/newsfirstlive-kannada/media/post_attachments/wp-content/uploads/2025/06/RCR-ALIYA-MAVA.jpg)
ಸುಖಸಂಸಾರಕ್ಕೆ 12 ಸೂತ್ರಗಳು ಎಂಬ ಮಾತಿದೆ. ಆದ್ರೆ ರಾಯಚೂರಲ್ಲಿ ಹೆಣ್ಣು ಕೊಟ್ಟ ಮಾವನೊಬ್ಬ ಅಳಿಯನಿಗೆ ಬರೋಬ್ಬರಿ 36 ಷರತ್ತು ವಿಧಿಸಿದ್ದಾನೆ. ಈ ಎಲ್ಲಾ ಶರತ್ತು ಒಪ್ಪಿದರೆ ಮಾತ್ರ ಮಗಳನ್ನು ಅಳಿಯನ ಜೊತೆ ಕಳಿಸುವುದಾಗಿ ತಾಕೀತು ಮಾಡಿದ್ದಕ್ಕೆ ಅಳಿಯ ಕಂಗಾಲಾಗಿದ್ದಾನೆ.
ಹೆಸರು ಬ್ರಹ್ಮಾನಂದ. ಆದ್ರೆ ಇವರಿಗೆ ಸಂಸಾರದ ಆನಂದವೇ ಇಲ್ಲದಂತಾಗಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ರಾಯದುರ್ಗ ತಾಲೂಕಿನ ಇವರು 2021ರಲ್ಲಿ ಮದುವೆಯಾಗಿದ್ರು. ಆದ್ರೆ ಮದುವೆ ಆಗಿ ಪತ್ನಿ ಜೊತೆ ಸಂಸಾರ ಸಾಗರದಲ್ಲಿ ಮಿಂದೇಳು ಆಗುತ್ತಿಲ್ಲ. ಇದಕ್ಕೆ ಕಾರಣ ಹೆಣ್ಣು ಕೊಟ್ಟ ಮಾವ.
ಇದನ್ನೂ ಓದಿ: UPSC ಅಭ್ಯರ್ಥಿಗಳಿಗೆ ಗುಡ್ನ್ಯೂಸ್.. ಇಂಟರ್ವ್ಯೂವ್ ಫೇಲ್ ಆದರೂ ಸಿಗುತ್ತೆ ಸರ್ಕಾರಿ ಹುದ್ದೆ!
ಮಗಳನ್ನ ಕೊಟ್ಟ ಮಾವನಿಂದ ಸಂಸಾರಕ್ಕೆ 36 ಷರತ್ತು!
ಅಳಿಯನಿಗೆ 36 ಷರತ್ತು ಹಾಕಿದ ಮಾವನ ಹೆಸರು ವಿನ್ನಿ ಉದಯ್ಕುಮಾರ್. ಅಂದಾಗೆ ಎರಡು ಕುಟುಂಬಗಳು ಪರಸ್ಪರ ಒಪ್ಪಿ ಬ್ರಹ್ಮಾನಂದನಿಗೂ ರಾಯಚೂರಿನ ಉದಯಕುಮಾರ್ ಮಗಳಿಗೂ ಕೊರೊನಾ ಸಮಯ ಅಂದ್ರೆ 2021ರಲ್ಲಿ ಮದುವೆ ಮಾಡಿದ್ದರು. ಇಬ್ಬರ ದಾಂಪತ್ಯಕ್ಕೆ ಗಂಡು ಮಗು ಸಾಕ್ಷಿಯಾಗಿದೆ. ಎಲ್ಲವೂ ಸರಿಯೇ ಇದ್ದಾಗ ಮಾವ ಸುಂಟರಗಾಳಿಯಂತೆ ಪ್ರವೇಶಿಸಿದ್ದರು ಅಂತಾರೆ ಬ್ರಹ್ಮಾನಂದ. ಒಂದಿನ ರಾಯದುರ್ಗಕ್ಕೆ ಬಂದ ಮಾವ ಉದಯ್ಕುಮಾರ್ ಹಾಗೂ ಕುಟುಂಬ ಪತ್ನಿಯನ್ನು ಕರೆದೊಯ್ದಿದ್ದರು. ಅದಾಗಿ 3 ವರ್ಷಗಳಾದ್ರೂ ಪತ್ನಿ ಹಾಗೂ ಮಗುವನ್ನು ನೋಡಲು ಬಿಡ್ತಿಲ್ಲ ಅಂತ ಆರೋಪಿಸಿದ್ದಾರೆ. ಅಲ್ಲದೇ ಮಗಳನ್ನು ಕಳಿಸಬೇಕಾದ್ರೆ ಹಲವು ಷರತ್ತು ಹಾಕಿದ್ದಾರಂತೆ.
ಇದನ್ನೂ ಓದಿ: ಪ್ರಿಯಕರ ಕಾನ್ಸ್ಟೆಬಲ್ ಜೊತೆ ಸೇರಿಕೊಂಡು ಪತಿಗೆ ಕೊಡಬಾರದ ಕಷ್ಟ ಕೊಟ್ಟಳು.. ವಿಡಿಯೋ ಮಾಡಿ ಜೀವ ಬಿಟ್ಟ ಗಂಡ
ಮಾವನ ಷರತ್ತುಗಳೇನು?
- ಮನೆಯಿಂದ ಆಚೆ ಬಂದು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸಬೇಕು. ಸಂಸಾರಕ್ಕೆ ಬೇಕಾಗುವ ವಸ್ತು ಖರೀದಿಸಬೇಕು. ಆಗ ಮಗಳನ್ನು ಕಳಿಸುವೆ.
- ನನ್ನ ಮಗಳ ಭವಿಷ್ಯಕ್ಕಾಗಿ ಪ್ರತಿ ತಿಂಗಳ ಆದಾಯದ ಲೆಕ್ಕ ಪತ್ರ ತೋರಿಸಬೇಕು.
- ನಿನ್ನ ಸಂಸಾರದಲ್ಲಿ ಅಕ್ಕ-ತಂಗಿಯರು ಪ್ರವೇಶಿಸಬಾರದು. ಮಗಳನ್ನು ಸ್ವತಂತ್ರವಾಗಿ ಬಾಳಲು ಬಿಡಬೇಕು.
- ನಮ್ಮ ಮಗಳಿಗೆ ಏನೇ ಅನಾಹುತವಾದ್ರೂ ನಿಮ್ಮ ಕುಟುಂಬಸ್ಥರೇ ಜವಾಬ್ದಾರರಾಗಿರುತ್ತೀರಿ.
- ಮದುವೆಗೆ ಮೊದಲು ದಿನಕ್ಕೆ 5 ರಿಂದ 8 ಸಾವಿರ, ತಿಂಗಳಿಗೆ ₹1.5 ಲಕ್ಷ ದುಡಿಮೆ ಎಂದಿದ್ದೆ. ಅದರಂತೆ ಮಗಳ ಖಾತೆಗೆ ತಿಂಗಳಿಗೆ 50 ಸಾವಿರ ಹಾಕಬೇಕು.
- ಬೆಡ್ ಶೀಟ್, ಟಿ.ವಿ, ಕೂಲರ್ ಎಲ್ಲದಕ್ಕೂ ಜಗಳವಾಡುತ್ತೀರಿ
- ಮದುವೆಗೆ ಮುನ್ನ ಚೆನ್ನಾಗಿ ನೋಡಿಕೊಳ್ತೇವೆ, ತೊಂದರೆ ಕೊಡಲ್ಲ ಅಂದಿದ್ರಿ. ಗರ್ಭವತಿಯಾದ 8 ತಿಂಗಳವರೆಗೆ ಆರೋಗ್ಯ ಸರಿ ಇಲ್ಲದಿದ್ದರೂ ಅವಳೇ ಕೆಲಸ ಮಾಡಿದ್ದಾಳೆ.
- ಮದುವೆ ನಂತರ 2-3 ತಿಂಗಳಿಗೆ ಮಗಳನ್ನು ಮನೆಗೆ ಕಳಿಸ್ತೀನಿ ಎಂದವರು 1 ದಿನಕ್ಕಿಂತ ಹೆಚ್ಚು ಕಳಿಸದೇ ಬಂದಿಖಾನೆಯಲ್ಲಿ ಇರಿಸಿದ್ದೀರಿ.
- ನೀನು ಶ್ರೀಮಂತ ಅನ್ನುವಂತೆ ಮಾತನಾಡ್ತೀಯ, ಯಾವಾಗ್ಲೂ ಧಿಮಾಕು ಬೇರೆ.
- ನಿನ್ನ ನಡವಳಿಕೆ ನೋಡಿದ್ಮೇಲೆ ನಿನ್ನ ಮೇಲಿನ ವಿಶ್ವಾಸ, ಭರವಸೆ ಹೊರಟು ಹೋಗಿದೆ.
ಒಟ್ಟಾರೆ ಮಗಳನ್ನು ಮದುವೆ ಮಾಡಿಕೊಟ್ಟ ಮಾವ ಇಬ್ಬರನ್ನು ಸಂಸಾರ ಮಾಡಲು ಬಿಡದೆ ಅನಾವಶ್ಯಕ ಷರತ್ತು ಹಾಕಿ ಮಗಳು ಅಳಿಯ ಹಾಗೂ ಮೊಮ್ಮಗನಿಗೂ ನೆಮ್ಮದಿ ಇಲ್ಲದಂತಾಗಿದೆ. ಷರತ್ತುಗಳಿಗೆ ಒಪ್ಪಿದರೆ ಮಾತ್ರ ಮಗಳನ್ನು ಕಳಿಸುತ್ತೇವೆ ಎಂದಿರುವ ಮಾವನಿಂದಾಗಿ ಅಳಿಯ ಕಂಗಾಲಾಗಿದ್ದಾನೆ. ಪತಿ-ಪತ್ನಿ ನಡುವೆ ಪ್ರೀತಿ ಮಾತ್ರವಲ್ಲದೇ ಹೊಂದಾಣಿಕೆ ಹಾಗೂ ಅನುಸರಿಸಿಕೊಂಡು ಹೋಗಬೇಕು. ಇಲ್ಲದಿದ್ರೆ ಸಂಸಾರ ಗಾಳಿಗೆ ಸಿಕ್ಕ ಗಾಳಿಪಟ.. ಆದಷ್ಟು ಮಾವ-ಅಳಿಯನ ವೈಮನಸ್ಸು ದೂರವಾಗಿ ಪತಿ-ಪತ್ನಿ, ಮಗು ಹತ್ತಿರವಾಗಬೇಕಿದೆ.
ಇದನ್ನೂ ಓದಿ: ಜೈಲಿಗೆ ಕಳಿಸ್ತೀನಿ ಅಂತ ಪತ್ನಿ ಬೆದರಿಸ್ತಿದ್ದಾಳಾ? ಭಯ ಬೇಡ, ಸುಪ್ರೀಂ ಕೋರ್ಟ್ನ ಈ ಮಹತ್ವದ ನಿರ್ದೇಶನ ಬಗ್ಗೆ ತಿಳಿಯಿರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ