newsfirstkannada.com

ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ವಿಳಂಬ.. ಖಿನ್ನತೆಗೆ ಒಳಗಾಗಿದ್ದ ಶಿಕ್ಷಕ ನಿಮ್ಹಾನ್ಸ್‌ನಲ್ಲಿ ಸಾವು

Share :

Published January 16, 2024 at 8:06am

    ಪರಿಶೀಲನೆಗೆ ಮೆಡಿಕಲ್‌ ಸರ್ಟಿಫಿಕೆಟ್ ಪಡೆಯಲು ಪರದಾಡಿದ್ದ ಶಿಕ್ಷಕ

    ಖಿನ್ನತೆಗೆ ಒಳಗಾಗಿದ್ದ ಶಿಕ್ಷಕ, ಚಿಕಿತ್ಸೆ ಫಲಿಸದೇ ನಿಮ್ಹಾನ್ಸ್‌ನಲ್ಲಿ ಸಾವು

    ದೀರ್ಘಕಾಲ ನೇಮಕಾತಿ ವಿಳಂಬ, ಮಾನಸಿಕ ಖಿನ್ನತೆಯಿಂದ ಶಿಕ್ಷಕ ಸಾವು

ರಾಯಚೂರು: ಪದವೀಧರ ಶಿಕ್ಷಕರ ನೇಮಕದಲ್ಲಿ ಆಯ್ಕೆಯಾಗಿದ್ರೂ ನೇಮಕಾತಿ ವಿಳಂಬವಾಗಿದ್ದರಿಂದ ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಮದ ಶಿಕ್ಷಕನೋರ್ವ ಮಾನಸಿಕ ಖಿನ್ನತೆಯಿಂದ ಸಾವನ್ನಪ್ಪಿದ್ದಾನೆ.

ದುರಗಪ್ಪ ನರಸಪ್ಪ ಪೂಲಭಾವಿ (33) ಮೃತ ಶಿಕ್ಷಕ. ಇವರು 4 ತಿಂಗಳ ಮಗು, ಪತ್ನಿ, ತಂದೆ, ತಾಯಿಯನ್ನು ಅಗಲಿದ್ದಾರೆ. ದುರಗಪ್ಪನವರು ಪದವೀಧರರ ಶಿಕ್ಷಕರ ನೇಮಕಾತಿಯ ಎರಡನೇ ಹಂತದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉಳಿಕೆ ವೃಂದದ ಹುದ್ದೆಯಲ್ಲಿ ಆಯ್ಕೆಯಾಗಿದ್ದರು. ಇತ್ತೀಚೆಗೆ ಕೌನ್ಸಿಲಿಂಗ್‌ನಲ್ಲಿ ದಾಖಲೆ ಪರಿಶೀಲನೆಯಲ್ಲಿ ಭಾಗಿಯಾಗಿದ್ದರು. ಮೊದಲ ಹಂತದಲ್ಲಿ ಆಯ್ಕೆಯಾಗದಿದ್ದರಿಂದ ಮತ್ತು ದೀರ್ಘಕಾಲ ನೇಮಕಾತಿ ವಿಳಂಬದ ಕಾರಣದಿಂದ ಶಿಕ್ಷಕ ಮಾನಸಿಕ ಖಿನ್ನತೆಗೆ ಜಾರಿದ್ದರು.

2ನೇ ಹಂತದಲ್ಲಿ ಆಯ್ಕೆಯಾಗಿದ್ದರು ಪರಿಶೀಲನೆಗಾಗಿ ಮೆಡಿಕಲ್‌ ಸರ್ಟಿಫಿಕೆಟ್ ಪಡೆಯಲು ಪರದಾಡಿದ್ದರು. ನಂತರದ ದಿನಗಳಿಂದ ನಿರಂತರ ಖಿನ್ನತೆಗೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದರು. ಶಾಲೆಗೆ ಹಾಜರಾಗುವ ಮುನ್ನವೆ ಮೆದುಳು ಸಂಬಂಧಿ ಕಾಯಿಲೆ ಬಂದಿದೆ. ಕೊನೆಗೆ ಬೆಂಗಳೂರಿನ ನಿಮಾನ್ಸ್‌ನಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೆ ತುತ್ತಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ವಿಳಂಬ.. ಖಿನ್ನತೆಗೆ ಒಳಗಾಗಿದ್ದ ಶಿಕ್ಷಕ ನಿಮ್ಹಾನ್ಸ್‌ನಲ್ಲಿ ಸಾವು

https://newsfirstlive.com/wp-content/uploads/2024/01/RCR_MAN_DIE.jpg

Load More