/newsfirstlive-kannada/media/post_attachments/wp-content/uploads/2024/09/JOBS_RAILWAYS.jpg)
ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ D ಹುದ್ದೆಗಳನ್ನು ಬೃಹತ್ ಮಟ್ಟದಲ್ಲಿ ನೇಮಕ ಮಾಡುತ್ತಿದೆ. ಅರ್ಜಿಗಳು ಜನವರಿ 23 ಅಂದರೆ ನಾಳೆಯಿಂದಲೇ ಪ್ರಾರಂಭವಾಗಲಿವೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವ ಎಲ್ಲರೂ ಇವುಗಳಿಗೆ ಅಪ್ಲೇ ಮಾಡಬಹುದು. ಅಧಿಕೃತ ಅಧಿಸೂಚನೆಯನ್ನು ಜನವರಿ 21ರಂದೇ ಪ್ರಕಟಿಸಲಾಗಿದೆ. ಅಧಿಸೂಚನೆ, ಖಾಲಿ ಹುದ್ದೆಗಳ ಸಂಖ್ಯೆ, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ, ಅಪ್ಲಿಕೇಶನ್ ವಿಧಾನ ಮತ್ತು ಇತರ ಅಗತ್ಯ ಮಾಹಿತಿ ಇಲ್ಲಿ ನೀಡಲಾಗಿದೆ.
ಈ ರೈಲ್ವೆ ಕೆಲಸಗಳಿಗೆ 33 ವರ್ಷದ ಒಳಗಿನ ಎಲ್ಲ ಅಭ್ಯರ್ಥಿಗಳಿಗೆ ಅವಕಾಶ ಇದೆ. ಕೇಂದ್ರ ಸರ್ಕಾರದಡಿ ರೈಲ್ವೆ ಇಲಾಖೆ ಬರುವುದರಿಂದ ಆಯ್ಕೆ ಆದ ಅಭ್ಯರ್ಥಿಗಳನ್ನು ದೇಶದ ಯಾವುದೇ ಪ್ರದೇಶದಲ್ಲಿ ಕೆಲಸಕ್ಕೆ ನೇಮಕ ಮಾಡಬಹುದು. ಉತ್ತಮ ಮಟ್ಟದ ಸಂಬಳದೊಂದಿಗೆ ಭತ್ಯ ನೀಡುತ್ತದೆ. ಹಲವು ವರ್ಷಗಳಿಂದ ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶ. ಇನ್ನು ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್ ಆಗಿದೆ.
ರೈಲ್ವೆ ಇಲಾಖೆಯು ದೇಶಾದ್ಯಂತ 32,438 ಗ್ರೂಪ್- ಡಿ ಉದ್ಯೋಗಗಳನ್ನು ಭರ್ತಿ ಮಾಡುತ್ತಿದ್ದು ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕವಾಗಿ ವೇತನ ಆರಂಭದಲ್ಲಿ 18,000 ರೂಪಾಯಿಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ವಿದ್ಯಾರ್ಹತೆಗೆ ಬಂದರೆ 10ನೇ ತರಗತಿ ಪಾಸ್ ಆಗಿದ್ದರೇ ಸಾಕು. ಇದರ ಜೊತೆ ಐಟಿಐ ಅಥವಾ ಡಿಪ್ಲೋಮಾ ಪೂರ್ಣಗೊಳಿಸಿದ್ದರೇ ನಿಮ್ಮ ಆಯ್ಕೆ ಸುಲಭವಾಗಲಿದೆ. ಅರ್ಜಿ ಸಲ್ಲಿಕೆ ಮಾಡುವ ಜನರಲ್, ಇಡಬ್ಲುಎಸ್, ಒಬಿಸಿ ಆಕಾಂಕ್ಷಿಗಳು 500 ರೂಪಾಯಿ, ಎಸ್ಸಿ, ಎಸ್ಟಿ, ಮಹಿಳೆ, ವಿಶೇಷ ಚೇತನ ಅಭ್ಯರ್ಥಿಗಳು 250 ರೂಪಾಯಿಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು.
ಇದನ್ನೂ ಓದಿ: Supreme Court ಇಂದ ಉದ್ಯೋಗಗಳ ಆಹ್ವಾನ.. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೇಗಿದೆ?
ವಯಸ್ಸು ಹಾಗೂ ವಯೋಮಿತಿ ಸಡಿಲಿಕೆ ಹೇಗಿದೆ?
ಗ್ರೂಪ್ ಡಿ ಉದ್ಯೋಗಗಳಿಗೆ ದೇಶಾದ್ಯಂತ ಅರ್ಜಿ ಸಲ್ಲಿಕೆಯು 23 ಜನವರಿ 2025 ರಿಂದ ಆರಂಭವಾಗಿ 22 ಫೆಬ್ರವರಿ 2025ಕ್ಕೆ ಕೊನೆಗೊಳ್ಳುತ್ತದೆ. 18 ರಿಂದ 33 ವರ್ಷಗಳ ಒಳಗಿನವರಿಗೆ ಮಾತ್ರ ಈ ಕೆಲಸಗಳಿಗೆ ಅರ್ಹರು ಆಗಿರುತ್ತಾರೆ. ಅಲ್ಲದೇ ವರ್ಗವಾರು ವಯೋಮಿತಿ ಸಡಿಲಿಕೆ ನೀಡಲಾಗಿದ್ದು ಎಸ್ಸಿ, ಎಸ್ಟಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ವಿಶೇಷ ಚೇತನರಿಗೆ 10 ವರ್ಷ ಸಡಿಲಿಕೆ ಇದೆ. ಉದ್ಯೋಗಕ್ಕೆ ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ಇರುತ್ತದೆ.
- ಕಂಪ್ಯೂಟರ್ ಬೇಸಡ್ ಟೆಸ್ಟ್ (ಸಿಬಿಟಿ)
- ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ)
- ಪುರುಷರು- 35 ಕೆಜಿ ಭಾರ ಎತ್ತಬೇಕು ಹಾಗೂ 4 ನಿಮಿಷದಲ್ಲಿ 1000 ಮೀಟರ್ ಓಡಬೇಕು
- ಮಹಿಳೆಯರು- 20 ಕೆಜಿ ಭಾರ ಎತ್ತಬೇಕು ಹಾಗೂ 5 ನಿಮಿಷದಲ್ಲಿ 1000 ಮೀಟರ್ ಓಡಬೇಕು
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಲ್ಲಿ ಈ ದಾಖಲೆ ಇರಬೇಕು
- ಯಾವುದಾದರೂ ಸರ್ಕಾರ ನೀಡಿದ ಗುರುತಿನ ಚೀಟಿ
- ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರಗಳು
- ಜಾತಿ ಪ್ರಮಾಣ ಪತ್ರ
- ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
- 2 ಪಾಸ್ಪೋಟೋಗಳು ಮತ್ತು ಸಹಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ