newsfirstkannada.com

ಲೋಕಸಭಾ ಅಗ್ನಿಪರೀಕ್ಷೆ.. ಫಲಿತಾಂಶಕ್ಕೆ ಮುನ್ನ ರಾಹುಲ್​ ಗಾಂಧಿ ಮೋದಿಗೆ ಕೊಟ್ಟ ವಾರ್ನಿಂಗ್​ ಏನು?

Share :

Published June 4, 2024 at 7:40am

Update June 4, 2024 at 7:47am

    2024ರ ಭಾರತೀಯ ಸಾರ್ವತ್ರಿಕ ಚುನಾವಣೆ 7 ಹಂತಗಳಲ್ಲಿ ಮುಗಿದಿದೆ..!

    ಕೆಲವೇ ಕ್ಷಣಗಳಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬೀಳಲಿದೆ

    2 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ ಕಾಂಗ್ರೆಸ್‌ ನಾಯಕ ರಾಹುಲ್

ನವದೆಹಲಿ: 2024ರ ಭಾರತೀಯ ಸಾರ್ವತ್ರಿಕ ಚುನಾವಣೆ 7 ಹಂತಗಳಲ್ಲಿ ಮುಗಿದಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬೀಳಲಿದೆ. ಈ ಸಂಭ್ರಮಕ್ಕೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ಇಡೀ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರೋ 2 ಲೋಕಸಭಾ ಕ್ಷೇತ್ರಗಳು ಕೇರಳದ ವಯನಾಡು ಮತ್ತು ಉತ್ತರ ಪ್ರದೇಶದ ರಾಯ್​ ಬರೇಲಿ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಕಳೆದ ಸಲ ರಾಹುಲ್​ ಅಮೇಥಿ ಹಾಗೂ ವಯನಾಡಿನಲ್ಲಿ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತರೂ ರಾಹುಲ್​ ಗಾಂಧಿ ಅವರನ್ನು ಕೇರಳದ ವಯನಾಡಿನ ಜನ ಗೆಲ್ಲಿಸಿದ್ರು. ಸದ್ಯ ಕಳೆದ ಬಾರಿಗಿಂತಲೂ ರಾಹುಲ್ ಗಾಂಧಿ ಚಾರ್ಮ್​ ಈ ಸಲ ಹೆಚ್ಚಿದೆ ಎನ್ನುತ್ತಿವೆ ಎಕ್ಸಿಟ್‌ ಪೋಲ್​​ ಸಮೀಕ್ಷೆಗಳು. ಎರಡೂ ಕ್ಷೇತ್ರಗಳಲ್ಲಿ ರಾಹುಲ್​ ಗೆಲುವು ದಾಖಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ರಾಹುಲ್‌ ಗಾಂಧಿ ಈ ಬಾರಿ ವಯನಾಡಿನಲ್ಲಿ ಪಡೆಯುವ ಮತಗಳಿಕೆ ಕಡಿಮೆ ಆಗಬಹುದು ಎಂದು ತಿಳಿದು ಬಂದಿದೆ.

2019ರಲ್ಲಿ ರಾಹುಲ್ ಗಾಂಧಿ ಶೇಕಡಾ 64.7 ಮತಗಳನ್ನು ಪಡೆದಿದ್ದರು. ಈ ಬಾರಿ ಮತಗಳ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಇದೆ. ಅಂದರೆ ಗೆಲುವಿನ ಅಂತರ ಕಡಿಮೆ ಆಗಲಿದೆ ಎನ್ನಲಾಗಿದೆ.

ರಾಹುಲ್​ ಗಾಂಧಿ ಹೇಳಿದ್ದೇನು..?

ದೇಶದಲ್ಲಿ ದ್ವೇಷ ರಾಜಕಾರಣದ ವಾತಾವರಣ ಅಂತ್ಯಗೊಳ್ಳಲಿದೆ. ಭಾರತದ ಜನರು, ನಮಗೆ ದ್ವೇಷ ಬೇಕಿಲ್ಲ, ನಮಗೆ ಪ್ರೀತಿ ಬೇಕು ಎಂಬುದನ್ನು ಇಡೀ ಜಗತ್ತಿಗೆ ಸಾರಲಿದ್ದಾರೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯೋದೇ ನನ್ನ ಗುರಿ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯದ ಟಾಪ್​​ 5 ಲೋಕಸಭಾ ಕ್ಷೇತ್ರಗಳು ಇವು! ಗೆಲ್ಲೋದ್ಯಾರು? ನೀವು ಓದಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಅಗ್ನಿಪರೀಕ್ಷೆ.. ಫಲಿತಾಂಶಕ್ಕೆ ಮುನ್ನ ರಾಹುಲ್​ ಗಾಂಧಿ ಮೋದಿಗೆ ಕೊಟ್ಟ ವಾರ್ನಿಂಗ್​ ಏನು?

https://newsfirstlive.com/wp-content/uploads/2024/02/Pm-modi-Rahul-Gandhi.jpg

Load More