newsfirstkannada.com

ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಎಚ್ಚರವಿರಲಿ! ಯಾವ ಪಬ್​-ಬಾರ್​​ ನೋಡಿದ್ರೂ ಇವರೇ!

Share :

Published September 10, 2023 at 8:42pm

    ನಶೆಯಲ್ಲಿ ತೇಲಾಡಿದ ಅಪ್ರಾಪ್ತ ಯುವತಿಯರು!

    ಪಬ್‌-ಬಾರ್, ಹುಕ್ಕಾ ಬಾರ್‌ಗಳ ಮೇಲೆ ರೇಡ್

    ನಗರದಾದ್ಯಂತ 510 ಕಡೆ ದಾಳಿ ಮಾಡಿದ ಸಿಸಿಬಿ

ಬೆಂಗಳೂರು: ಜನ ಎಂಜಾಯ್​ ಮಾಡೋಕೆ ಅಂತಾ ಪಬ್​ಗಳಿಗೆ ಹೋಗ್ತಾರೆ. ಅದಕ್ಕೆ ಯಾರ ಅಭ್ಯಂತರನೂ ಇಲ್ಲಾ ಬಿಡಿ. ಆದರೆ, ಇನ್ನೂ ಮೀಸೆ ಚಿಗುರದ ಯುವಕರು.. ಅಪ್ತಾಪ್ತ ಯುವತಿಯರು ಕೂಡ ಹೆಚ್ಚಾಗೇ ಅಲ್ಲಿ ಕಾಣಸಿಕೊಳ್ತಿದ್ದಾರೆ. ಇದರ ಬಗ್ಗೆ ಕಂಪ್ಲೆಂಟ್​ ಮೇಲೆ ಕಂಪ್ಲೆಂಟ್​ಗಳು ಬರ್ತಾನೆ ಇದ್ವು. ಕೊನೆಗೂ ಮಿಂಚಿನ ಸಂಚಾರ ಮಾಡಿದ ಸಿಟಿ ಪೊಲಿಸರು ದಾಖಲೆಯ ರೇಡ್​ ಮಾಡಿದ್ದಾರೆ.

ಹಾಡು.. ಡ್ಯಾನ್ಸ್‌.. ಮಸ್ತಿ.. ಕುಡಿತ ಅಬ್ಬಾಬ್ಬ ಲೈಫು ಎಷ್ಟು ಬಿಂದಾಸ್‌ ಇದೆ ಅಲ್ವಾ ಇವರದ್ದು ಅಂತಾ ಥಟ್ ಅಂತಾ ನೆನಪಾಗುತ್ತೆ. ಆದ್ರೆ ಇಂತಾ ಪಬ್‌-ಬಾರ್‌, ಹುಕ್ಕಾ ಬಾರ್‌ಗಳಲ್ಲಿ ಇರೋರು ಬಹುತೇಕರು ಅಪ್ರಾಪ್ತರಂತೆ. ಇತ್ತೀಚೆಗೆ ಬೆಂಗಳೂರಿನ 510 ಪಬ್‌-ಬಾರ್, ಹುಕ್ಕಾ ಬಾರ್‌ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 20ಕ್ಕೂ ಹೆಚ್ಚು ಅಪ್ರಾಪ್ತರು ಮದ್ಯಸೇವನೆ ನಶೆಯಲ್ಲಿ ತೇಲಾಡ್ತಿರೋದು ಪತ್ತೆಯಾಗಿದೆ.

ಕೋರಮಂಗಲ, ಇಂದಿರಾನಗರ, ಎಚ್‌ಎಸ್‌ಆರ್‌ ಲೇಔಟ್, ಬಾಣಸವಾಡಿ, ಹೆಣ್ಣೂರು ಸೇರಿದಂತೆ ಎಲ್ಲ ಕಡೆ ಸಿಸಿಬಿ ದಾಳಿ ನಡೆಸಿತ್ತು. ದಾಳಿ ವೇಳೆ ಅಪ್ರಾಪ್ತ ಯುವತಿಯರು ಮಾಜಿ-ಹಾಲಿ ಶಾಸಕರ ಹೆಸರೇಳಿದ್ದಾರೆ. ಬಾಣಸವಾಡಿಯ ಪಬ್‌ ಒಂದರಲ್ಲಿ ಅಪ್ರಾಪ್ತ ಯುವತಿಯರು ಮದ್ಯ ಸೇವಿಸಿರೋದು ಪತ್ತೆಯಾಗಿದ್ದು, ನಾವು ಎಂಎಲ್‌ಎ ಕಡೆಯವರು ಅಂತಾ ಪೊಲೀಸ್ರ ಮೇಲೆಯೇ ವಾಗ್ವಾದಕ್ಕಿಳಿದ್ದ ಘಟನೆ ನಡೆದಿದೆ. ಅಲ್ಲದೇ ಸೀರಿಯಲ್ ಆರ್ಟಿಸ್ಟ್‌ಗಳು ಕೂಡ ಪೊಲೀಸ್ರ ಜೊತೆ ಗಲಾಟೆ ಮಾಡಿದ್ದಾರೆ ಅಂತಾ ತಿಳಿದುಬಂದಿದೆ. ಇನ್ನು, ಅಪ್ರಾಪ್ತರಿಗೆ ಎಣ್ಣೆ ಸಪ್ಲೈ ಮಾಡಿದ ಆರೋಪದಲ್ಲಿ ಪಬ್ ಬಾರ್‌ಗಳ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಇನ್ನು, 400ಕ್ಕೂ ಹೆಚ್ಚು ಕಡೆ ಹುಕ್ಕಾ ಬಾರ್‌ ನಡೆಸ್ತಿರೋದ್ರ ಬಗ್ಗೆ ಲೊಕೇಷನ್ ಸಮೇತ ಗಿರೀಶ್ ಕುಮಾರ್ ಎಂಬುವವರು ಇದುವರೆಗೂ 37 ದೂರು ನೀಡಿದ್ದಾರೆ. ದಾಖಲೆ ಸಮೇತ ಪೊಲೀಸ್​ ಕಮಿಷನರ್‌ ದಯಾನಂದ್‌ ಅವ್ರಿಗೆ ದೂರು ನೀಡಿದ್ರು. ಇದೀಗ ತಡರಾತ್ರಿ ಏಕಕಾಲಕ್ಕೆ 510 ಕಡೆ ಸಿಸಿಬಿ ದಾಳಿ ನಡೆಸಿದೆ.

ಹಲವು ಕಡೆ ನಿಯಮ ಉಲ್ಲಂಘನೆ

ದಾಳಿ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದು, ಅಪ್ರಾಪ್ತ ಮಕ್ಕಳಿಗೆ ಮದ್ಯ ನೀಡೋದು. ಡ್ರಗ್ಸ್‌ ಸರಬರಾಜು ಸೇರಿ ವಿವಿಧ ಕಾರಣಗಳಿಗೆ ದಾಳಿ ನಡೆದಿದೆ. ಕೆಲವು ಕಡೆ ನಿಯಮ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ರು.
ಒಟ್ನಲ್ಲಿ ನಗರದಲ್ಲಿ ನಡೆದಿರೋ ಈ ಮಹಾರೇಡ್‌ಗೆ ಪಬ್‌-ಬಾರ್, ಹುಕ್ಕಾ ಬಾರ್‌ ಮಾಲೀಕರು ಥಂಡಾ ಹೊಡೆದಿದ್ದಾರೆ.

ಯಾಯ್ಯಾವ ಕಡೆ ಅಕ್ರಮವಾಗಿ ಮದ್ಯ, ಡ್ರಗ್ಸ್‌ ಸಪ್ಲೈ ಆಗ್ತಿತ್ತೋ ಅಂತವರ ಮೇಲೆ ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತೆ ಅನ್ನೋದು ಕಾದುನೋಡಬೇಕಿದೆ. ಆದರೂ ಇನ್ನೂ 18 ವರ್ಷ ತುಂಬದೇ ಇದ್ರೂ ಅಪ್ತಾಪ್ತರು ಮದ್ಯ ಮತ್ತು ಮಾದಕ ವಸ್ತು ಸೇವನೆ ಮಾಡ್ತಿರೋದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.

ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಎಚ್ಚರವಿರಲಿ! ಯಾವ ಪಬ್​-ಬಾರ್​​ ನೋಡಿದ್ರೂ ಇವರೇ!

https://newsfirstlive.com/wp-content/uploads/2023/09/Pub_Bar.jpg

Load More