newsfirstkannada.com

ದೆಹಲಿ ಚಲೋ ದಿನವೇ ಡಿಕೆಶಿ ಆಪ್ತನ ಮನೆ, ಕಚೇರಿ ಮೇಲೆ ರೇಡ್; IT ಅಧಿಕಾರಿಗಳಿಂದ ಪರಿಶೀಲನೆ

Share :

Published February 7, 2024 at 2:35pm

    ಸೋಲಾರ್ ಪ್ಲಾಂಟ್ ಕಾಮಗಾರಿಗಳ ಗುತ್ತಿಗೆದಾರ ಆಗಿರುವ ಆಪ್ತ

    ಡಿಸಿಎಂ ಶಿವಕುಮಾರ್ ಆಪ್ತ ಶಾಲೆಯೊಂದರ ಮಾಲೀಕರಾಗಿದ್ದಾರೆ

    ಜಾತ್ರೆ ನಿಮಿತ್ತ ಡಿಸಿಎಂ ಭೇಟಿ ನೀಡಿದ್ದ 1 ವಾರದಲ್ಲೇ ಆಪ್ತನ ಮನೆ ರೇಡ್

ಕೊಪ್ಪಳ: ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಆಪ್ತನ ಮನೆ ಹಾಗೂ ಕಚೇರಿ ಮೇಲೆ 30ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರೇಡ್ ಮಾಡಿದ್ದಾರೆ.

ಕೊಪ್ಪಳದ ಹೊಸಲಿಂಗಾಪುರ ಗ್ರಾಮದ ವೀರನಗೌಡ ಪಾಟೀಲ್ ಮನೆ ಮೇಲೆ ದಾಳಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ವೀರನಗೌಡ ಪಾಟೀಲ್ ಅವರು ಶಾರದ ಇಂಟರ್​​ನ್ಯಾಷನಲ್​ ಶಾಲೆಯ ಮಾಲೀಕರಾಗಿದ್ದಾರೆ. ಇದು ಅಲ್ಲದೇ ಸೋಲಾರ್ ಪ್ಲಾಂಟ್ ಕಾಮಗಾರಿಗಳ ಗುತ್ತಿಗೆದಾರನು ಆಗಿದ್ದಾರೆ. ಸದ್ಯ ಇವರ ಮನೆ ಮೇಲೆ ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳು ಇಂದು ಬೆಳಗ್ಗೆ 9 ಗಂಟೆಗೆ ದಾಳಿ ಮಾಡಿ, ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದೆಹಲಿ ಚಲೋ: ನಾಡಗೀತೆ ಹಾಡುವ ಮೂಲಕ ಪ್ರತಿಭಟನೆ ಶುರು ಮಾಡಿದ ಕಾಂಗ್ರೆಸ್​​​

ಇನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಶ್ರೀ ಗವಿಸಿದ್ದೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ವೀರನಗೌಡ ಪಾಟೀಲ್ ಜೊತೆ ಕೆಲ ಸಮಯ ಕಳೆದಿದ್ದರು. ಡಿಸಿಎಂ ಭೇಟಿ ನೀಡಿ ಒಂದು ವಾರ ಕಳೆಯುವಷ್ಟರಲ್ಲಿ ಆಪ್ತನ ಮನೆ ಹಾಗೂ ಕಚೇರಿ ಮೇಲೆ ದಾಳಿ ಅಧಿಕಾರಿಗಳು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿ ಚಲೋ ದಿನವೇ ಡಿಕೆಶಿ ಆಪ್ತನ ಮನೆ, ಕಚೇರಿ ಮೇಲೆ ರೇಡ್; IT ಅಧಿಕಾರಿಗಳಿಂದ ಪರಿಶೀಲನೆ

https://newsfirstlive.com/wp-content/uploads/2024/02/KPL_DK_FRIEND.jpg

Load More