ಕುಂಭ ಮೇಳಕ್ಕೆ ಹೋದ ರಾಯಚೂರು ಸ್ವಾಮೀಜಿ.. ಅಧಿಕಾರಿಗಳಿಂದ ಮಠಕ್ಕೆ JCB ನುಗ್ಗಿಸಿ ನೆಲಸಮ..!

author-image
Ganesh
Updated On
ಕುಂಭ ಮೇಳಕ್ಕೆ ಹೋದ ರಾಯಚೂರು ಸ್ವಾಮೀಜಿ.. ಅಧಿಕಾರಿಗಳಿಂದ ಮಠಕ್ಕೆ JCB ನುಗ್ಗಿಸಿ ನೆಲಸಮ..!
Advertisment
  • ಏಕಾಏಕಿ ಮಠ ತೆರವಿಗೆ ಸ್ಥಳೀಯರಿಂದ ವಿರೋಧ
  • ಸರ್ಕಾರಿ ಅಧಿಕಾರಿಗಳು ಯಾಕೆ ಮಠ ತೆರವು ಮಾಡಿದ್ರು?
  • ಉತ್ತರ ಪ್ರದೇಶದ ಪ್ರಯಾಗರಾಜ್​​ನಲ್ಲಿ ಮಹಾಕುಂಭ

ರಾಯಚೂರು: ಉತ್ತರ ಪ್ರದೇಶದ ಪ್ರಯಾಗರಾಜ್ ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ನಡೆಯುತ್ತಿದೆ. ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ದೇಶದ ಮೂಲೆ ಮೂಲೆಗಳಲ್ಲಿರುವ ಸಾಧು, ಸಂತರು ತ್ರಿವೇಣಿ ಸಂಗಮಕ್ಕೆ ದೌಡಾಯಿಸುತ್ತಿದ್ದಾರೆ. ಅದೇ ರೀತಿ ರಾಯಚೂರಿನ ಸ್ವಾಮೀಜಿ ಒಬ್ಬರು ಕುಂಭ ಮೇಳಕ್ಕೆ ಹೋಗಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡ ಅಧಿಕಾರಿಗಳು, ಮಠವನ್ನು ತೆರವುಗೊಳಿಸಿದ್ದಾರೆ.

publive-image

ಸ್ವಾಮೀಜಿ ಇಲ್ಲದಿದ್ದಾಗ ಸ್ಕೆಚ್..

ರಾಯಚೂರು ತಾಲೂಕಿನ ಏಗನೂರು ಗ್ರಾಮದ ಬಳಿ ಮೃತ್ಯುಂಜಯ ಮಠ ಇದೆ. ಈ ಮಠವು ಜ್ಞಾನಾನಂದಸ್ವಾಮಿ ನಡೆಸಿಕೊಂಡು ಬರುತ್ತಿದ್ದಾರೆ. ಕುಂಭಮೇಳ ಹಿನ್ನೆಲೆಯಲ್ಲಿ ಅವರು ಪುಣ್ಯಸ್ನಾನಕ್ಕೆ ಹೋಗಿದ್ದಾರೆ. ಇಂದು ಬೆಳಗ್ಗೆ ಜಿಲ್ಲಾಧಿಕಾರಿ ನಿತಿಶ್ ಕೆ ಆದೇಶದ ಮೇರೆಗೆ ರಾಯಚೂರು AC ಗಜಾನನ ಬಾಳೆ ನೇತೃತ್ವದ ಟೀಂ ಮಠಕ್ಕೆ ಎಂಟ್ರಿ ನೀಡಿದೆ. ಮಠಕ್ಕೆ ಆಗಮಿಸಿದ ತಂಡ, ಜೆಸಿಬಿಗಳ, ಹಿಟಾಚಿ ಸಹಾಯದಿಂದ ದೇಗುಲ ಮತ್ತು ಗೋಶಾಲೆಗಳನ್ನು ಧ್ವಂಸ ಮಾಡಿದ್ದಾರೆ.

ಇದನ್ನೂ ಓದಿ: ಮಹಾಕುಂಭದಲ್ಲಿ ಪ್ರಧಾನಿ ಮೋದಿ ಪವಿತ್ರ ಸ್ನಾನ.. ಪ್ರಯಾಗರಾಜ್​ಗೆ ಯಾವಾಗ ಬರ್ತಾರೆ ಗೊತ್ತಾ?

publive-image

ಯಾಕೆ ತೆರವು ಕಾರ್ಯ..?

ಏಗನೂರು ಗ್ರಾಮದ ಹೊರವಲಯದಲ್ಲಿ ಸರ್ಕಾರ ಜಮೀನು ಇದೆ. ಸರ್ಕಾರಿ ಜಾಗದಲ್ಲಿ ಸ್ವಾಮಿ ಮಠ, ಗೋಶಾಲೆ ನಡೆಸುತ್ತಿದ್ದಾರೆ. ಕಳೆದ 8-10 ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಮೃತ್ಯುಂಜಯ ಮಠ ನಿರ್ಮಿಸಿ ಅಲ್ಲೇ ಇದ್ದಾರೆ. ಇದೀಗ ಅದನ್ನು ತೆರವುಗೊಳಿಸಲಾಗಿದೆ. ಏಕಾಏಕಿ ಮಠ ತೆರವಿಗೆ ಏಗನೂರು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಹಾಕುಂಭಮೇಳದ 8 ದಿನದಲ್ಲಿ ದಾಖಲೆ.. ಎಷ್ಟು ಕೋಟಿ ಭಕ್ತರಿಂದ ಪುಣ್ಯ ಸ್ನಾನ? ಇಲ್ಲಿದೆ ವಿಶೇಷ ಮಾಹಿತಿ

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment