Advertisment

ಸಂವಿಧಾನ, ಸಾವರ್ಕರ್‌, ಅದಾನಿ.. ಲೋಕಸಭೆ ಕಲಾಪದಲ್ಲಿ ರಾಹುಲ್ ಗಾಂಧಿ ಅಬ್ಬರದ ಮಾತು; ಹೇಳಿದ್ದೇನು?

author-image
Gopal Kulkarni
Updated On
ಸಂವಿಧಾನ, ಸಾವರ್ಕರ್‌, ಅದಾನಿ.. ಲೋಕಸಭೆ ಕಲಾಪದಲ್ಲಿ ರಾಹುಲ್ ಗಾಂಧಿ ಅಬ್ಬರದ ಮಾತು; ಹೇಳಿದ್ದೇನು?
Advertisment
  • ಲೋಕಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆಯಲ್ಲಿ ರಾಹುಲ್ ಮಾತು
  • ಸಾರ್ವಕರ್ ಸಂವಿಧಾನದಲ್ಲಿ ಸ್ವಲ್ಪವೂ ಭಾರತೀಯತೆ ಇಲ್ಲ ಎಂದಿದ್ದರು
  • ಮನುಸ್ಮೃತಿ ಕಾನೂನು ಎಂದಿದ್ದರು ಇಂದು ಅದೇ ದೇಶದಲ್ಲಿ ಕಾನೂನಾಗಿದೆ

ಲೋಕಸಭಾ ಚುನಾವಣೆಗೂ ಮುನ್ನ ಬಂದಿದ್ದ ಸಂವಿಧಾನ ಬದಲಾವಣೆ ಹಾಗೂ ಬಿಜೆಪಿ ಸಂವಿಧಾನ ವಿರೋಧಿ ಎಂಬ ಚಿತ್ರಣವನ್ನು ರಾಹುಲ್ ಗಾಂಧಿ ಲೋಕಸಭಾ ಕಲಾಪದಲ್ಲಿಯೂ ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಇಂದು ಲೋಸಕಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆ ನಡೆದಿದೆ. ಚರ್ಚೆಯಲ್ಲಿ ಭಾಗವಹಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇಂದು ದೇಶದಲ್ಲಿ ಮನುಸ್ಮೃತಿಯೇ ಸಂವಿಧಾನವಾಗಿದೆ. ಸಾವರ್ಕರ್​ ಮನುಸ್ಮೃತಿಯನ್ನು ಕಾನೂನು ಎಂದಿದ್ದರು ಮತ್ತು ಸಂವಿಧಾನದಲ್ಲಿ ಸ್ವಲ್ಪವೂ ಭಾರತೀಯತೆ ಇಲ್ಲ ಎಂದಿದದ್ದರು. ಆದರೆ ನಮ್ಮ ಸಂವಿಧಾನ ಭಾರತದ ದಾಖಲೆಯಾಗಿದೆ, ಜೀವನದ ಆದರ್ಶವಾಗಿದೆ. ಎಂದರು.

Advertisment

ಇದನ್ನೂ ಓದಿ:ಮುಡಾಗೆ ಮೇಜರ್​ ಸರ್ಜರಿ ಮಾಡಲು ನಿರ್ಧಾರ; ಇನ್ಮುಂದೆ BDA ಮಾದರಿಯಲ್ಲೇ ಮೈಸೂರು ಅಭಿವೃದ್ಧಿ ಪ್ರಾಧಿಕಾರ..!

ಮಹಾಭಾರತ ಕಾಲದಿಂದಲೂ ಜಾತೀಯತೆ ಈ ದೇಶದಲ್ಲಿ ಎಂದು ಹೇಳುವ ಮೂಲಕ ಚರ್ಚೆಯಲ್ಲಿ ಅದಾನಿ ಹೆಸರು ಪ್ರಸ್ತಾಪಿಸಿದರು ರಾಹುಲ್ ಗಾಂಧಿ, ಹಿಂದೂಸ್ತಾನ್ ಫೋರ್ಟ್ಸ್​, ಏರ್​ಫೋರ್ಟ್ಸ್​, ಡಿಫೆನ್ಸ್, ಕೈಗಾರಿಕೆ ಅದಾನಿಗೆ ನೀಡಿದ್ದೀರಿ ಪ್ರಮಾಣಿಕವಾಗಿ ಕೆಲಸ ಮಾಡುವವರ ಬೆರಳುಗಳನ್ನು ಕತ್ತರಿಸುತ್ತೀರಿ ಪ್ರಾಮಾಣಿಕವಾಗಿ ಕೆಲಸ ಮಾಡುವವರ ಬೆರಳು ಕತ್ತರಿಸುತ್ತೀರಿ. ಅಂಬಾನಿ ಅದಾನಿಗೆ ಲಾಭ ಮಾಡಿಕೊಡಲು ರೈತರ ಬೆರಳು ಕತ್ತರಿಸುತ್ತಿದ್ದೀರಿ ಎಂದು ಹೇಳಿದಾಗ ಮಧ್ಯಪ್ರವೇಶಿಸಿದ ಸ್ಪೀಕರ್ ಓಂ ಬಿರ್ಲಾ, ಸಂವಿಧಾನದ ಬಗ್ಗೆ ಮಾತನಾಡಿ ಎಂದು ಹೇಳಿದರು.

ಇದನ್ನೂ ಓದಿ: Breaking: ‘ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಕೇಂದ್ರ ಸಂಪುಟ ಗ್ರೀನ್​​ಸಿಗ್ನಲ್.. ಮುಂದೆ ಏನು..?

Advertisment

ಮರಳಿ ಸಂವಿಧಾನದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಸಂವಿಧಾನದಲ್ಲಿ ಅಗ್ನಿವೀರ್ ಮಾಡಿ ಎಂದಿಲ್ಲ. ಸಂವಿಧಾನದಲ್ಲಿ ಎಲ್ಲಿಯೂ ಏಕಸ್ವಾಮ್ಯ ಮಾಡಿ ಎಂದು ಹೇಳಿಲ್ಲ, ಸಂವಿಧಾನದಲ್ಲಿ ಯುವಜನತೆಯ ಬೆರಳು ಕತ್ತರಿಸಿ ಎಂದು ಹೇಳಿಲ್ಲ ಎಂದು ಗುಡುಗಿದ ರಾಹುಲ್ ಗಾಂಧಿ, ನಾನು ಹತ್ರಾಸ್​ಗೆ ಭೇಟಿ ನೀಡಿದ್ದೇನೆ. ಅಲ್ಲಿ ಹೆಣ್ಣು ಮಕ್ಕಳ ಮೇಲೆ ಭೀಕರ ದೌರ್ಜನ್ಯ ನಡೆಯುತ್ತಿದೆ. ಅನಾಚಾರಕ್ಕೊಳಗಾದ ಯುವತಿಯ ಅಂತ್ಯಸಂಸ್ಕಾರ ಮಾಡಲು ಕೂಡ ಬಿಡಲಿಲ್ಲ ಎಂದು ಗುಡುಗಿದರು ರಾಹುಲ್ ಗಾಂಧಿ.
ಇನ್ನು ತಮ್ಮ ಮಾತಿನಲ್ಲಿ ಉತ್ತರಪ್ರದೇಶದ ವಿಚಾರವನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಯುಪಿಯಲ್ಲಿ ಸಂವಿಧಾನ ಜಾರಿಯಾಗಿಲ್ಲ, ಮನುಸ್ಮೃತಿ ಜಾರಿಯಾಗಿದೆ. ಎಂದು ಗುಡುಗಿದ್ದಾರೆ. ಬಿಜೆಪಿಯವರು ಸಂವಿಧಾನದ ಮೇಲೆ ದಾಳಿಯನ್ನು ಮಾಡುತ್ತಿದ್ದಾರೆ. ಸಂಭಾಲ್​ನಲ್ಲಿ ಐದು ಜನರಿಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಇದನ್ನು ಸಂವಿಧಾನದಲ್ಲಿ ಎಲ್ಲಿ ಬರೆದಿದ್ದಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment