newsfirstkannada.com

ಬಿರುಗಾಳಿ ಸಮೇತ ಭಾರೀ ಮಳೆ.. ಬಾಳೆ ತೋಟ ಸೇರಿ ವಿವಿಧ ಬೆಳೆಗಳಿಗೆ ಹಾನಿ..

Share :

Published May 4, 2024 at 12:30pm

    ಬೆಳೆಯನ್ನು ಕಳೆದುಕೊಂಡು ಬೇಸರ ವ್ಯಕ್ತಪಡಿಸಿದ ರೈತರು

    ಬಿರುಗಾಳಿ ಸಮೇತ ಧಾರಾಕಾರವಾಗಿ ಮಳೆ ಸುರಿದಿದ್ಕೆ ನಷ್ಟ

    ಜಿಲ್ಲೆಯ ವಿವಿಧೆಡೆ ಹಲವು ಬೆಳೆಗಳು ಮಳೆಯಿಂದ ನಾಶ

ಕೋಲಾರ: ಬಿರುಗಾಳಿ ಸಮೇತ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯ ವಿವಿಧೆಡೆ ರೈತರು ಬೆಳೆದಂತ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಎಲ್ಲ ನಷ್ಟವಾಗಿದೆ. ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ 2.5 ಎಕರೆ ಬಾಳೆ ತೋಟ ಮಳೆಯಿಂದ ಹಾನಿಯಾಗಿದೆ.

ಕೋಲಾರದ ವಿವಿಧೆಡೆ ರೈತರು ಬೆಳೆದ ಬೆಳೆಗಳು ಮಳೆಯಿಂದ ಹಾನಿಗೊಂಡಿವೆ. ಬಿರುಗಾಳಿ ಸಮೇತ ಧಾರಾಕಾರ ಮಳೆ ಸುರಿದಿದ್ದರಿಂದ ಬೇತಮಂಗಲದ ಶಿವಪ್ರಸಾದ್ ಹಾಗೂ ಚಂದನ್ ಎಂಬುವರಿಗೆ ಸೇರಿದ ಬಾಳೆ ತೋಟ ಸಂಪೂರ್ಣವಾಗಿ ನಾಶಗೊಂಡಿದೆ. ಇದಿಷ್ಟೇ ಅಲ್ಲದೇ ಬಂಗಾರಪೇಟೆ ತಾಲೂಕಿನ ಹುಣಕಲ್ ದೊಡ್ಡಿ ಗ್ರಾಮದ ಮುನಿರಾಜು ಎಂಬುವರಿಗೆ ಸೇರಿದ ಹಾಗಲಕಾಯಿ, ಸೋರೆಕಾಯಿ ಬೆಳೆ ಹಾನಿಯಾಗಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಮುಂದೆ ಉಮೇಶ್ ರೆಡ್ಡಿಯೂ ಶೂನ್ಯ; ದೋಸ್ತಿ ನಾಯಕ ಶಿವರಾಮೇಗೌಡ ವಾಗ್ದಾಳಿ

ಜಿಲ್ಲೆಯ ವಿವಿಧೆಡೆ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೇರೆ ಬೇರೆ ಬೆಳೆಗಳನ್ನು ಬೆಳೆದಿದ್ದರು. ಆದರೆ ವರುಣರಾಯ ಬಂದು ಎಲ್ಲವನ್ನೂ ಹಾನಿ ಮಾಡಿದ್ದಾನೆ. ಇದರಿಂದ ರೈತರು ಹಾಕಿದ್ದ ಬಂಡವಾಳವೆಲ್ಲ ಹೊಳೆಯಲ್ಲಿ ಹುಣೆಸೆಹಣ್ಣು ತೊಳೆದಂತೆ ಆಗಿದೆ. ಹೀಗಾಗಿ ಬೆಳೆ ನಷ್ಟವಾದ ರೈತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿರುಗಾಳಿ ಸಮೇತ ಭಾರೀ ಮಳೆ.. ಬಾಳೆ ತೋಟ ಸೇರಿ ವಿವಿಧ ಬೆಳೆಗಳಿಗೆ ಹಾನಿ..

https://newsfirstlive.com/wp-content/uploads/2024/05/KLR_RAIN.jpg

Load More