newsfirstkannada.com

VIDEO: ರಾಹುಲ್​ ಗಾಂಧಿ ಗಡ್ಡ ಟ್ರಿಮ್​ ಮಾಡಿಸಿದ ಸಲೂನ್​​ನಲ್ಲಿ ಜನವೋ ಜನ; ಮಾಲೀಕನಿಗೆ ಭಾರೀ ಕಾಸು

Share :

Published May 15, 2024 at 8:58pm

  ಕೇರಳದ ವಯನಾಡು ಜತೆಗೆ ರಾಯ್​ಬರೇಲಿ ಕ್ಷೇತ್ರದಿಂದಲೂ ರಾಹುಲ್​ ಕಣಕ್ಕೆ

  ಪ್ರಚಾರದ ಮಧ್ಯೆ ಸಲೂನ್​ಗೆ ಭೇಟಿ ನೀಡಿ ಗಡ್ಡ ಟ್ರಿಮ್​ ಮಾಡಿಸಿದ ರಾಹುಲ್​ ಗಾಂಧಿ

  ರಾಹುಲ್​ ಗಾಂಧಿಯವ್ರು ಗಡ್ಡ ಟ್ರಿಮ್​ ಮಾಡಿಸಿದ ಸಲೂನ್​ನಲ್ಲಿ ಜನವೋ ಜನ..!

ಲಕ್ನೋ: ಕೇರಳದ ವಯನಾಡು ಜತೆಗೆ ರಾಯ್​ಬರೇಲಿ ಕ್ಷೇತ್ರದಿಂದಲೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಲೋಕಸಭಾ ಚುನಾವಣೆ ನಿಂತಿದ್ದಾರೆ. ಇಂದು ಪ್ರಚಾರದ ಮಧ್ಯೆ ರಾಹುಲ್​ ಗಾಂಧಿ ಅವರು ರಾಯ್​ಬರೇಲಿ ಜಿಲ್ಲೆಯ ಲಾಲ್‌ಗಂಜ್ ಪಟ್ಟಣದ ಸಲೂನ್‌ ಒಂದಕ್ಕೆ ಭೇಟಿ ನೀಡಿದ್ದರು.

ಇನ್ನು, ಮಿಥುನ್ ಕುಮಾರ್ ಎಂಬ ಮಾಲೀಕರ ನ್ಯೂ ಮುಂಬಾದೇವಿ ಹೇರ್ ಕಟಿಂಗ್ ಸಲೂನ್‌ನಲ್ಲಿ ರಾಹುಲ್​ ಗಾಂಧಿ ಗಡ್ಡ ಟ್ರಿಮ್ ಮಾಡಿಸಿಕೊಂಡಿದ್ದರು. ಸದ್ಯ ರಾಹುಲ್​ ಭೇಟಿ ಬೆನ್ನಲ್ಲೇ ಸಲೂನ್​ ಮಾಲೀಕನಿಗೆ ಅದೃಷ್ಟ ಖುಲಾಯಿಸಿದೆ. ಇಡೀ ದಿನ ಸಲೂನ್​ಗೆ ಗ್ರಾಹಕರು ಭೇಟಿ ನೀಡುತ್ತಲೇ ಇದ್ದು, ಭಾರೀ ಡಿಮ್ಯಾಂಡ್​ ಹೆಚ್ಚಾಗಿದೆ.

ಗಡ್ಡ ಟ್ರಿಮ್​ ಮಾಡಿಸಿಕೊಳ್ಳುವಾಗ ರಾಹುಲ್​ ಗಾಂಧಿ ಸಲೂನ್​ ಮಾಲೀಕ ಮಿಥುನ್​ ಕುಮಾರ್​ ಅವರೊಂದಿಗೆ ಸಂಭಾಷನೆ ನಡೆಸಿದ್ರು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ. ಸಲೂನ್​ ಈಗ ಭಾರೀ ಜನಪ್ರಿಯವಾಗಿದ್ದು, ಜನ ಭೇಟಿ ನೀಡುತ್ತಲೇ ಇದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದ ಬಗ್ಗೆ ರಶ್ಮಿಕಾ ಮಂದಣ್ಣ ಪರೋಕ್ಷವಾಗಿ ಮಾತು? ಮತ್ತೆ ಟ್ರೆಂಡ್ ಆದ ನ್ಯಾಷನಲ್ ಕ್ರಶ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ರಾಹುಲ್​ ಗಾಂಧಿ ಗಡ್ಡ ಟ್ರಿಮ್​ ಮಾಡಿಸಿದ ಸಲೂನ್​​ನಲ್ಲಿ ಜನವೋ ಜನ; ಮಾಲೀಕನಿಗೆ ಭಾರೀ ಕಾಸು

https://newsfirstlive.com/wp-content/uploads/2024/05/Rahul-Gandhi_Trimming.jpg

Load More