ಈ ಉದ್ಯೋಗಗಳಿಗೆ ಯಾರು, ಯಾರು ಅರ್ಜಿ ಸಲ್ಲಿಕೆ ಮಾಡಬೇಕು?
ಭರ್ಜರಿ ಕೆಲಸಗಳು, ಕೈ ತುಂಬಾ ಸಂಬಳ, ಇವರಿಗೆ ಮಾತ್ರ ಚಾನ್ಸ್
ಯಾವ್ಯಾವ ಉದ್ಯೋಗಗಳು ಖಾಲಿ ಇವೆ, ಎಲ್ಲೆಲ್ಲಿ ಹುದ್ದೆಗಳು ಇವೆ?
ಈಗಾಗಲೇ ನೀವು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ಆಗಿದ್ದರೇ ಇಲ್ಲೊಂದು ಗುಡ್ನ್ಯೂಸ್ ಇದೆ. ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ಪರಿಚಯ ಮಾಡಿದ್ದು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದವರು ಈ ಉದ್ಯೋಗಗಳಿಗೆ ಅಪ್ಲೇ ಮಾಡಬಹುದು. ಅಲ್ಲದೇ ಸರ್ಕಾರ ಒಳ್ಳೆಯ ಸಂಬಳ ಕೂಡ ಕೊಡುತ್ತಿದೆ. ಇದಕ್ಕೆ ಮೂಲ ಅರ್ಹತೆ ಎಂದರೆ ನಿವೃತ್ತ ಅಧಿಕಾರಿ ಈ ಹಿಂದೆ ಹುದ್ದೆ ಮಾಡುವಾಗ ನೀಡಿದಂತ ಪರ್ಫಾಮನ್ಸ್ (Performance) ಆಧಾರ ಮೇಲೆ ನೀಡುತ್ತಾರೆ.
ಭಾರತೀಯ ರೈಲ್ವೇಯಲ್ಲಿ ಸಿಬ್ಬಂದಿ ಕೊರತೆಯಿಂದ ಉಂಟಾಗುವ ಕಾರ್ಯಾಚರಣೆಯ ಸವಾಲುಗಳ ಬಗ್ಗೆ ಹೆಚ್ಚುತ್ತಿರುವ ಸಮಸ್ಯೆಗಳ ಪ್ರತಿಕ್ರಿಯೆಯಾಗಿ ಈ ‘ಮರು ನೇಮಕಾತಿ ಯೋಜನೆ’ ಪರಿಚಯಿಸಲಾಗಿದೆ. ಕೇಂದ್ರ ಸರ್ಕಾರವು ತಾತ್ಕಾಲಿಕವಾಗಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡುತ್ತಿದೆ. ಹೀಗಾಗಿ ಹೊಸ ಯೋಜನೆ ಮೂಲಕ ನಿವೃತ್ತಿ ಹೊಂದಿದ ರೈಲ್ವೆ ಅಧಿಕಾರಿಗಳನ್ನು ಮರು ನೇಮಕ ಮಾಡಿಕೊಳ್ಳುತ್ತಿದೆ. ಇನ್ನು ಈ ಉದ್ಯೋಗ ಎಷ್ಟು ವರ್ಷಗಳವರೆಗೆ ಕೊಡುತ್ತಾರೆ. ಯಾವ ರೀತಿ ಸ್ಯಾಲರಿ ನೀಡುತ್ತಾರೆ. ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದರ ವಿವರ ಇಲ್ಲಿದೆ.
ವಾಯುವ್ಯ ರೈಲ್ವೆ ಇಲಾಖೆಗಳಲ್ಲಿ ಮಾತ್ರ 10,000 ಖಾಲಿ ಹುದ್ದೆಗಳು ಇವೆ. ದೇಶದ ವಿವಿಧ ರೈಲ್ವೆ ಝೋನ್ಗಳಲ್ಲಿ ಉದ್ಯೋಗ ಖಾಲಿ ಇವೆ. ಹೀಗಾಗಿ ಈ ಪ್ರದೇಶಗಳಲ್ಲಿ ರೈಲ್ವೆ ಅಪಘಾತಗಳು ಸಂಭವಿಸುತ್ತಿವೆ. ಇವುಗಳನ್ನು ತಡೆಯಬೇಕು ಎಂದರೆ ಉದ್ಯೋಗಗಳ ನೇಮಕಾತಿ ಅವಶ್ಯಕವಾಗಿದೆ. ಇದರಿಂದ ನಿವೃತ್ತರನ್ನ ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅನುಭವಿ ಸಿಬ್ಬಂದಿಯನ್ನು ಮರಳಿ ಕರೆತರುವ ಮೂಲಕ, ರೈಲ್ವೆ ಮಂಡಳಿ ಈ ಸವಾಲುಗಳನ್ನು ತಗ್ಗಿಸಲು ಮತ್ತು ಸುಗಮ ಕಾರ್ಯಾಚರಣೆ ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ.
ಯಾವ್ಯಾವ ಉದ್ಯೋಗಗಳು
ಮೇಲ್ವಿಚಾರಕರು (Supervisors)
ಟ್ರ್ಯಾಕ್ ಮೆನ್ (track men)
ಒಟ್ಟು ಉದ್ಯೋಗಗಳು ಎಷ್ಟು?
ದೇಶದ್ಯಾಂತ ಒಟ್ಟು 25,000 ಹುದ್ದೆಗಳು
ಇದನ್ನೂ ಓದಿ: ಸೆಂಚುರಿ ಸಿಡಿಸಿದ್ರೂ ಸರ್ಫರಾಜ್ ನೋಡಿ ನಕ್ಕ ರೋಹಿತ್, ವಿರಾಟ್, ಅಶ್ವಿನ್.. ಯಾಕೆ?
ಎಷ್ಟು ವರ್ಷಗಳವರೆಗೆ ನೇಮಕಾತಿ ಮಾಡಲಾಗುತ್ತದೆ?
ನಿವೃತ್ತರನ್ನ ಮತ್ತೆ 2 ವರ್ಷಗಳವರೆಗೆ ನೇಮಕ
ಎಷ್ಟು ವರ್ಷದ ಒಳಗಿನ ನಿವೃತ್ತರಿಗೆ ಈ ಉದ್ಯೋಗ ನೀಡುತ್ತಾರೆ?
65 ವರ್ಷದ ಒಳಗಿನವರಿಗೆ
ಯಾರು ನೇಮಕ ಮಾಡಿಕೊಳ್ಳುತ್ತಾರೆ?
ದೇಶದ್ಯಾಂತ ಇರುವ ರೈಲ್ವೆ ಇಲಾಖೆಯಲ್ಲಿನ ಮ್ಯಾನೇಜರ್‌ಗಳಿಗೆ ಈ ಅಧಿಕಾರ ಇದೆ.
ಈ ಉದ್ಯೋಗ ಪಡೆಯಲು ಮಾಜಿ ಉದ್ಯೋಗಿಗಳು ತಮ್ಮ ಕೊನೆಯ 5 ವರ್ಷಗಳ ಸೇವೆ ಮತ್ತು ವೈದ್ಯಕೀಯ ಫಿಟ್‌ನೆಸ್‌ನಿಂದ ಉತ್ತಮ ಕಾರ್ಯಕ್ಷಮತೆಯ ದಾಖಲೆ ಸೇರಿದಂತೆ ಪ್ರಮುಖ ಮಾನದಂಡಗಳನ್ನು ಪೂರೈಸಬೇಕು. ಅಭ್ಯರ್ಥಿಗಳ ವಿರುದ್ಧ ಯಾವುದೇ ಪ್ರಕರಣ ಬಾಕಿ ಇರಬಾರದು.
ಮಾಸಿಕ ಸಂಬಳ ನೀಡುವುದು ಹೇಗೆ..?
ಮಾಜಿ ಉದ್ಯೋಗಿ ಈ ಹಿಂದೆ ನಿವೃತ್ತದ ಕೊನೆ ಕಾಲದಲ್ಲಿ ಪಡೆದಂತ ಸ್ಯಾಲರಿಯನ್ನೇ ಬೇಸಿಕ್ ಪೆನ್ಷನ್ (Basic Pension) ಕಡಿತ ಮಾಡಿ ನೀಡಲಾಗುತ್ತದೆ. ಪ್ರಯಾಣ ಭತ್ಯೆ ನೀಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ