newsfirstkannada.com

ಪೇಪರ್​​ಗೆ ಜಾಹಿರಾತು ಕೊಡೋಕೂ ನಮ್ಮ ಬಳಿ ದುಡ್ಡಿಲ್ಲ; ರಾಹುಲ್​ ಗಾಂಧಿ

Share :

Published March 21, 2024 at 12:46pm

    ಲೋಕಸಭಾ ಚುನಾವಣೆ ಹಿನ್ನೆಲೆ ಸುದ್ದಿಗೋಷ್ಟಿ ಕರೆದ ಕಾಂಗ್ರೆಸ್​ ಪಕ್ಷ

    ನಮ್ಮ ಬಳಿ ಎರಡು ರೂಪಾಯಿ ಕೂಡ ಇಲ್ಲ ಎಂದ ರಾಹುಲ್​ ಗಾಂಧಿ

    ನಮಗೆ ಒಂದು ರೈಲ್ವೆ ಟಿಕೆಟ್ ತೆಗೆದುಕೊಳ್ಳಲು ಆಗ್ತಾ ಇಲ್ಲ ಎಂದ ಕಾಂಗ್ರೆಸ್​​ ನಾಯಕ

ನಮಗೆ ಪೇಪರ್ ನಲ್ಲಿ ಜಾಹಿರಾತು ಕೊಡೋಕು ಸಹ ನಮ್ಮ ಬಳಿ ದುಡ್ಡಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿಕೆ ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್​​ ಪಕ್ಷ ದೆಹಲಿಯಲ್ಲಿಂದು ಸುದ್ದಿಗೋಷ್ಟಿ ಕರೆದಿದ್ದು, ಈ ವೇಳೆ ರಾಹುಲ್​ ಗಾಂಧಿ ಮಾತನಾಡಿದ್ದಾರೆ.

ಹಸಿವಿನಿಂದ ಬಳಲುವ ಪರಿಸ್ಥಿತಿ ಬರುತ್ತೆ

ನಮ್ಮ ಹಣ ನಮಗೆ ಬಳಕೆ ಮಾಡೋಕೆ ಬಿಟ್ಟಿಲ್ಲ ಅಂದ್ರೆ ಏನು ಅರ್ಥ. ಒಂದು ಕುಟುಂಬಕ್ಕೆ ಹೀಗೆ ಆದ್ರೆ, ಏನಾಗುತ್ತೆ? ಹಸಿವಿನಿಂದ ಬಳಲುವ ಪರಿಸ್ಥಿತಿ ಬರುತ್ತೆ. ಬಿಸಿನೆಸ್ ನಲ್ಲಿ ಹೀಗೆ ಆದ್ರೆ ಎಲ್ಲವೂ ಮುಳುಗಿಹೋಗುತ್ತೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

ಭಾರತದಲ್ಲಿ ಈಗ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇಲ್ಲ

ನಂತರ ಮಾತು ಮುಂದುವರಿಸಿದ ಅವರು, ನಮಗೆ ಪೇಪರ್ ನಲ್ಲಿ ಜಾಹಿರಾತು ಕೊಡೋಕು ಸಹ ನಮ್ಮ ಬಳಿ ದುಡ್ಡಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರೋದಾ. ಇಂಡಿಯಾ ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆ ಅಂತ ಇತ್ತು. ಆದ್ರೆ ಈಗ ಭಾರತದಲ್ಲಿ ಈಗ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇಲ್ಲ ಎಂದು ಹೇಳಿದ್ದಾರೆ.

ನಮಗೆ ಒಂದು ರೈಲ್ವೆ ಟಿಕೆಟ್ ತೆಗೆದುಕೊಳ್ಳಲು ಆಗ್ತಾ ಇಲ್ಲ

ನಮ್ಮ ಬ್ಯಾಂಕ್ ಖಾತೆಯಿಂದ ನಮಗೆ ಹಣ ತೆಗಿಯೋಕೆ ಆಗ್ತಿಲ್ಲ. ಬಿಜೆಪಿ ಚುನಾವಣೆ ಗೆ ಅಂತನೇ ಕಾಯ್ತಾ ಇದ್ರು. ಇಂತಹ ಸಂಧರ್ಭದಲ್ಲಿ ಹೀಗೆ ಮಾಡಿದ್ದಾರೆ. ನಮ್ಮ ಹಣವನ್ನ ಹೀಗೆ ಫ್ರೀಜ್ ಮಾಡೋದಾ?. ನಮ್ಮ ಎಲ್ಲಾ ಅಕೌಂಟ್ ಗಳನ್ನ ಫ್ರೀಜ್ ಮಾಡಿದ್ದಾರೆ. ಇದು ನಮ್ಮ ಜನರ ಮೇಲೆ ಮಾಡಿರುವ ಆಕ್ರಮಣ. ಎಲ್ಲರೂ ನಾಟಕ ನೋಡಿದಂತೆ ನೋಡ್ತಿದ್ದಾರೆ. ನಮಗೆ ಒಂದು ರೈಲ್ವೆ ಟಿಕೆಟ್ ತೆಗೆದುಕೊಳ್ಳಲು ಆಗ್ತಾ ಇಲ್ಲ. ಮಾಧ್ಯಮ ಸಹ ಈ ಬಗ್ಗೆ ಮಾತಾಡ್ತಿಲ್ಲ ಎಂದು ರಾಹುಲ್​ ಗಾಂಧಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದಾರೆ.

ಇನ್ನು ಸುದ್ದಿಗೋಷ್ಟಿಯಲ್ಲಿ ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಕೂಡ ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೇಪರ್​​ಗೆ ಜಾಹಿರಾತು ಕೊಡೋಕೂ ನಮ್ಮ ಬಳಿ ದುಡ್ಡಿಲ್ಲ; ರಾಹುಲ್​ ಗಾಂಧಿ

https://newsfirstlive.com/wp-content/uploads/2024/03/Rahul-gandi.jpg

Load More