/newsfirstlive-kannada/media/post_attachments/wp-content/uploads/2025/02/SECURITY-INCREASE.jpg)
ಮಹಾಕುಂಭಮೇಳವೆಂಭ ಮಹಾಮಹೋತ್ಸವದ ಈಗ ಅಂತಿಮ ಚರಣದಲ್ಲಿದೆ. ಈಗಾಗಲೇ 56 ಕೋಟಿ ಜನ ಭಕ್ತರು ಗಂಗೆಯಲ್ಲಿ ಮಿಂದೆದ್ದಿದ್ದಾರೆ. ಆದರೆ ಇನ್ನೂ ಕೂಡ ಪ್ರಯಾಗರಾಜ್ಗೆ ಹರಿದು ಬರುವ ಭಕ್ತಾದಿಗಳ ಸಂಖ್ಯೆ ಹಾಗೆಯೇ ಮುಂದುವರಿದಿದೆ. ಈ ಮಹಾಕುಂಭಮೇಳದ ಪುಣ್ಯಸ್ನಾನವು ಫೆಬ್ರವರಿ 26ಕ್ಕೆ ಮುಗಿಯಲಿದೆ. ಅದರಲ್ಲೂ ಇದೇ ವಾರದಲ್ಲಿ ಮಹಾಶಿವರಾತ್ರಿಯೂ ಕೂಡ ಬರಲಿದ್ದು. ಪ್ರಯಾಗರಾಜ್ಗೆ ಈ ಐದು ದಿನದಲ್ಲಿ ಹರಿದು ಬರುವ ಭಕ್ತಕೋಟಿಯ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಅದರಲ್ಲೂ ವಾರದ ಕೊನೆಗೆ ವಿಪರೀತ ಜನಸೇರುವ ನಿರೀಕ್ಷೆಯೂ ಇದೆ ಹೀಗಾಗಿ ರೈಲ್ವೆ ಇಲಾಖೆ ಈ ಹಿಂದಾದ ಕಾಲ್ತುಳಿತದಂತಹ ಹಾಗೂ ಪ್ರಯಾಣಿಕರು ಗ್ಲಾಸ್ ಒಡೆದಂತ ದುರಂತಗಳು ನಡೆಯದಂತೆ ತುಂಬಾ ಕಟ್ಟುನಿಟ್ಟಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ.
ಪಂಡಿತ್ ದೀನದಯಾಳ ಉಪಾಧ್ಯಾಯ್ ಜಂಕ್ಷನ್ ಉತ್ತರಪ್ರದೇಶದಲ್ಲಿ ಅತಿಹೆಚ್ಚು ಬಿಗಿ ಭದ್ರತೆಯನ್ನು ಮಾಡಲಾಗಿದೆ. ಜನಜಂಗುಳಿಯನ್ನು ನಿಯಂತ್ರಣ ಮಾಡಲೆಂದೇ ಕೆಲವು ಸಿಬ್ಬಂದಗಳನ್ನು ರೈಲ್ವೆಸ್ಟೇಷನ್ ಆಚೆಗೆ ನಿಯೋಜಿಸಲಾಗಿದೆ. ಅದರಲ್ಲೂ ಬಿಹಾರ, ಪಶ್ಚಿಮ ಬಂಗಾಲ, ಜಾರ್ಖಂಡ್ ಹಾಗೂ ಓಡಿಶಾದಿಂದ ಬರುವ ಕೀ ಗೇಟ್ವೇಗಳನ್ನು ಬಹಳ ಕಟ್ಟುನಿಟ್ಟಾಗಿ ನಿಭಾಯಿಸುವಂತೆ ಭದ್ರತಾ ಪಡೆಯನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಮಹಾಕುಂಭಮೇಳ ಮುಗಿಸಿ ಅಯೋಧ್ಯೆಗೆ ತೆರಳುವಾಗ ಭೀಕರ ಅಪಘಾತ; ಒಂದೇ ಕುಟುಂಬದ 5 ಮಂದಿ ಸಾವು
ಇದರೊಂದಿಗೆ ದೀನ್ ದಯಾಳ ಉಪಾಧ್ಯಾಯ್ ರೈಲ್ವೆ ಜಂಕ್ಷನ್ನಲ್ಲಿ ಅನಧಿಕೃತ ಪ್ರಯಾಣಿಕರನ್ನು ನಿರ್ಬಂಧಿಸಲಾಗಿದ್ದು ಟಿಕೆಟ್ ಚೆಕ್ಕಿಂಗ್ ಹಾಗೂ ಸೆಕ್ಯೂರಿಟಿ ಸಿಬ್ಬಂದಿಯನ್ನು ಕೂಡ ಹೆಚ್ಚಿಸಲಾಗಿದೆ.
ಇದರ ಬಗ್ಗೆ ಮಾತನಾಡಿದ ಉತ್ತರ ಮಧ್ಯ ರೈಲ್ವೆ CPRO ಶಶಿಕಾಂತ್ ತ್ರಿಪಾಠಿ ರೈಲ್ವೆ ಇಲಾಖೆ ಮಹಾಕುಂಭಮೇಳದ ಆರಂಭಿದಿಂದಲೂ ಬಿಗಿಭದ್ರತೆಗೆ ಹೆಚ್ಚು ಪ್ರಧಾನ್ಯತೆಯನ್ನು ನೀಡಿದೆ. ಈ ಬಾರಿ ವಿಕೇಂಡ್ನಲ್ಲಿ ಬರುವ ಜನದಟ್ಟಣೆಯನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಭರಸೆಯನ್ನು ಕೊಟ್ಟಿದ್ದಾರೆ.
ಒಂದು ವೇಳೆ ಜನದಟ್ಟಣೆ ಹೆಚ್ಚಾದರೆ ರೈಲ್ವೆ ಸ್ಟೇಷನ್ನಲ್ಲಿ ಒಂದೇ ಎಂಟ್ರಿ ಹಾಗೂ ಒಂದೇ ಎಕ್ಸಿಟ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಪ್ರಯಾಣಿಕರನ್ನು ಒಂದು ಕಡೆಯಿಂದ ಪ್ರವೇಶ ಪಡೆದು ಮತ್ತೊಂದು ಕಡೆಯಿಂದ ಆಚೆ ಹೋಗುವ ವ್ಯವಸ್ಥೆಯನ್ನೂ ಕೂಡ ಈಗ ಮಾಡಿಕೊಳ್ಳಲಾಗಿದೆ ಎಂದು ತ್ರಿಪಾಠಿ ಹೇಳಿದ್ದಾರೆ.
ಇನ್ನು ಹಲವ ಬಣ್ಣಗಳ ಹೋಲ್ಡಿಂಗ್ಸ್ಗಳನ್ನು ಪ್ರಯಾಣಿಕರಿಗೆ ಯಾವ ಕಡೆಗೆ ಹೋಗಬೇಕು ಎಂಬುದನ್ನು ತಿಳಿಸುವ ಸಲುವಾಗಿ ಅಳಡಿಸಲಾಗಿದೆ. ಈ ಮೂಲಕ ಹಲವು ಮಾರ್ಗಗಳನ್ನು ತೆರೆಯಲಾಗಿದ್ದು ಜನದಟ್ಟಣೆಯನ್ನು ಸರಳವಾಗಿ ನಿಯಂತ್ರಿಸಬಹುದು ಎಂದು ಹೇಳಲಾಗಿದೆ. ಒಂದು ವೇಳೆ ಅವಶ್ಯಕತೆ ಪ್ರಯಾಣಿಕರ ರೈಲು ಬರುವವರೆಗೂ ಅವರಿಗೆ ಉಳಿದುಕೊಳ್ಳಲು ಖುಸ್ರೋ ಭಾಗ್ ಬಳಿ ವ್ಯವಸ್ಥೆಯನ್ನು ಮಾಡಲಾಗಿದೆ. ಅದರಲ್ಲೂ ರೈಲ್ವೆ ಇಲಾಖೆ ಮಹಾಶಿವರಾತ್ರಿ ದಿನದಂದು ಸರಳ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ದೇಶದ ಎಲ್ಲಾ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಮಹಾಕುಂಭಮೇಳದಲ್ಲಿ ಒಬ್ಬ ಚಮತ್ಕಾರಿ ಬಾಬಾ; ಕಾಲಿನಿಂದ ಟಚ್ ಮಾಡಿದ್ರೆ ಸಾಕಂತೆ! ಏನಿವರ ಪವಾಡ?
ಇದಕ್ಕಾಗಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್, ಗವರ್ನಮೆಂಟ್ ರೈಲ್ವೆ ಪೊಲೀಸ್, ಮತ್ತು ಆರ್ಪಿಎಫ್ ಹಾಗೂ ಕೊರಸ್ನ್ನು ಕೂಡ ಜನದಟ್ಟಣೆ ನಿರ್ವಹಣೆಗೆ ನಿಯೋಜಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ರೈಲ್ವೆ ಅಧಿಕಾರಿಗಳಾದ ಡಿಎಂಆರ್ ರಾಜೇಶ್ ಗುಪ್ತಾ, ಸಿನಯರ್ ಡಿಸಿಎಂ ಸುಧಾಂಶು ಕುಮಾರ್, ಸಿನಿಯರ್ ಡಿಒಎಮ್ ಮಹಮ್ಮದ್ ಇಕ್ಬಾಳ್ ಮತ್ತು ಆರ್ಎಫ್ ಕಮಾಂಡೆಂಟ್ ಜತಿನ್ ಬಿ ರಾಜ್ ಇವರೆಲ್ಲರೂ ಕೂಡ ಸರಳ ಮತ್ತು ಸುರಕ್ಷಿತವಾದ ರೈಲ್ವೆ ಪ್ರಯಾಣವನ್ನು ಭಕ್ತಾದಿಗಳಿಗೆ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಯೋಜನೆಗಳು ಸಿದ್ಧಗೊಳಿಸಿದ್ದು ಖುದ್ದ ಅವರೇ ಅದರ ಮೇಲೆ ನಿಗಾ ಇಟ್ಟುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ