/newsfirstlive-kannada/media/post_attachments/wp-content/uploads/2024/10/death.jpg)
ರಾಯಚೂರು: 3ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ರಜೆ ಇದ್ದ ಹಿನ್ನೆಲೆ ಜಮೀನಿನಲ್ಲಿ ಆಟವಾಡುತ್ತಿದ್ದಾಗ ಘೋರ ದುರಂತ ನಡೆದಿದೆ. ಕಲ್ಲು ಬಂಡೆ ಉರುಳಿ ಬಿದ್ದು ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.
ಲಿಂಗಸೂಗುರು ತಾಲೂಕಿನ ಗೌಡೂರು ತಾಂಡದಲ್ಲಿ ಈ ದಾರುಣ ಘಟನೆ ನಡೆದಿದೆ. ಮಂಜುನಾಥ್ (9), ವೈಶಾಲಿ (6) ರಘು (8) ಮೃತ ಮಕ್ಕಳು.
ಈ ಮಕ್ಕಳು ಜಾನುವಾರು ಮೇಯಿಸಲು ಪೋಷಕರ ಜೊತೆ ಜಮೀನಿಗೆ ಹೋದಾಗ ಈ ದುರ್ಘಟನೆ ನಡೆದಿದೆ. 3 ಮಕ್ಕಳು ಕಲ್ಲು ಬಂಡೆ ಒಳಗೆ ಸಿಲುಕಿದ್ದರು. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ ಕಾಲು ಮುರಿತಕ್ಕೊಳಗಾಗಿದ್ದ ರಘು ಕೂಡ ಸ್ವಲ್ಪ ಹೊತ್ತಿಗೆ ಪ್ರಾಣ ಬಿಟ್ಟಿದ್ದಾನೆ.
ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ.. ನಾಳೆಯೂ ನಿರಂತರ ಮಳೆ ಮುನ್ಸೂಚನೆ; ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!
ಮಂಜುನಾಥ, ವೈಶಾಲಿ, ರಘು, ಸ್ಕೂಲ್ ರಜೆ ಹಿನ್ನೆಲೆಯಲ್ಲಿ ಪೋಷಕರ ಜೊತೆಗೆ ಜಮೀನಿಗೆ ತೆರಳಿದ್ದರು. ಜಮೀನು ಬದಿಯಲ್ಲಿ ಹಾಕಿದ ಕಲ್ಲು ಬಂಡೆಗಳು ಜಾರಿ ಬಿದ್ದು ಈ ದುರ್ಘಟನೆ ನಡೆದಿದೆ.
ಕಲ್ಲು ಬಂಡೆಗಳ ಸುತ್ತಮುತ್ತ ಮಕ್ಕಳು ಆಟವಾಡುತ್ತಿದ್ದಾಗ ಕಲ್ಲು ಬಂಡೆ ಜಾರಿ ಬಿದ್ದಿದೆ. ಮಕ್ಕಳ ನರಳಾಟ ಕೇಳಿಸಿಕೊಂಡು ಪೋಷಕರು ಓಡಿ ಬಂದಿದ್ದಾರೆ. ಕಲ್ಲು ಬಂಡೆ ಎತ್ತಿಹಾಕುವಷ್ಟರಲ್ಲಿ ಮಕ್ಕಳು ಸಾವನ್ನಪ್ಪಿದ್ದು, ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ