ಗಂಡನ ನದಿಗೆ ತಳ್ಳಿದ್ದ ಕೇಸ್​​ಗೆ ಟ್ವಿಸ್ಟ್​.. ಅವನೇ ಹಾರಿದ್ನಾ? ಈಗ ಗದ್ದೆಮ್ಮ ಪರ ಅನುಕಂಪ..!

author-image
Ganesh
Updated On
35 ವರ್ಷದ ಹಿಂದಿನ ದ್ವೇಷಕ್ಕೆ ನದಿಗೆ ತಳ್ಳಿದ್ಲಾ ಗದ್ದೆಮ್ಮ.. ಏನಿದು ಗಂಭೀರ ಆರೋಪ..?
Advertisment
  • ಫೋಟೋ ನೆಪದಲ್ಲಿ ಪತಿಯನ್ನೇ ಪತ್ನಿ ನದಿಗೆ ತಳ್ಳಿದ ಆರೋಪ
  • ಈ ಬಗ್ಗೆ ಗದ್ದೆಮ್ಮ ಪ್ರತಿಕ್ರಿಯೆ ಬಳಿಕ ಆಕೆಯ ಪರ ಅನುಕಂಪ
  • ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಗದ್ದೆಮ್ಮ ಪರ ನಿಂತ ನೆಟ್ಟಿಗರು

ಕಳೆದ ಶನಿವಾರ ಈ ಕೇಸ್​ ಅದೆಷ್ಟು ಹಲ್​ಚಲ್ ಎಬ್ಬಿಸಿಬಿಟ್ಟಿತ್ತು ಅಂದ್ರೆ ಸಿಂಗಲ್ ಆಗಿರೋ ಹುಡುಗರ ಎದೆ ಎಲ್ಲ ಝಲ್ ಅಂದೋಗಿತ್ತು. ಅಲ್ಲಾ ಸ್ವಾಮಿ ಮದ್ವೆಯಾಗಿ ಮೂರು ತಿಂಗಳ ಕಳೆದಿಲ್ಲ.. ಇನ್ನೂ ಗಂಡ ಹೆಂಡತಿ ಒಬ್ಬರನೊಬ್ಬರು ಅರ್ಥ ಕೂಡ ಮಾಡ್ಕೊಂಡಿಲ್ಲ. ಇಂಥ ಹೊತ್ತಲ್ಲಿ ಸಾರ್ ನನ್ನ ಹೆಂಡತಿ ನನ್ನ ಜೀವ ತೆಗಿಯೋಕೆ ನದಿಗೆ ತಳ್ಳಿದ್ಳು ಅಂತ ತಾತಪ್ಪ ಸಾಲು ಸಾಲು ಆರೋಪ ಮಾಡಿದ್ದ. ಕೊನೆಗೆ ಯಾಕ್ ತಳ್ಳಿದ್ಳು? ಅಲ್ಲಿ ಏನಾಗಿತ್ತು? ಅನ್ನೋದು ಮಾತ್ರ ನಿಗೂಢವಾಗಿಯೇ ಉಳಿದಿತ್ತು.. ಈಗ ತಾತಪ್ಪನ ಪತ್ನಿ ಗದ್ದೆಮ್ಮ ಒಂದೊಂದೆ ಸತ್ಯಗಳನ್ನ ಬಿಚ್ಚಿಟ್ಟಿದ್ದಾಳೆ.

ಇದನ್ನೂ ಓದಿ: ಮಗಳು ಬರ್ಬೇಡ ಅಂತಾಳೆ, ಮಗ-ಸೊಸೆ ಹಿಂಸೆ ನೀಡ್ತಾರೆ; ಕೃಷ್ಣಾ ನದಿಗೆ ಹಾರಲು ಯತ್ನಿಸಿದ್ದ ವೃದ್ಧನ ಕಣ್ಣೀರ ಕತೆ..

publive-image

ಹೌದು, ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್​ ಬಳಿ ಹೆಂಡತಿಯೇ ಗಂಡನ ನದಿಗೆ ತಳ್ಳಿದ ಆರೋಪ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಈ ಬಗ್ಗೆ ನ್ಯೂಸ್​ಫಸ್ಟ್​ ಜೊತೆ ಮಾತನಾಡಿರುವ ಆರೋಪಿ ಗದ್ದಮ್ಮ.. ಸ್ವಾಮಿ ನಾನು ತಳ್ಳಿಲ್ಲ.. ಅದೇಗೆ ಬಿದ್ದಿದಾದ್ನೋ ಗೊತ್ತಿಲ್ಲ.. ತಾನೇ ಬಿದ್ದು ನನ್ಮೆಲೆ ಸುಳ್ಳು ಆರೋಪ ಮಾಡ್ತಿದ್ದಾನೆ ಅಂತಿದ್ದಾಳೆ ಗದ್ದೆಮ್ಮ. ಅಲ್ಲಮ್ಮ ಗಂಡ ಹೆಂಡ್ತಿ ಇಬ್ಬರು ಊರಿಗೆ ಹೊರಟವು ಆ ಬ್ರಿಡ್ಜ್ ಮೇಲೆ ನಿಂತಿದ್ಯಾಕೆ ಅಂದ್ರೆ.. ಸಾರ್​ ಪ್ಲೇಸ್ ಚೆನ್ನಾಗಿತ್ತು. ಸ್ವಲ್ಪ ಹೊತ್ತು ನಿಂತು, ನೋಡಿ.. ಹೋಗೋಣ ಅಂದುಕೊಂಡಿದ್ವಿ.. ಆದ್ರೆ ಫೋಟೋ ತೆಗಿ ಅಂತೇಳಿ ನಿಂತವನು.. ಕಣ್ಮುಚ್ಚಿ ಬಿಡೋದ್ರಲ್ಲಿ ಬಿದ್ದೋಗಿದ್ದ ಅನ್ನೋದು ಗದ್ದೆಮ್ಮನ ವಾದ ಮಾಡ್ತಿದ್ದಾಳೆ.

‘ನಾನೂ ಜಂಪ್ ಮಾಡೋಕೆ ಹೋಗಿದ್ದೆ’

ವಿಡಿಯೋ ನೋಡಿದವರೆಲ್ಲ ಕೇಳ್ತಿರೋದು ಒಂದೇ. ಅಲ್ಲಮ್ಮ ಗಂಡ ನದಿಗೆ ಬಿದ್ರೆ ನಿನ್ನ ಕಣ್ಣಲ್ಲಿ ಒಂದೇ ಒಂದು ಹನಿ ನೀರು ಬರಲಿಲ್ಲ.. ಕೂಗಾಡಲ್ಲಿಲ್ಲ.. ಮೂಖ ಬಸವಣ್ಣ ನಿಂತಂಗೆ ನಿಂತಿದ್ಯಾಲ್ಲ ಅಂದ್ರೆ, ಅದ್ಕೆ ಗದ್ದೆಮ್ಮ ಹೇಳೋದೇನಂದ್ರೆ.. ಸಾರ್ ಗಂಡ ಬಿದ್ದಿದ್ದು ನೋಡಿ ನಾನು ನದಿಗೆ ಹಾರೋಕೆ ಹೋಗಿದ್ದೆ.. ಆದ್ರೆ ಅಲ್ಲಿ ಕಾಪಾಡೋಕೆ ಬಂದವರು ನನ್ನ ಬಿಡ್ಲಿಲ್ಲ.. ಆಮೇಲೆ ನೋಡಿದ್ರ ನನ್ನ ಗಂಡ ಹಂಗೆಲ್ಲ ಹೇಳ್ಬಿಟ್ಟಿದ್ದ ಅಂತಿದ್ದಾಳೆ.

ಇದನ್ನೂ ಓದಿ: ಗಂಡನನ್ನು ನದಿಗೆ ತಳ್ಳಿದ ಆರೋಪ ಕೇಸ್​ಗೆ ಟ್ವಿಸ್ಟ್.. ಸತ್ಯ ಬಿಚ್ಚಿಟ್ಟ ಪತ್ನಿ-VIDEO

publive-image

‘ತಪ್ಪು ಮಾಡಿಲ್ಲ.. ಹೊಡ್ದು ಬಡ್ದು ತವರು ಮನೆಗೆ ಬಿಟ್ಟೋದ್ರು’

ಬ್ಯಾರೇಜ್​ ಮೇಲೆ ಅಷ್ಟೆಲ್ಲ ಹೈಡ್ರಾಮಾ ನಡೆದ್ಮೆಲೆ.. ಇಬ್ಬರು ಬೇರೆ ಬೇರೆ ಬೈಕ್​ನಲ್ಲಿ ಊರಿಗೆ ತೆರಳಿದ್ದಾರೆ. ಆದ್ರೆ ಯಾವಾಗ ತಾತಪ್ಪ ನಡೆದಿರೋ ಘಟನೆ ಬಗ್ಗೆ ಹೇಳಿ.. ಗದ್ದೆಮ್ಮಳೇ ತನ್ನ ಕೊಲ್ಲೋದಕ್ಕೆ ಯತ್ನಿಸಿದ್ಳು ಅನ್ನೋ ಸ್ಫೋಟಕ ವಿಚಾರ ಹೇಳಿದ್ನೋ, ಗದ್ದೆಪ್ಪನ ಮನೆಯವರಿಗೂ ಶಾಕ್ ಆಗೋಗಿದೆ. ಕೊನೆಗೆ ನೀನು ನಮ್ಮ ಮನೆಯಲ್ಲೇ ಇರೋದೇ ಬೇಡಮ್ಮ ಅಂತ ಹೊಡೆದು ಬಡೆದು ತವರು ಮನೆಗೆ ಬಿಟ್ಟು ಹೋಗಿದ್ದಾರೆ ಅನ್ನೋ ಆರೋಪ ಮಾಡ್ತಿದ್ದಾಳೆ.

ಸೋದರತ್ತೆ ಮಗಳ ಜೊತೆ ಮದ್ವೆ! ಮೂರೇ ತಿಂಗಳಲ್ಲಿ ಆಗಿದ್ದೇನು?

ಇಂಟರ್​ಸ್ಟಿಂಗ್ ವಿಚಾರ ಏನಂದ್ರೆ ಗದ್ದೆಮ್ಮ ಮತ್ತು ತಾತಪ್ಪ ಹೊರಗಿನವರೇ ಏನೂ ಅಲ್ಲ. ದೂರದ ಸಂಬಂಧಿಗಳೇ ಆಗ್ಬೇಕು.. ತಾತಪ್ಪ ಗದ್ದೆಮ್ಮಗೆ ಅತ್ತೆ ಮಗನೇ ಆಗ್ಬೇಕು.. ಗದ್ದೆಮ್ಮ ತಾತಪ್ಪನ ತಾಯಿ ತಮ್ಮನ ಮಗಳು.. ಸೋದರಮಾವನ ಮಗಳನ್ನ ತಾತಪ್ಪ ಮದ್ವೆಯಾಗಿದ್ದ. ಹೊರಗಡೆ ಯಾಕೆ.. ನಮ್ಮ ಕಳ್ಳು ಬಳ್ಳಿ ಉಳಿಯುತ್ತೆ ಅನ್ನೋ ಕಾರಣಕ್ಕೆ ಹಿರಿಯರೆಲ್ಲ ಒಪ್ಪಿಯೇ ಮದ್ವೆ ಮಾಡಿದ್ರು. ಆದ್ರೆ ಮೂರೇ ತಿಂಗಳಲ್ಲಿ ಈ ಮದುವೆ ಡಿವೋರ್ಸ್ ಹಂತಕ್ಕೆ ಬಂತು ನಿಲ್ಲುತ್ತೆ ಅಂತ ಯಾರು ಅಂದುಕೊಂಡಿರಲ್ಲಿಲ್ಲ.

ಇದನ್ನೂ ಓದಿ: ಗಂಡನ ನದಿಗೆ ತಳ್ಳಿದ ಆರೋಪ ಕೇಸ್​.. ಗದ್ದೆಮ್ಮ ಬಗ್ಗೆ ತಾತಪ್ಪನ ಸಹೋದರನಿಂದ ಸ್ಫೋಟಕ ಹೇಳಿಕೆ

ಇಷ್ಟಪಟ್ಟು ಒಪ್ಪಿಯೇ ಮದ್ವೆಯಾಗಿದ್ದು. ಆದ್ರೆ ಯಾಕೆ ಇವರು ಈ ರೀತಿ ಆರೋಪ ಮಾಡ್ತಿದ್ದಾರೆ ಗೊತ್ತಿಲ್ಲ ಅಂತಿದ್ದಾಳೆ ಗದ್ದೆಮ್ಮ.. ನಮ್ಮ ಮಧ್ಯೆ ಯಾವ ಜಗಳನೂ ಇರಲ್ಲಿಲ್ಲ.. ಇಬ್ಬರು ಚೆನ್ನಾಗಿಯೇ ಇದ್ವಿ. ಈಗ ನೋಡಿದ್ರೆ ನೀನು ನಮಗೆ ಬೇಡ, ಡಿವೋರ್ಸ್ ಪೇಪರ್​ಗೆ ಸಹಿ ಮಾಡಿಕೊಡು ಅಂತಿದ್ದಾರೆ ಅಂತ ಗದ್ದೆಮ್ಮ ಅಳಲು ತೋಡಿಕೊಳ್ತಿದ್ದಾಳೆ. ಸದ್ಯ ಗದ್ದಮ್ಮ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಅನುಕಂಪ ಉಂಟಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಗದ್ದೆಮ್ಮ ಪರ ನೆಟ್ಟಿಗರು ಬ್ಯಾಟ್ ಮಾಡುತ್ತಿದ್ದಾರೆ. ಕೇಸ್ ದಾಖಲಿಸಿ ಸತ್ಯಾಸತ್ಯತೆ ಜನರಿಗೆ ತಿಳಿಸುವಂತೆ ಒತ್ತಾಯ ಮಾಡಿದ್ದಾರೆ. ಇತ್ತ ಪತಿ ತಾತಪ್ಪ ಈವರೆಗೂ ಯಾವುದೇ ಹೇಳಿಕೆಯೂ ನೀಡಿಲ್ಲ. ನದಿಗೆ ಬಿದ್ದು ಬಂದಾಗಿನಿಂದ ಮನೆಯಿಂದ ಹೊರಗೆ ಬರಲಿಲ್ಲ. ಹೀಗಾಗಿ ಗೂಡಾದ ತಾತಪ್ಪ, ಗದ್ದೆಮ್ಮ ವಿವಾದ ಗೊಂದಲದ ಗೂಡಾಗಿದೆ.

ಇದನ್ನೂ ಓದಿ: ಸೋತರೂ ಹೃದಯ ಗೆದ್ದ ಜಡೇಜಾ.. ಎಲ್ಲರಿಗೂ ಜಡ್ಡುನೇ ಬೇಕು, ಕ್ಯಾಪ್ಟನ್ಸ್​ ಫೇವರಿಟ್​​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment