/newsfirstlive-kannada/media/post_attachments/wp-content/uploads/2024/11/Kalaburagi-6.jpg)
ಮನೆ ಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಕೊ*ಲೆ ಮಾಡಿರೋ ಘಟನೆಯೊಂದು ನಡೆದಿದೆ. ರಾಯಚೂರು ನಗರದ ರಾಗಿಮಾನಗಡ್ಡ ಬಡಾವಣೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪಟಾಕಿ ಹಚ್ಚುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. 7 ಯುವಕರ ಗುಂಪು ತಲ್ವಾರ್, ಕಟ್ಟಿಗೆಯಿಂದ ನರಸಿಂಹಲು ಎಂಬಾತನಿಗೆ ಹೊಡೆದು ಕೊ*ಲೆಗೈದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ! ಹೆಚ್ಚುತ್ತಿದೆ ಪಟಾಕಿ ಸಿಡಿತ ಪ್ರಕರಣ.. ಸದ್ಯ ಗಾಯಾಳುಗಳ ಸಂಖ್ಯೆ ಎಷ್ಟಿದೆ ಗೊತ್ತಾ?
ಮನೆಯಲ್ಲಿ ಮಕ್ಕಳಿದ್ದಾರೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ 37 ವರ್ಷದ ನರಸಿಂಹಲು ಎಂಬಾತನನ್ನು ಕೊ*ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸ್ಕೂಟರ್ನಲ್ಲಿ ತೆರಳುವಾಗ ಈರುಳ್ಳಿ ಬಾಂಬ್ ಸ್ಫೋಟ.. ಓರ್ವ ಸಾ*ವು, ಆರು ಮಂದಿಗೆ ಗಾಯ
ವಿನೋದ, ರೋಹನ್, ಈಶ್ವರ್, ನರೇಶ, ಪ್ರಕಾಶ, ಚಿಂಟು, ಅಖಿಲ್ ಎಂಬುವವರು ಗಲಾಟೆ ಮಾಡಿ ಕೊ*ಲೆ ಮಾಡಿದ್ದಾರೆ. ಗಲಾಟೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳು ನವೋದಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಗೈದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ