾತ್ಮ ಕಳಿಸಿದ್ದರೆ ಮೋದಿ ಬಡವರು, ರೈತರು, ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದರು. ಇವರೆಂಥಾ ಪರಮಾತ್ಮ? ಇದು ನರೇಂದ್ರ ಮೋದಿ ಅವರ ಪರಮಾತ್ಮ ಎಂದು ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ತಲೆ ಮೇಲೆ ದಬದಬನೇ ನೀರು ಸುರಿದುಕೊಂಡ ರಾಹುಲ್ ಗಾಂಧಿ; ಮೋದಿಗೆ ಖಡಕ್ ಸವಾಲು!

https://newsfirstlive.com/wp-content/uploads/2024/05/Rahul-Gandhi-UP.jpg

Load More