/newsfirstlive-kannada/media/post_attachments/wp-content/uploads/2024/11/RAILWY-MINISTRY.jpg)
ರೈಲ್ವೆ ಸಚಿವಾಲಯ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ ಒಂದು ವಿಡಿಯೋ ಈಗ ದೊಡ್ಡದಾಗಿ ವೈರಲ್ ಆಗುತ್ತಿದೆ. ಪ್ರಯಾಣಿಕರೊಬ್ಬರಿಗೆ ನೀರಿನ ಬಾಟಲಿಯನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗಿದೆ. ಇದನ್ನು ವಿಡಿಯೋ ಮಾಡಿಕೊಂಡ ಪ್ರಯಾಣಿಕ ಐದು ರೂಪಾಯಿ ಹೆಚ್ಚಿನ ದರ ವಸೂಲಿ ಮಾಡಿದ್ದನ್ನು 139 ನಂಬರ್​ಗೆ ದೂರು ನೀಡಿದ್ದಾನೆ
ದೂರು ಬಂದ ಕೂಡಲೇ ಕ್ರಮ ಕೈಗೊಂಡ ರೈಲ್ವೆ ಇಲಾಖೆ ಕ್ಯಾಟರಿಂಗ್ ಸೇವೆಯನ್ನು ತೆಗೆದುಕೊಂಡಿದ್ದ ಸಂಸ್ಥೆಗೆ ಬರೋಬ್ಬರಿ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಇದು ಮಾತ್ರವಲ್ಲ ಪ್ರಯಾಣಿಕನಿಂದ ಪಡೆಯಲಾಗಿದ್ದ ಹೆಚ್ಚಿನ ಐದು ರೂಪಾಯಿಯನ್ನು ವಾಪಸ್ ಅವರಿಗೆ ನೀಡಲಾಗಿದೆ ಎಂದು ರೈಲ್ವೆ ಸಚಿವಾಲಯ ಹಂಚಿಕೊಂಡ ವಿಡಿಯೋದಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಅಜ್ಜಿಯ ತಮಾಷೆ ವಿಡಿಯೋ.. ₹12 ಕೋಟಿ ಕಾರು ಖರೀದಿಸಿ ದಾಖಲೆ ಸೃಷ್ಟಿಸಿದ ಮೊಮ್ಮಗ; ಯಾರಿವನು ಗೊತ್ತಾ?
ಟ್ರೇನ್ ನಂಬರ್ 12414ನಲ್ಲಿ ಪೂಜಾ ಎಸ್​ಎಫ್ ಎಕ್ಸ್​ಪ್ರೆಸ್​ನ ಥರ್ಡ್​ ಎಸಿ ಬೋಗಿಯಲ್ಲಿ ಈ ಒಂದು ಘಟನೆ ನಡೆದಿದೆ. ಇದೇ ತಿಂಗಳು 12ನೇ ತಾರೀಖಿನಂದು ಈ ಒಂದು ಘಟನೆ ನಡೆದಿದ್ದು. ವಿಡಿಯೋದಲ್ಲಿ ಪ್ರಯಾಣಿಕ ನೀರಿನ ಬಾಟಲಿಗೆ ಎಷ್ಟು ಎಂದು ಕೇಳಿದ್ದಾನೆ. ಅದಕ್ಕೆ ಮಾರಾಟಗಾರ 20 ರೂಪಾಯಿ ಎಂದಿದ್ದಾನೆ. ಅದು ಹೇಗೆ 20 ರೂಪಾಯಿ ಇದರ ಮೇಲೆ 15 ರೂಪಾಯಿ ಎಂದು ಬರೆದಿದೆಯಲ್ಲ ಎಂದು ಕೇಳಿದ್ದಕ್ಕೆ , ಐದು ರೂಪಾಯಿ ಅಷ್ಟೇ ಹೆಚ್ಚಿಗೆ ಪಡೆಯುತ್ತಿರುವುದಾಗಿ ಹೇಳಿದ್ದಾನೆ. ಈ ವಿಷಯವನ್ನು ಕೂಡಲೇ ಪ್ರಯಾಣಿಕ 139 ರೈಲ್ವೆ ಮದದ್ ನಂಬರ್​ಗೆ ತಲುಪಿಸಿದ್ದಾನೆ.
139 पर आई ओवरचार्जिंग की शिकायत, रेलवे ने लिया फटाफट एक्शन, कैटरिंग कंपनी पर लगा एक लाख का जुर्माना।
यात्रियों को ओवर चार्जिंग की राशि की गई रिटर्न! pic.twitter.com/8ZaomlEWml
— Ministry of Railways (@RailMinIndia)
139 पर आई ओवरचार्जिंग की शिकायत, रेलवे ने लिया फटाफट एक्शन, कैटरिंग कंपनी पर लगा एक लाख का जुर्माना।
यात्रियों को ओवर चार्जिंग की राशि की गई रिटर्न! pic.twitter.com/8ZaomlEWml— Ministry of Railways (@RailMinIndia) November 23, 2024
">November 23, 2024
ಇದನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ಇಲಾಖೆ ಕ್ಯಾಟರಿಂಗ್ ಸಂಸ್ಥೆಗೆ ಬರೋಬ್ಬರಿ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರಯಾಣಿಕ ಮಾಡಿಕೊಂಡಿರುವ ವಿಡಿಯೋವನ್ನು ತನ್ನ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ರೈಲ್ವೆ ಸಚಿವಾಲಯದ ಎಕ್ಸ್ ಖಾತೆ 139 ನಂಬರ್​ಗೆ ಬಂದಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ. ಕ್ಯಾಟರಿಂಗ್ ಕಂಪನಿಗೆ ದಂಡವನ್ನು ವಿಧಿಸಲಾಗಿದೆ. ಅದು ಮಾತ್ರವಲ್ಲ ಪ್ರಯಾಣಿಕರಿಂದ ತೆಗೆದುಕೊಂಡ ಹೆಚ್ಚಿನ ದರವನ್ನ ಮರಳಿ ಅವರಿಗೆ ನೀಡಲಾಗಿದೆ ಎಂದು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us