/newsfirstlive-kannada/media/post_attachments/wp-content/uploads/2023/06/Train-1.jpg)
ನವದೆಹಲಿ: ಭಾರತೀಯ ರೈಲ್ವೆ ಸಚಿವಾಲಯವು ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಯದಲ್ಲಿ ಹೊಸ ಬದಲಾವಣೆ ಜಾರಿ ಮಾಡಿದೆ. ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಬೇಕೆಂದರೆ IRCTC ಅಧಿಕೃತ ವೆಬ್ಸೈಟ್ ಅಥವಾ ಆ್ಯಪ್ಗೆ ಆಧಾರ್ ಲಿಂಕ್ ಆಗಿರುವುದನ್ನು ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ: ಅಣ್ಣಾವ್ರ ಮನೆಯಲ್ಲಿ ಅಮೃತಾಧಾರೆ ಸೀರಿಯಲ್ ನಟ ರಾಜೇಶ್ ನಟರಂಗ್; ಏನಾದ್ರೂ ವಿಶೇಷ ಉಂಟಾ?
ಹೀಗಾಗಿ ಇನ್ಮುಂದೆ ಆಧಾರ್ ಲಿಂಕ್ ಹೊಂದಿರುವ ಬಳಕೆದಾರರು ಮಾತ್ರ ತತ್ಕಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಏಜೆಂಟ್ಗಳ ಮೇಲೆ ಸಮಯದ ನಿರ್ಬಂಧ ಹೇರಿದೆ. ಈ ಬಗ್ಗೆ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದ್ದು, ಈ ಹೊಸ ನಿಯಮ ಜುಲೈ 1ರಿಂದ ಭಾರತೀಯ ರೈಲ್ವೆಯ ಅಧಿಕೃತ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವವರು ಆಧಾರ್ ದೃಢೀಕರಣ ಮಾಡಿಕೊಳ್ಳಬೇಕು ಎಂದು ಸಚಿವಾಲು ಹೇಳಿದೆ. ಜುಲೈ 15ರಿಂದ ತತ್ಕಾಲ್ ನಲ್ಲಿ ಟಿಕೆಟ್ ಬುಕ್ ಮಾಡಲು ಆಧಾರ್ ಕಾರ್ಡ್ OTP ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. OTP ದೃಢೀಕರಣದ ನಂತರವೇ ಪಿಆರ್ ಎಸ್ ಕೌಂಟರ್ಗಳ ಮೂಲಕ ಬುಕ್ಕಿಂಗ್ ಮಾಡಲು ತತ್ಕಾಲ್ ಟಿಕೆಟ್ ಲಭ್ಯವಿರುತ್ತವೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ಮುಂದೆ ಏಜೆಂಟ್ಗಳಿಗೆ ತತ್ಕಾಲ್ ಬುಕಿಂಗ್ ನಿರ್ಬಂಧ!
ಹೌದು, ತತ್ಕಾಲ್ ಟಿಕೆಟ್ ಸಾಮಾನ್ಯ ಜನರಿಗೆ ಸಿಗಲಿ ಎನ್ನುವ ಉದ್ದೇಶದಿಂದ ರೈಲ್ವೆ ಸಚಿವಾಲಯವು ಮಹತ್ತರ ಬದಲಾವಣೆಯೊಂದನ್ನು ತಂದಿದೆ. ಭಾರತೀಯ ರೈಲ್ವೆಯ ಅಧಿಕೃತ ಏಜೆಂಟ್ಗಳಿಗೆ ತತ್ಕಾಲ್ ಟಿಕೆಟ್ ಆರಂಭವಾಗುವ ಮೊದಲ 30 ನಿಮಿಷದಲ್ಲಿ ಬುಕಿಂಗ್ ಮಾಡುವ ಅವಕಾಶವನ್ನು ನಿರ್ಬಂಧಿಸಿದೆ. ಅಂದರೆ ಬೆಳಗ್ಗೆ 10 ರಿಂದ 10.30ರವರೆಗೆ ಎಸಿ, ಬೆಳಗ್ಗೆ 11 ರಿಂದ 11.30ರವರೆಗೆ ಆರಂಭವಾಗುವ ನಾನ್ ಎಸಿ ಟಿಕೆಟ್‌ಗಳನ್ನು ಬುಕ್ ಮಾಡುವುದಕ್ಕೆ ಏಜೆಂಟ್ಗಳಿಗೆ ಅವಕಾಶ ನೀಡಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ