/newsfirstlive-kannada/media/post_attachments/wp-content/uploads/2025/02/RAHUL-JARKIHOLI.jpg)
ರಾಜ್ಯ ಯುವ ಕಾಂಗ್ರೆಸ್​​, ಬದಲಾವಣೆಗೆ ತೆರೆದುಕೊಂಡಿದೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಹೆಚ್.ಎಸ್. ಮಂಜುನಾಥ್ ಆಯ್ಕೆಯಾಗಿದ್ದಾರೆ. ಭಾರೀ ಪೈಪೋಟಿ ನಡುವೆ ಮಂಜುನಾಥ್​ಗೆ ಪಟ್ಟ ಒಲಿದಿದೆ. ಇನ್ನು ಪಕ್ಷದ ಸಂಘಟನೆ ಮೂಲಕ ಜಾರಕಿಹೊಳಿ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಆಗಿದೆ. ಪಕ್ಷ ಸಂಘಟನೆಯ ಜೊತೆಗೆ ಯುವ ಮತದಾರರನ್ನ ಸೆಳೆಯುವ ಗುರುತರ ಜವಾಬ್ದಾರಿ ನೂತನ ಪದಾಧಿಕಾರಿಗಳ ಮೇಲಿದೆ.
ರಾಷ್ಟ್ರ ರಾಜಕಾರಣಕ್ಕೆ ಪುತ್ರಿ, ರಾಜ್ಯಕ್ಕೆ ಸತೀಶ್ ಪುತ್ರ
ರಾಜ್ಯ ರಾಜಕಾರಣಕ್ಕೆ ಸತೀಶ್​​ ಪುತ್ರ ರಾಹುಲ್​​ ಜಾರಕಿಹೊಳಿ ಎಂಟ್ರಿ ಆಗಿದೆ. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಗೆಲುವು ದಾಖಲಿಸಿದ್ದಾರೆ. 1.80 ಲಕ್ಷ ಮತ ಪಡೆದು ಗೆದ್ದು ಬೀಗಿದ್ದಾರೆ.. ಗೋಕಾಕ್​ನಲ್ಲಿ ಸಚಿವ ಸತೀಶ್​​​ ಜಾರಕಿಹೊಳಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ರಾಜ್ಯ ಯೂತ್​ ಕಾಂಗ್ರೆಸ್​​ಗೆ ಹೊಸ ಕ್ಯಾಪ್ಟನ್.. ಯಾರು ಈ HS ಮಂಜುನಾಥ್..?
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿರುವ ರಾಹುಲ್ ಜಾರಕಿಹೊಳಿ.. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನನ್ನನ್ನು ಪ್ರಚಂಡ ಮತಗಳಿಂದ ಆಯ್ಕೆ ಮಾಡಿದ ಎಲ್ಲ ಮತದಾರರಿಗೆ, ಹಾಗೂ ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ ನನ್ನ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಕಾಂಗ್ರೆಸ್‌ನ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವಲ್ಲಿ ಜೊತೆಯಾಗಿ ಕೆಲಸ ಮಾಡೋಣ. ನಿಮ್ಮ ಬೆಂಬಲ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ನಾವು ಒಟ್ಟಿಗೆ ಹೊಸ ಜಾಗೃತಿಯೊಂದಿಗೆ ಕಾರ್ಯನಿರ್ವಹಿಸೋಣ ಎಂದು ಬರೆದುಕೊಂಡಿದ್ದಾರೆ.
ಆಗಸ್ಟ್ 20ರಿಂದ ಸೆಪ್ಟೆಂಬರ್ 22ರ ವರೆಗೆ ನಡೆದಿದ್ದ ಯೂಥ್ ಕಾಂಗ್ರೆಸ್ ಚುನಾವಣೆಯಲ್ಲಿ ರಾಜ್ಯಾದ್ಯತ ಮತದಾನ ನಡೆದಿತ್ತು.. ಅದರ ಫಲಿತಾಂಶ ನಿನ್ನೆ ಪ್ರಕಟವಾಗಿದೆ.
ಇದನ್ನೂ ಓದಿ: ಚಿಗಳ್ಳಿ ದೀಪ ಆರುವ 14 ದಿನಗಳ ಹಿಂದಷ್ಟೇ ನಡೆದಿತ್ತು ನೋವಿನ ಘಟನೆ.. ಈ ನಂದಾದೀಪದ ಇತಿಹಾಸವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us