newsfirstkannada.com

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ರಾಹುಲ್ ಗಾಂಧಿಗೆ ಕೋರ್ಟ್​ನಿಂದ ಸಮನ್ಸ್..!

Share :

Published February 24, 2024 at 7:00am

Update February 24, 2024 at 7:01am

    ಮೇ 28 ರಂದು ವಿಚಾರಣೆಗೆ ಹಾಜರಾಗುವಂತೆ ಸೋಚನೆ ನೀಡಿರುವ ಕೋರ್ಟ್

    ಕಾಂಗ್ರೆಸ್​ ನಾಯಕರಿಗೆ ಕೋರ್ಟ್ ಸಮನ್ಸ್ ನೀಡಿದ್ದು ಯಾಕೆ..?

    ಕೋರ್ಟ್​ ನೀಡಿರುವ ಸಮನ್ಸ್​ಗೆ ಡಿ.ಕೆ.ಶಿವಕುಮಾರ್ ಏನ್ ಹೇಳಿದ್ದಾರೆ ಗೊತ್ತಾ?

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ‘40% ಕಮೀಷನ್ ಸರ್ಕಾರ’ ಎಂದು ಅವಹೇಳನಕಾರಿ ಜಾಹೀರಾತು ನೀಡಿದ್ದ ಕಾಂಗ್ರೆಸ್​​ಗೆ ಕೋರ್ಟ್​​ ಸಮನ್ಸ್​​ ಕೊಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಗೆ ಸಮನ್ಸ್​ ನೀಡಿದೆ.

ಬಿಜೆಪಿ ಕಾನೂನು ಘಟಕದ ವಕೀಲ ವಿನೋದ್‌ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸಿತ್ತು. ವಿಚಾರಣೆ ಬಳಿಕ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಮಾರ್ಚ್​​ 28 ರಂದು ಕೋರ್ಟ್​ ಹಾಜರಾಗುವಂತೆ ಸಮನ್ಸ್​​ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್​​ ಪ್ರತಿಕ್ರಿಯಿಸಿದ್ದು, ಕಾನೂನಿಗೆ ಏನು ಗೌರವ ಕೊಡಬೇಕೋ ಕೊಡ್ತೇವೆ. ಕೋರ್ಟ್ ಗೆ ಹಾಜರಾಗುವ ಬಗ್ಗೆ ತೀರ್ಮಾನ ಮಾಡ್ತೇವೆ ಎಂದಿದ್ದಾರೆ.

ಕಳೆದ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಈ ವೇಳೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ಅವಹೇಳನಾಕಾರಿ ಜಾಹೀರಾತು ಮಾಡಿ ಟೀಕಿಸಿತ್ತು. ಕಾಂಗ್ರೆಸ್​ ಹರಿಬಿಟ್ಟಿದ್ದ PayCM ಎಂಬ QR ಕೋಡ್ ಹೊಂದಿದ್ದ ಪೋಸ್ಟರ್ ತುಂಬಾನೇ ವೈರಲ್ ಆಗಿ, ಸರ್ಕಾರ ಬಗ್ಗೆ ಭಾರೀ ಚರ್ಚೆ ಆಗುವಂತೆ ಮಾಡಿತ್ತು. 40 ಪರ್ಸೆಂಟ್ ಸರ್ಕಾರ್ ಎಂದು ಕಾಂಗ್ರೆಸ್​ ನಾಯಕರು ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡರು.

ತನಿಖೆಗೆ ಆದೇಶ ನೀಡಿರುವ ಹೈಕೋರ್ಟ್​..!
ಕಾಂಗ್ರೆಸ್ ಮಾಡಿರುವ 40 ಪರ್ಸೆಂಟ್ ಕಮೀಷನ್ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಕಳೆದ ವಾರ ಹೈಕೋರ್ಟ್ ಸೂಚನೆ ನೀಡಿದೆ. 6 ವಾರದೊಳಗಾಗಿ ವಿಚಾರಣೆ ಪೂರ್ಣಗೊಳಿಸುವಂತೆ ತನಿಖಾಧಿಖಾರಿಗಳಿಗೆ ತಿಳಿಸಲಾಗಿದೆ. ಈ ಮಧ್ಯೆ ಜನಪ್ರತಿನಿಧಿಗಳ ಕೋರ್ಟ್​ ವಿಚಾರಣೆಗೆ ಹಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ರಾಹುಲ್ ಗಾಂಧಿಗೆ ಕೋರ್ಟ್​ನಿಂದ ಸಮನ್ಸ್..!

https://newsfirstlive.com/wp-content/uploads/2024/02/SIDDU-DKS-RAHUL.jpg

Load More