newsfirstkannada.com

ದೇಶದ 88 ಲೋಕಸಭಾ ಕ್ಷೇತ್ರಗಳಿಗೆ ವೋಟಿಂಗ್​​.. ಪ್ರತಿಶತ 61 ರಷ್ಟು ಮತದಾನ..!

Share :

Published April 27, 2024 at 6:20am

  ದೇವರನಾಡು ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿರೋ ರಾಹುಲ್​​

  2ನೇ ಹಂತದಲ್ಲಿ ದೇಶದ 89 ಕ್ಷೇತ್ರಗಳಿಗೆ ಮತದಾನ ಕೊನೆಗೂ ಅಂತ್ಯ

  EVM ಯಂತ್ರದಲ್ಲಿ ಬಟನ್ ಹೊತ್ತುವ ಮೂಲಕ ಸೂಕ್ತ ಅಭ್ಯರ್ಥಿಗಳ ಆಯ್ಕೆ

ದೇಶದಾದ್ಯಂತ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಬಹಳ ಶಾಂತಿಯುತವಾಗಿ ಮುಗಿದಿದೆ. ಕರ್ನಾಟಕವಷ್ಟೇ ಅಲ್ಲದೆ ದೇಶದ ವಿವಿಧ ರಾಜ್ಯಗಳ 88 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹೇಮಮಾಲಿನಿ ಸೇರಿ ಪ್ರಮುಖ ನಾಯಕರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಇದನ್ನೂ ಓದಿ: ‘ಮಂಡ್ಯ ಬಿಟ್ಟು ಕೊಟ್ಟಿದ್ದೇ ತಪ್ಪಾಯ್ತು’- JDS ವಿರುದ್ಧ ಸಿಡಿದೆದ್ದ ಸುಮಲತಾ ಅಂಬರೀಶ್; ಅಸಲಿಗೆ ಆಗಿದ್ದೇನು?

2ನೇ ಹಂತದಲ್ಲಿ ದೇಶದ 89 ಕ್ಷೇತ್ರಗಳಿಗೆ ಮತದಾನ ಅಂತ್ಯ

ದೇಶ ಲೋಕಸಭಾ ಚುನಾವಣೆ 2ನೇ ಹಂತದ ಮತದಾನಕ್ಕೆ ಸಾಕ್ಷಿಯಾಗಿದೆ. ನಿನ್ನೆ ದೇಶದ ಕೇರಳ, ಕರ್ನಾಟಕ, ಉತ್ತರ ಪ್ರದೇಶ ಸೇರಿ 12 ರಾಜ್ಯಗಳ 89 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ರಾಹುಲ್ ಗಾಂಧಿ, ಶಶಿತರೂರ್, ರಾಜೀವ್ ಚಂದ್ರಶೇಖರ್ ಸೇರಿ 1,202 ಅಭ್ಯರ್ಥಿಗಳ ಭವಿಷ್ಯವನ್ನು 15.88 ಕೋಟಿ ಮತದಾರರು ಬರೆದಿದ್ದಾರೆ.

ರಾಹುಲ್ ಗಾಂಧಿ, ಶಶಿತರೂರ್​​ಗೆ ಅಗ್ನಿಪರೀಕ್ಷೆ

ನಿನ್ನೆ ದೇವರನಾಡು ಕೇರಳದ 20 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ಶಾಂತಿಯುತವಾಗಿ ಅಂತ್ಯವಾಗಿದೆ. ವಯನಾಡಿನಿಂದ 2ನೇ ಬಾರಿಗೆ ಸ್ಪರ್ಧಿಸಿರುವ ಕಾಂಗ್ರೆಸ್ ರಾಹುಲ್ ಗಾಂಧಿಗೂ ನಿನ್ನೆ ಅಗ್ನಿ ಪರೀಕ್ಷೆ. ಕೇಂದ್ರದ ಮಾಜಿ ಸಚಿವ ಶಶಿತರೂರ್​​ ತಿರುವನಂತಪುರ ಕ್ಷೇತ್ರದಲ್ಲಿ ಬಿಜೆಪಿ ರಾಜೀವ್ ಚಂದ್ರಶೇಖರ್​​​ ವಿರುದ್ಧ ಸ್ಪರ್ಧೆ ಮಾಡಿದ್ದು ಮತದಾನ ನಡೆದಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್​​​ಗೆ ಇದು ಚೊಚ್ಚಲ ಚುನಾವಣೆಯಾಗಿದ್ದು ಶಶಿತರೂರ್​ ವಿರುದ್ದ ಸ್ಪರ್ಧಿಸಿದ್ದಾರೆ. ನಿನ್ನೆ ಕೇರಳದ ತಿರುವನಂತಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದ್ರು. ಇನ್ನು ಕೇರಳದ ಎಲ್ಲಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೀತು. ನಿನ್ನೆ ಸಂಜೆ 5 ಗಂಟೆಯವರೆಗೆ ಶೇ.60.23ರಷ್ಟು ಮತದಾನವಾಗಿತ್ತು.

ಕೇರಳ ಸಿಎಂ ಪಿಣರಾಯಿ ವಿಜಯನ್ ಮತದಾನ!

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಣ್ಣೂರಿನ ಪಿಣರಾಯಿಯಲ್ಲಿರುವ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಪತ್ನಿ ಕಮಲಾ ಹಾಗೂ ಪುತ್ರಿ ವೀಣಾ ವಿಜಯನ್ ಅವರೊಂದಿಗೆ ಮತಹಕ್ಕು ಚಲಾಯಿಸಿದರು. ಅತ್ತ ಉತ್ತರ ಪ್ರದೇಶದ ಅಮ್ರೋಹಾ, ಮೀರತ್, ಬಾಗ್‌ಪತ್, ಗಾಜಿಯಾಬಾದ್, ಗೌತಮ್ ಬುದ್ಧ ನಗರ, ಬುಲಂದ್‌ಶಹರ್, ಅಲಿಗಢ್, ಮಥುರಾ ಸೇರಿ 8 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಆದ್ರೆ ಮತದಾನ ಪ್ರಮಾಣದಲ್ಲಿ ತೀವ್ರ ಇಳಿಕೆ ಕಂಡು ಬಂದಿದೆ. ಮೊದಲ ಹಂತದಲ್ಲೂ ಉತ್ತರ ಪ್ರದೇಶದಲ್ಲಿ ಮತದಾನ ಪ್ರಮಾಣ ಶೇ.62ರ ಆಸುಪಾಸಿನಲ್ಲಿತ್ತು. ಎರಡನೇ ಹಂತದಲ್ಲೂ ಶೇ.60ರ ಅಂಚಿನಲ್ಲೇ ಇದೆ. ಶ್ರೀಕೃಷ್ಣನ ಜನ್ಮಸ್ಥಳ ಉತ್ತರ ಪ್ರದೇಶದ ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಹೇಮಾ ಮಾಲಿನಿ ಮತ ಹಕ್ಕು ಚಲಾಯಿಸಿದ್ರು. 2014ರಿಂದ ಮಥುರಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹೇಮಾಮಾಲಿನಿ ಮತ್ತೊಮ್ಮೆ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತದಾನ!

ಅತ್ತ ರಾಜಸ್ಥಾನದ ಕೋಟಾ ಕ್ಷೇತ್ರದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತದಾನ ಮಾಡಿದ್ದಾರೆ. 2014ರಿಂದ ಇದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಿದ್ದು ಮತ್ತೊಮ್ಮೆ ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಒಟ್ಟಾರೆ, 2ನೇ ಹಂತದಲ್ಲಿ ಕಾಂಗ್ರೆಸ್, ಬಿಜೆಪಿಯ ಪ್ರಮುಖ ನಾಯಕರ ಭವಿಷ್ಯ ಇವತ್ತು ಮತಯಂತ್ರದಲ್ಲಿ ಭದ್ರವಾಗಿದ್ದು ಜೂನ್ 4ರಂದು ಹಣೆಬರಹ ನಿರ್ಧಾರ ಆಗಲಿದೆ. ಒಟ್ಟಾರೆ ದೇಶದಲ್ಲಿ ಎರಡನೇ ಹಂತದ ಮತದಾನ ಮುಕ್ತಾಯ ಆಗಿದ್ದು, ಸುಮಾರು 61 ಪ್ರತಿಶತದಷ್ಟು ಮತದಾನ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಶದ 88 ಲೋಕಸಭಾ ಕ್ಷೇತ್ರಗಳಿಗೆ ವೋಟಿಂಗ್​​.. ಪ್ರತಿಶತ 61 ರಷ್ಟು ಮತದಾನ..!

https://newsfirstlive.com/wp-content/uploads/2023/09/Election-Voting.jpg

Load More