newsfirstkannada.com

ರಾಹುಲ್​​ ಗಾಂಧಿ ವಿರುದ್ಧ ಎಫ್​ಐಆರ್​​ಗೆ ಅಸ್ಸಾಂ ಸಿಎಂ ಸೂಚನೆ.. ಕರ್ನಾಟಕ ಕಾಂಗ್ರೆಸ್​ನಿಂದ ಖಡಕ್​ ಎಚ್ಚರಿಕೆ

Share :

Published January 24, 2024 at 6:11am

    ಭಾರತ್​ ಜೋಡೋ ನ್ಯಾಯ್​ ಯಾತ್ರೆಗೆ ಅಸ್ಸಾಂ ಸರ್ಕಾರದಿಂದ ತಡೆ

    ಭಾರತ್​ ಜೋಡೋ ನ್ಯಾಯ್​ ಯಾತ್ರೆಯ ವೇಳೆ ತಳ್ಳಾಟ.. ನೂಕಾಟ

    ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿಚಾರ್ಜ್ ಮಾಡಿದ ಪೊಲೀಸರು ​

ರಾಹುಲ್​ ಗಾಂಧಿಯವರ ಭಾರತ್​ ಜೋಡೋ ನ್ಯಾಯ್​ ಯಾತ್ರೆಗೆ ಅಸ್ಸಾಂನಲ್ಲಿ ನಿರ್ಬಂಧ ಹೇರಿದ್ದು ಗದ್ದಲ ಸೃಷ್ಟಿಸಿದೆ. ಕರ್ನಾಟಕದಲ್ಲೂ ಕಾಂಗ್ರೆಸ್​ ನಾಯಕರು ಅಸ್ಸಾಂ ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಭಾರತ್​ ಜೋಡೋ ನ್ಯಾಯ್​ ಯಾತ್ರೆಯ ವೇಳೆ ತಳ್ಳಾಟ.. ನೂಕಾಟ.. ಬ್ಯಾರಿಕೇಡ್​ ಕಿತ್ತೆಸೆಯುವಂತ ಘಟನೆಗಳು ನಡೆದಿವೆ.

ಅಸ್ಸಾಂನಲ್ಲಿ ರಾಹುಲ್​ ಗಾಂಧಿಯ ಯಾತ್ರೆಗೆ ಬ್ರೇಕ್

ಜ.14ರಂದು ಮಣಿಪುರದಿಂದ ಶುರುವಾದ ರಾಹುಲ್​ ಗಾಂಧಿಯವರ ಭಾರತ್​ ಜೋಡೋ ನ್ಯಾಯ್​ ಯಾತ್ರೆ ಅದ್ಧೂರಿಯಾಗಿ ಸಾಗ್ತಿದ್ರು ಅಸ್ಸಾಂನಲ್ಲಿ ರಾಹುಲ್​ ಗಾಂಧಿಯ ಯಾತ್ರೆಗೆ ಬ್ರೇಕ್​ ಬಿದ್ದಿದೆ. ಅಸ್ಸಾಂನ ಗುವಾಹಟಿಗೆ ಪ್ರವೇಶಿಸುವ ವೇಳೆ ಯಾತ್ರೆಯನ್ನು ತಡೆದ ಪರಿಣಾಮ, ಪೊಲೀಸರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಭಾರೀ ಹೈಡ್ರಾಮಾವೇ ನಡೆದಿದೆ.

ಅಸ್ಸಾಂನ ದೇವಾಲಯವೊಂದಕ್ಕೆ ರಾಹುಲ್‌ ಗಾಂಧಿ ಹಾಗೂ ಬೆಂಬಲಿಗರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಇದನ್ನು ವಿರೋಧಿಸಿ ರಾಹುಲ್​ ಗಾಂಧಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ರು. ಇವತ್ತು ಪಾದಯಾತ್ರೆ ಮರು ಆರಂಭಿಸಿದಾಗ ಪೊಲೀಸರು ತಡೆ ಹಾಕಿದ್ದಾರೆ. ಗುವಹಾಟಿಯ ಪ್ರಮುಖ ರಸ್ತೆಗಳಲ್ಲಿ ಅವಕಾಶ ಇಲ್ಲದ ಕಾರಣ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್​ ಹಾಕಲಾಗಿತ್ತು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್​ ಕಾರ್ಯಕರ್ತರು ಪೊಲೀಸರ ಜೊತೆ ಕಾಳಗಕ್ಕೆ ಇಳಿದ್ರು. ತಳ್ಳಾಟ-ನೂಕಾಟದಿಂದ ಕೆಲಕಾಲ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್​ ನಡೆಸಿದ್ರು. ಇನ್ನು ಭಾರತ್​ ನ್ಯಾಯ್​ ಯಾತ್ರೆ ತಡೆದ ಅಸ್ಸಾಂ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ರು.

ಇದೇ ಮಾರ್ಗವಾಗಿ ಜೆಪಿ ನಡ್ಡಾ ಅವರ ರ್ಯಾಲಿಗಳು ಹೋಗಿವೆ. ಆದರೆ ಕಾಂಗ್ರೆಸ್​ ಪಕ್ಷದ ಪಾದಯಾತ್ರೆ ತಡೆಯುತ್ತಿದ್ದಾರೆ. ನಾವು ಕೇವಲ ಬ್ಯಾರಿಕೇಡ್​ಗಳನ್ನು ಮುರಿದಿದ್ದೇವೆ. ಆದ್ರೆ ಕಾನೂನನ್ನು ಉಲ್ಲಂಘನೆ ಮಾಡಿಲ್ಲ. ಅಸ್ಸಾಂ ಸಿಎಂ ಉಲ್ಲಂಘಿಸಬಹುದು. ಉಪಮುಖ್ಯಮಂತ್ರಿ ಉಲ್ಲಂಘಿಸಬಹುದು. ಪ್ರಧಾನ ಮಂತ್ರಿ ಉಲ್ಲಂಘಿಸಬಹುದು. ಆದ್ರೆ ಕಾಂಗ್ರೆಸ್​ನ ಕಾರ್ಯಕರ್ತರು ಕಾನೂನನ್ನು ಉಲ್ಲಂಘಿಸುವುದಿಲ್ಲ.

ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ

ಇನ್ನು ಪೊಲೀಸರ ಬ್ಯಾರಿಕೇಡ್ ಧ್ವಂಸಗೊಳಿಸಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕ ಬಿವಿ ಶ್ರೀನಿವಾಸ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿರುವ ಅಸ್ಸಾಂ ಸಿಎಂ, ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದ್ದಾರೆ.

ಇದು ಅಸ್ಸಾಂ ಸಂಸ್ಕೃತಿಯ ಭಾಗವಲ್ಲ. ನಮ್ಮದು ಶಾಂತಿ ಪ್ರಿಯ ರಾಜ್ಯ. ಅಂತಹ ‘ನಕ್ಸಲ್ ತಂತ್ರಗಳು’ ನಮ್ಮ ಸಂಸ್ಕೃತಿಗೆ ಸಂಪೂರ್ಣ ಹೊರತಾಗಿದೆ.

ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಸಿಎಂ

ರಾಹುಲ್​ ಯಾತ್ರೆಗೆ ತಡೆ.. ಕರ್ನಾಟಕದಲ್ಲೂ ಕಾಂಗ್ರೆಸ್​ ಪ್ರತಿಭಟನೆ

ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯಯಾತ್ರೆಗೆ ಅಸ್ಸಾಂನಲ್ಲಿ ಅಡ್ಡಿ ಪಡಿಸಿದ್ದನ್ನು ಖಂಡಿಸಿ, ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರು ಭಾಗಿಯಾಗಿ ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರದ ವಿರುದ್ಧ ಕಿಡಿಕಾರಿದ್ರು. ಇನ್ನು ಪಾದಯಾತ್ರೆ ‌ಮಟ್ಟ ಹಾಕೋದು ಸ್ವಾತಂತ್ರ್ಯ ಕಸಿದಂತೆಯೇ ಎಂದು ಸಿಎಂ ಸಿದ್ದರಾಮಯ್ಯ ಕೂಡ ವಾಗ್ದಾಳಿ ನಡೆಸಿದ್ರು.

‘ಅಭಿವ್ಯಕ್ತಿ ಸ್ವಾತಂತ್ರ ಕಸಿದುಕೊಂಡಂತೆ’

ಪಾದಯಾತ್ರೆ ಅಡ್ಡ ಹಾಕುವುದು ಎಂದರೆ ವ್ಯಕ್ತಿ ಸ್ವತಂತ್ರವನ್ನು ಕಸಿದುಕೊಳ್ಳುವುದು ಆಗಿದೆ. ದೇಶದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪಾದಯಾತ್ರೆ ಮಾಡ್ತಾರೆ. ಆದರೆ ಇದನ್ನು ತಡೆಯಲು ಬಿಜೆಪಿಯ ಕೆಲವು ಪುಂಡರು ಮಾಡುತ್ತಿದ್ದಾರೆ.

ಸಿದ್ದರಾಮಯ್ಯ, ಸಿಎಂ

ಮಣಿಪುರದಿಂದ ಶುರುವಾದ ರಾಹುಲ್​ ಗಾಂಧಿಯವರ ಭಾರತ್​ ಜೋಡೋ ನ್ಯಾಯ್​ ಯಾತ್ರೆ ಭರ್ಜರಿಯಾಗಿದೆ ಸಾಗಿದೆ. ದಾರಿಯುದ್ಧಕ್ಕೂ ಬಡವರ, ಶ್ರಮಿಕರ ಕಷ್ಟಗಳನ್ನು ಹಾಲಿಸುತ್ತಾ ಸಾಗುತ್ತಿದ್ದಾರೆ. ಇದೇ ರೀತಿ ಮೇಘಾಲಯದಲ್ಲಿ ಯಾತ್ರೆ ವೇಳೆ ಅನಾನಸ್​ ಹಣ್ಣಿಗೆ ರಾಹುಲ್​ ಫಿದಾ ಆಗಿದ್ದಾರೆ. ಮಾರ್ಗ ಮಧ್ಯೆ ಕಾರು ನಿಲ್ಲಿಸಿ, ಅನಾನಸ್​ ಹಣ್ಣು ಸವಿದಿದ್ದಾರೆ. ಹಾಗೂ ಅನಾನಸ್​ ಮಾರುತ್ತಿದ್ದ ತಾಯಿ ಮಗಳ ಸಮಸ್ಯೆಗಳು ಆಲಿಸಿದ್ದಾರೆ. ಇನ್ನು ತಮ್ಮ ತಾಯಿ ಸೋನಿಯಾ ಗಾಂಧಿಗೆ ಕರೆ ಮಾಡಿ ವಿಶ್ವದ ಅತ್ಯುತ್ತಮವಾದ ಅನಾನಸ್​ ತರುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಭಾರತ್​ ಜೋಡೋ ನ್ಯಾಯ ಯಾತ್ರೆ ಭರ್ಜರಿಯಾಗಿ ಸಾಗಿತ್ತು, ಇದನ್ನು ಹತ್ತಿಕ್ಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್​ ನಾಯಕರು ಆರೋಪ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಹುಲ್​​ ಗಾಂಧಿ ವಿರುದ್ಧ ಎಫ್​ಐಆರ್​​ಗೆ ಅಸ್ಸಾಂ ಸಿಎಂ ಸೂಚನೆ.. ಕರ್ನಾಟಕ ಕಾಂಗ್ರೆಸ್​ನಿಂದ ಖಡಕ್​ ಎಚ್ಚರಿಕೆ

https://newsfirstlive.com/wp-content/uploads/2024/01/RAHUL_GANDHI-3.jpg

Load More