/newsfirstlive-kannada/media/post_attachments/wp-content/uploads/2025/01/JOB_Railway-3.jpg)
ರೈಲ್ವೆ ನೇಮಕಾತಿ ಮಂಡಳಿ (RRB)ಯು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಉದ್ಯೋಗ ನೇಮಕಾತಿ ಮಾಡುತ್ತಿದೆ. ಈ ಸಂಬಂಧ ನೋಟಿಫಿಕೆಶನ್ ರಿಲೀಸ್ ಮಾಡಲಾಗಿದ್ದು ಅರ್ಜಿಗಳು ಈ ತಿಂಗಳಿನಿಂದಲೇ ಆರಂಭಗೊಳ್ಳಲ್ಲಿವೆ. 33 ವರ್ಷದ ಒಳಗಿನ ಎಲ್ಲ ಅಭ್ಯರ್ಥಿಗಳು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಕೇಂದ್ರ ಸರ್ಕಾರದಡಿ ರೈಲ್ವೆ ಇಲಾಖೆ ಬರುವುದರಿಂದ ಆಯ್ಕೆ ಆದ ಅಭ್ಯರ್ಥಿಗಳನ್ನು ದೇಶದ ಯಾವುದೇ ಪ್ರದೇಶದಲ್ಲಿ ಕೆಲಸಕ್ಕೆ ನೇಮಕ ಮಾಡಬಹುದು.
ಆರ್​ಆರ್​ಬಿ 2025ರ ಆರಂಭದಲ್ಲೇ ದೊಡ್ಡ ಮಟ್ಟದ ರೈಲ್ವೆ ನೇಮಕಾತಿ ಮಾಡುತ್ತಿರುವುದು ಆಕಾಂಕ್ಷಿಗಳಿಗೆ ಸಂತಸ ಸುದ್ದಿ ಎನ್ನಬಹುದು. ಹಲವಾರು ವರ್ಷಗಳಿಂದ ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಇದು ಉತ್ತಮವಾದ ಅವಕಾಶ ಆಗಿದೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್ ಆಗಿದೆ. ಹೀಗಾಗಿ ಬೇರೆ ಮೂಲದಿಂದ ಬರುವ ಅರ್ಜಿಗಳನ್ನು ಸ್ವೀಕಾರ ಮಾಡಲ್ಲ ಎಂದು ಇಲಾಖೆ ತಿಳಿಸಿದೆ. ಈ ಡಿ- ಗ್ರೂಪ್ ಉದ್ಯೋಗಕ್ಕೆ ಭಾರತದಾದ್ಯಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದೆ.
ಉದ್ಯೋಗದ ಹೆಸರು-
ರೈಲ್ವೆ ಇಲಾಖೆಯ ಗ್ರೂಪ್- ಡಿ ಉದ್ಯೋಗ
ವೇತನ ಶ್ರೇಣಿ-
ಆರಂಭದಲ್ಲಿ 18,000 ರೂಪಾಯಿಗಳು
ವಿದ್ಯಾರ್ಹತೆ
10ನೇ ತರಗತಿ ಪಾಸ್ ​
ಐಟಿಐ ಅಥವಾ ಡಿಪ್ಲೋಮಾ ಓದಿದ್ದರೇ ಹೆಚ್ಚು ಉತ್ತಮ
ಇದನ್ನೂ ಓದಿ: SBIನಲ್ಲಿ 13,735 ಉದ್ಯೋಗಗಳು.. ಕೆಲವೇ ದಿನಗಳು ಬಾಕಿ, ಈ ಕೂಡಲೇ ಅಪ್ಲೇ ಮಾಡಿ
/newsfirstlive-kannada/media/post_attachments/wp-content/uploads/2025/01/JOB_Railways-2.jpg)
ಅರ್ಜಿ ಶುಲ್ಕ ಎಷ್ಟು ಪಾವತಿ ಮಾಡಬೇಕು?
ಜನರಲ್, ಇಡಬ್ಲುಎಸ್, ಒಬಿಸಿ- 500 ರೂಪಾಯಿ
ಎಸ್​ಸಿ, ಎಸ್​​ಟಿ, ಮಹಿಳೆ, ವಿಶೇಷ ಚೇತನ- 250 ರೂಪಾಯಿ
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಲ್ಲಿ ಈ ದಾಖಲೆಗಳು ಇರಲೇಬೇಕು
ಯಾವುದಾದರೂ ಗುರುತಿನ ಚೀಟಿ
ಶೈಕ್ಷಣಿಕ ಪ್ರಮಾಣಪತ್ರಗಳು
ಜಾತಿ ಪ್ರಮಾಣ ಪತ್ರ
ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
ಪಾಸ್​ಪೋಟೋಗಳು
ಸಹಿ
ವಯಸ್ಸು ಹಾಗೂ ವಯೋಮಿತಿ ಸಡಿಲಿಕೆ
- 18 ವರ್ಷದಿಂದ 33 ವರ್ಷ
- ಎಸ್​ಸಿ, ಎಸ್​​ಟಿ- 5 ವರ್ಷ
- ಒಬಿಸಿ ಅಭ್ಯರ್ಥಿ- 3 ವರ್ಷ
- ವಿಶೇಷ ಚೇತನರು- 10 ವರ್ಷ
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
- ಕಂಪ್ಯೂಟರ್ ಬೇಸಡ್ ಟೆಸ್ಟ್ (ಸಿಬಿಟಿ)
- ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ)
ಪುರುಷರು- 35 ಕೆಜಿ ಭಾರ ಎತ್ತಬೇಕು ಹಾಗೂ 4 ನಿಮಿಷದಲ್ಲಿ 1000 ಮೀಟರ್ ಓಡಬೇಕು
ಮಹಿಳೆಯರು- 20 ಕೆಜಿ ಭಾರ ಎತ್ತಬೇಕು ಹಾಗೂ 5 ನಿಮಿಷದಲ್ಲಿ 1000 ಮೀಟರ್ ಓಡಬೇಕು - ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 23 ಜನವರಿ 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 22 ಫೆಬ್ರವರಿ 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us