newsfirstkannada.com

ಅಕ್ರಮ ಮರಳು ಸೀಜ್ ಮಾಡಿದ್ಕೆ ಪೇದೆ ಮೇಲೆ ಗೂಂಡಾಗಿರಿ; ಶಾಸಕಿ ಕರೆಮ್ಮ ಪುತ್ರ, ಸಹೋದರನ ವಿರುದ್ಧ ಗಂಭೀರ ಆರೋಪ

Share :

Published February 12, 2024 at 8:43am

  ಶಾಸಕಿ ಕರೆಮ್ಮ ನಾಯಕ್ ಪುತ್ರ ಹಾಗೂ ಸಹೋದರನ ಗೂಂಡಾಗಿರಿ

  ಐ.ಬಿಯಲ್ಲಿ ಪೊಲೀಸ್ ಪೇದೆ ಕೂಡಿ ಹಾಕಿ ಥಳಿಸಿದ ಆರೋಪ

  ಪುತ್ರ, ಸಹೋದರರ ಅಕ್ರಮಕ್ಕೆ ಸಾಥ್ ನೀಡಿದ್ರಾ ದೇವದುರ್ಗ ಶಾಸಕಿ?

ರಾಯಚೂರಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕೋರೆ ಇಲ್ಲದಂತಾಗಿದೆ. ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಧ್ವನಿ ಎತ್ತುವ ಮೂಲಕವೇ ಶಾಸಕಿಯಾಗಿದ್ದ ಕರೆಮ್ಮ ನಾಯಕ್​ ಅವರ ಮಗ, ಸಹೋದರರೇ ಈಗ ಅಕ್ರಮ ಮರಳು ಸಾಗಾಟ ಕಿಂಗ್​​ಪಿನ್​​​​​ಗಳಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮರಳು ಟ್ರ್ಯಾಕ್ಟರ್ ಸೀಜ್ ಮಾಡಿದ್ದ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಸಹ ಇದೆ.

ರಾಯಚೂರು ಜಿಲ್ಲೆ ದೇವದುರ್ಗ ಪೊಲೀಸ್ ಠಾಣೆಯ ಹನುಮಂತರಾಯ ನಾಯಕ್ ಎಂಬ ಪೇದೆಗೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಪುತ್ರ ಸಂತೋಷ್ ನಾಯಕ್, ಸಹೋದರ ತಿಮ್ಮಾರೆಡ್ಡಿ, ಆಪ್ತ ಕಾರ್ಯದರ್ಶಿ ಇಲಿಯಾಸ್, ರಾಮಣ್ಣ ನಾಯಕ್ ಸೇರಿದಂತೆ 8 ಮಂದಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ದೇವದುರ್ಗದ ಐ.ಬಿಗೆ ಪೇದೆ ಹನುಮಂತರಾಯನನ್ನು ಕರೆಸಿಕೊಂಡು ಕೊಠಡಿ ಬಂದ್ ಮಾಡಿ ಕರೆಂಟ್ ಹಾಗೂ ಸಿಸಿಟಿವಿ ಸಂಪರ್ಕ ತೆಗೆದು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಎಂಎಲ್​​ಎ ಮಗ ಸೇರಿ ಅಲ್ಲಿ (ಐಬಿ) ಒಂದು 20 ಮಂದಿ ಇದ್ದರು. ನಾನು ಹೋಗುತ್ತಿದ್ದಂತೆಯೇ ಬೀಗ ಹಾಕುತ್ತಾರೆ. ಅಲ್ಲಿ ಕರೆಸಿ ಯಾಕೆ ಹೊಡೆದರು ಗೊತ್ತಿಲ್ಲ. ನಾನೇನು ತಪ್ಪು ಮಾಡಿದ್ದೀನಿ? ನನಗೆ ಮಾತನ್ನಾಡಲು ಬಿಟ್ಟಿಲ್ಲ. ಒಟ್ಟು 8 ಮಂದಿ ಸೇರಿ ನನಗೆ ಹೊಡೆದಿದ್ದಾರೆ-ಹನುಮಂತರಾಯ, ಹಲ್ಲೆಗೊಳಗಾದ ಪೇದೆ

ಅಸಲಿಗೆ ಈ ಘಟನೆ ನಡೆಯೋದಕ್ಕೆ ಕಾರಣ ದೇವದುರ್ಗ ತಾಲೂಕಿನ ಕೃಷ್ಣಾ ನದಿ ಪಾತ್ರದ ದೊಡಂಬಳಿ ಹಾಗೂ ಗೋಪಾಳಪುರ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಮೂಲಕ ಅಕ್ರಮ ಮರಳು ದಂಧೆ ನಡೆಯುತ್ತಿದೆ. ನಿರಂತರ ಟಿಪ್ಪರ್ ಲಾರಿ ಹಾಗೂ ಟ್ರ್ಯಾಕ್ಟರ್​​ಗಳ ಓಡಾಟದಿಂದ ರೈತರು ಬಿತ್ತನೆ ಮಾಡಿದ ಮೆಣಸಿನಕಾಯಿ ಬೆಳೆ ಧೂಳನಿಂದಾಗಿ ನಷ್ಟವಾಗ್ತಿದೆ. ಈ ದೂರಿನ ಹಿನ್ನೆಲೆ ಸ್ಥಳ ಪರಿಶೀಲನೆಗೆ ಪೇದೆ ಹನುಮಂತರಾಯ ಸ್ಥಳಕ್ಕೆ ಹೋಗಿದ್ದೇ ಸಂತೋಷ್ ಅಂಡ್ ಟೀಂಗೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪುತ್ರ ಹಾಗೂ ಸಹೋದರರ ರೌಡಿಸಂ ಬಗ್ಗೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರತಿ ಚುನಾವಣೆಯಲ್ಲಿ ಜನ ಪ್ರತಿನಿಧಿಗಳು ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿ ತಮ್ಮ ಸೀಟು ಭದ್ರಪಡಿಸಿಕೊಳ್ಳೋದು ದೇವದುರ್ಗ ಕ್ಷೇತ್ರದಲ್ಲಿ ಸರ್ವೇ ಸಾಮಾನ್ಯವಾಗಿದೆ. ಪ್ರಮುಖವಾಗಿ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಒಂದು ಹೆಜ್ಜೆ ಮುಂದೋಗಿದ್ದರು. ಅಕ್ರಮ ಮರಳು ಮಾಫಿಯಾದವರು ನನ್ನನ್ನು ಸಾಯಿಸಲು ಪ್ಲ್ಯಾನ್ ಮಾಡ್ತಿದ್ದಾರೆ ಅಂತ ಹೇಳಿಕೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಅಕ್ರಮ ಮರಳು ಅಡ್ಡೆಗಳಲ್ಲಿ ಪ್ರತಿಭಟನೆ ನಡೆಸಿದ್ದರು. ವಿಪರ್ಯಾಸ ಅಂದ್ರೆ ಈಗ ಶಾಸಕರ ಪುತ್ರ, ಸಹೋದರ ಹಾಗೂ ಬೆಂಬಲಿಗರೇ ಮರಳು ಮಾಫಿಯಾ ಕಿಂಗ್​​ಪಿನ್​ಗಳಾಗಿರೋದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಕ್ರಮ ಮರಳು ಸೀಜ್ ಮಾಡಿದ್ಕೆ ಪೇದೆ ಮೇಲೆ ಗೂಂಡಾಗಿರಿ; ಶಾಸಕಿ ಕರೆಮ್ಮ ಪುತ್ರ, ಸಹೋದರನ ವಿರುದ್ಧ ಗಂಭೀರ ಆರೋಪ

https://newsfirstlive.com/wp-content/uploads/2024/02/RCR-MLA.jpg

Load More