newsfirstkannada.com

ಚುನಾವಣೆ ಗೆದ್ದ ಬೆನ್ನಲ್ಲೇ ಮೊದಲ ಕಾನೂನು ಸಂಕಷ್ಟ.. ಬೆಂಗಳೂರು ಕೋರ್ಟ್ ಕಟಕಟೆಯಲ್ಲಿ ರಾಹುಲ್ ಗಾಂಧಿ..!

Share :

Published June 7, 2024 at 9:59am

  ಬೆಂಗಳೂರಿಗೆ ರಾಹುಲ್ ಗಾಂಧಿ, ಕೋರ್ಟ್‌ಗೆ ಖುದ್ದು ಹಾಜರಿ

  ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ, ಡಿಕೆಶಿ ಹಾಜರು ಫಿಕ್ಸ್​

  ಮಾರ್ಚ್ 11ರಂದು ಕೋರ್ಟ್‌ ಸಮನ್ಸ್, ಏನಿದು ಪ್ರಕರಣ..?

ಬಿಜೆಪಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಕೇಸ್​ ವಿಚಾರಣೆಗೆ ಖುದ್ದಾಗಿ ರಾಹುಲ್ ಆಗಮಿಸಿದ್ದಾರೆ. ವಿಶೇಷ ಕೋರ್ಟ್‌ ಆದೇಶದಂತೆ ಬೆಳಗ್ಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ರಾಹುಲ್​ಗೆ ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಸಹ ಸಾಥ್​ ನೀಡಲಿದ್ದಾರೆ. ಈಗಾಗಲೇ ಬೆಂಗಳೂರಿಗೆ ಆಗಮಿಸಿರುವ ರಾಹುಲ್ ಗಾಂಧಿಯನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸ್ವಾಗತಿಸಿ ಬರಮಾಡಿಕೊಂಡಿದ್ದಾರೆ.

ಪೇಟಿಎಂ ಸರ್ಕಾರ, 40 ಪರ್ಸೆಂಟ್​​ ಗೌರ್ನಮೆಂಟ್​​.. ಇದು ವರ್ಷದ ಹಿಂದೆ ಕಾಂಗ್ರೆಸ್​​ ಪ್ರಯೋಗಿಸಿದ್ದ ಅಸ್ತ್ರ.. ಅದೇ ಅಸ್ತ್ರದಲ್ಲಿ ಶಸ್ತ್ರ ಹಿಡಿದು ಹೋರಾಡಿದ್ದ ಕಾಂಗ್ರೆಸ್​​ಗೆ ಈಗ ರಾಜ್ಯದ ಗದ್ದುಗೆ ದಕ್ಕಿದೆ. ಆದ್ರೆ, ಇದೇ ಆರೋಪ ಸಂಬಂಧ ಮಾನನಷ್ಟ ಮೊಕದ್ದಮೆ ಹೂಡಿದ ಬಿಜೆಪಿ, ಹಾಲಿ ಸರ್ಕಾರವನ್ನ ಕೋರ್ಟ್​​ ಕಟಕಟೆಗೆ ಎಳೆದಿದೆ.

ಇದನ್ನೂ ಓದಿ:ಚುನಾವಣೆ ಸೋಲು ಬೆನ್ನಲ್ಲೇ ಕೋಲಾಹಲ.. ಅಸ್ಥಿರಗೊಳ್ಳುವ ಆತಂಕದಲ್ಲಿ ಮಹಾರಾಷ್ಟ್ರ ಸರ್ಕಾರ..!

ಈಗಾಗಲೇ ಈ ಪ್ರಕರಣದಲ್ಲಿ ಸಿಎಂ ಮತ್ತು ಡಿಸಿಎಂ ಜಾಮೀನು ಪಡೆದು ರಿಲೀಫ್​​​ ಆಗಿದ್ದಾರೆ. ಅವತ್ತು ಕೋರ್ಟ್​​ ಹಾಜರಾತಿಯಿಂದ ವಿನಾಯ್ತಿ ಪಡೆದಿದ್ದ ರಾಹುಲ್​​​ ಗಾಂಧಿ, ಇವತ್ತು ಕೋರ್ಟ್​​ಗೆ ಹಾಜರಾಗಬೇಕಿದೆ. ಪ್ರಕರಣದ 4ನೇ ಆರೋಪಿಯಾದ ರಾಹುಲ್ ಬೆಳಗ್ಗೆ 10:30ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನ ವಿಚಾರಣೆಗೆ ಹಾಜರಾಗಲಿದ್ದಾರೆ.

ಕಾಂಗ್ರೆಸ್​​​ ವಿರುದ್ಧ ಏನಿದು ಕೇಸ್?
2023ರ ವಿಧಾನಸಭೆ ಎಲೆಕ್ಷನ್​​​ಗೂ ಮೊದಲು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವಿರುದ್ಧ ಜಾಹೀರಾತು ನೀಡ್ಲಾಗಿತ್ತು. 2023ರ ಮೇ 5ರಂದು ಪತ್ರಿಕೆಗಳಲ್ಲಿ ಕಾಂಗ್ರೆಸ್ ನೀಡಿದ್ದ ಜಾಹೀರಾತಿನಲ್ಲಿ ಬಿಜೆಪಿಯನ್ನು ಭ್ರಷ್ಟ ಎಂದು ಉಲ್ಲೇಖಿಸಿತ್ತು.. ಕರ್ನಾಟಕದ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಷನ್ ಪಡೆಯುತ್ತಿದೆ ಅಂತ​ ಆರೋಪಿಸಿತ್ತು.. ಈ ಜಾಹೀರಾತು ಸಾಕ್ಷಿ ಆಗಿಸಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.. ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ರು.. 2024ರ ಮಾರ್ಚ್ 11ರಂದು ಕಾಂಗ್ರೆಸ್ ನಾಯಕರಿಗೆ ಈ ಸಂಬಂಧ ಕೋರ್ಟ್‌ ಸಮನ್ಸ್ ಜಾರಿ ಮಾಡಿತ್ತು.

ಇದನ್ನೂ ಓದಿ:ಶತ್ರು ಸಂಹಾರಕ್ಕೆ ವೀರಸೇನಾನಿ ರೆಡಿ.. ಬಾಬರ್​ ಅಝಂ ಪಡೆಗೆ ಇನ್ನಿಲ್ಲದ ನಡುಕ.. ಕಾರಣ ಇಲ್ಲಿದೆ..!

ಪ್ರಕರಣದಲ್ಲಿ ಜಾಮೀನು ಪಡೆಯದಿದ್ರೆ ಬಂಧನ ಸಾಧ್ಯತೆ ಇದೆ.. ಇಂದು ಕೋರ್ಟ್​ ಮುಂದೆ ಹಾಜರಾಗುವ ರಾಹುಲ್ 2 ಬಾರಿ ನೀಡಿದ್ದ ಸಮನ್ಸ್​​ಗೆ ಉತ್ತರಿಸಿ ಕ್ಷಮೆ ಕೇಳಲಿದ್ದಾರೆ.. ಬಳಿಕ ಜಾಮೀನು ಪಡೆಯುವ ಸಾಧ್ಯತೆ ಇದೆ.. ಆನಂತರ ಮುಂದಿನ ದಿನಾಂಕಕ್ಕೆ ಟೈಂ ತೆಗೆದುಕೊಂಡು ಹೋಗಲಿದ್ದಾರೆ.

ಇದನ್ನೂ ಓದಿ:ಮಧ್ಯರಾತ್ರಿ ಭೀಕರ ಅಪಘಾತ.. ಮೂವರು ಸ್ಥಳದಲ್ಲೇ ಸಾವು.. ಮರಕ್ಕೆ ಸಿಲುಕಿ ನೇತಾಡಿದ ಮೃತದೇಹ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚುನಾವಣೆ ಗೆದ್ದ ಬೆನ್ನಲ್ಲೇ ಮೊದಲ ಕಾನೂನು ಸಂಕಷ್ಟ.. ಬೆಂಗಳೂರು ಕೋರ್ಟ್ ಕಟಕಟೆಯಲ್ಲಿ ರಾಹುಲ್ ಗಾಂಧಿ..!

https://newsfirstlive.com/wp-content/uploads/2024/06/RAHUL-GANDHI-7.jpg

Load More