newsfirstkannada.com

ನಿಲ್ಲದ ವರುಣನ ಆರ್ಭಟ; ಭಾರೀ ಮಳೆಗೆ ತತ್ತರಿಸಿದ ಭಾರತ; ಹಲವರು ಸಾವು; ಎಲ್ಲೆಲ್ಲಿ ಏನಾಯ್ತು?

Share :

Published July 10, 2023 at 6:20am

Update July 10, 2023 at 6:24am

  ಉತ್ತರದಲ್ಲಿ ಭಾರೀ ಮಳೆಯಿಂದ ಜನರ ಜೀವಕ್ಕೆ ಬಂದ ಕುತ್ತು

  ಜನರ ಜೀವದ ಜೊತೆ ವರುಣ ಚೆಲ್ಲಾಟ, ನಿದ್ದೆಗೆಡಿಸಿದ ಪ್ರವಾಹ

  ಮಂಡಿ ಜಿಲ್ಲೆಯ ಪಂಚಮುಖಿ ಶಿವನ ಸನ್ನಿಧಿಗೆ ಜಲದಿಗ್ಬಂಧನ

ದೆಹಲಿ: ಮಳೆ ಬಂದರೆ ಇಳೆಗೆ ಜೀವ ಕಳೆ ಬರುತ್ತೆ. ಅದೇ ಭಾರೀ ಮಳೆ ಬಂದರೆ ಜನರ ಜೀವಕ್ಕೆ ಕುತ್ತು ಬರುತ್ತೆ. ಈಗ ಇಂತದ್ದೇ ಪರಿಸ್ಥಿತಿ ಉತ್ತರ ಭಾರತದಲ್ಲಿ ಎದುರಾಗಿದೆ. ಮಹಾ ಮೇಘಸ್ಫೋಟಕ್ಕೆ ಜನರ ಬದುಕು ತೇಲಿ ಹೋಗಿದೆ. ರಸ್ತೆ-ಸೇತುವೆಗಳು ಜಲರಾಜನ ಕಪಿಮುಷ್ಟಿಗೆ ಸಿಲುಕಿ ಕೊಚ್ಚಿ ಹೋಗ್ತಿವೆ. ಸಾವು-ನೋವುಗಳ ಸರಮಾಲೆ ಹೆಚ್ಚಾಗುತ್ತಿದೆ. ಹಲವರಿಗೆ ಬದುಕು ಕಟ್ಟಿಕೊಂಡಿದ್ದ ನೆಲ ಜಲಾವೃತವಾಗಿ ಜನ ದಿಕ್ಕಾಪಾಲಾಗಿದ್ದಾರೆ.

ಈ ಬಾರಿಯ ವರ್ಷಧಾರೆಗೆ ಉತ್ತರ ಭಾರತ ತತ್ತರಿಸಿ ಹೋಗಿದೆ. ಇಳೆಗೆ ಜೀವಕಳೆ ನೀಡಬೇಕಿದ್ದ ವರುಣ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾನೆ. ಮಹಾ ಮೇಘಸ್ಫೋಟದಿಂದ ನದಿಗಳು ಉಗ್ರಸ್ವರೂಪ ತಾಳಿ ಧುಮ್ಮಿಕ್ಕಿ ಹರಿಯುತ್ತಿವೆ. ಭೂಕುಸಿತ, ಪ್ರವಾಹ ಜನರ ನಿದ್ದೆಗೆಡಿಸಿದೆ. ವರುಣಾರ್ಭಟಕ್ಕೆ ಉತ್ತರ ಭಾರತದ ಜನ ಹೈರಾಣಾಗಿದ್ದು, ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ.

ಪಂಚವಕ್ತ್ರ ದೇಗುಲಕ್ಕೆ ವರುಣನ ದಿಗ್ಭಂದನ

ವರುಣ ಅದ್ಯಾವ ಮಟ್ಟಿಗೆ ಹಿಮಾಚಲ ಪ್ರದೇಶದಲ್ಲಿ ತನ್ನ ಉಗ್ರರೂಪ ಪ್ರದರ್ಶಿಸಿದ್ದಾನೆ ಅಂದ್ರೆ, ಮಂಡಿ ಜಿಲ್ಲೆಯಲ್ಲಿರುವ ಪಂಚಮುಖಿ ಶಿವನ ಸನ್ನಿಧಿಗೆ ಜಲದಿಗ್ಬಂಧನ ವಿಧಿಸಿಬಿಟ್ಟಿದ್ದಾನೆ. ಬಿಯಾಸ್ ನದಿಯು ಬೋರ್ಗರೆತಕ್ಕೆ ಪಂಚವಕ್ತ್ರ ದೇವಾಲಯ ಜಲಾವೃತವಾಗಿದೆ. ವರುಣನ ಅಬ್ಬರಕ್ಕೆ ಶಿವನೇ ಒಂದು ಕ್ಷಣ ದಿಗ್ಬ್ರಾಂತಗೊಂಡತೆ ಆಗಿದೆ.

ನದಿಯಲ್ಲಿ ನೀರಿನಲ್ಲಿ ಕಾರುಗಳ ಪ್ರಯಾಣ

ಸಾಮಾನ್ಯವಾಗಿ ನದಿಯಲ್ಲಿ ನೀರು ಹರಿಯುತ್ತೆ. ಹೆಚ್ಚಂದ್ರೆ ಕಸ ಕಡ್ಡಿ, ಮರದ ಧಿಮ್ಮಿಗಳು ತೇಲುತ್ತೆ.. ಆದ್ರೆ ವರುಣನ ರೌದ್ರಾವತಾರ ಹಿಮಾಚಲ ಪ್ರದೇಶದ ನದಿಯಲ್ಲಿ ವಾಹನಗಳನ್ನೇ ತೇಲುವಂತೆ ಮಾಡಿದೆ. ಮನಾಲಿಯಲ್ಲಿ ಬಿಯಾಸ್​ ನದಿಯ ಅಬ್ಬರಕ್ಕೆ 10ಕ್ಕೂ ಹೆಚ್ಚು ಕಾರುಗಳು ಆಟಿಕೆಯಂತೆ ತೇಲಿಹೋಗಿವೆ.

ಎಲ್ಲೆ ಮೀರಿದ ನದಿ ಹರಿವಿಗೆ ಜನ ಕಂಗಾಲು

ಇಷ್ಟು ದಿನ ಜುಳು ಜುಳು ನಿನಾದದಿಂದ ಹರಿಯುತ್ತಿದ್ದ ಬಿಯಾಸ್​ ನದಿಯ ವರಸೆ ವರುಣನಿಂದ ಬದಲಾಗಿದೆ. ಕೆಸರು ಬಣ್ಣದ ನೀರಿನಿಂದ ಸಾಗರವನ್ನ ಸೇರಲು ಈ ನದಿ ಹೈಸ್ಪೀಡ್​ನಲ್ಲಿ ಓಡುತ್ತಿದೆ. ನದಿಯ ಉಗ್ರರೂಪ ಕಂಡು ಜನ ಕಂಗಾಲಾಗಿದ್ದಾರೆ.

ನದಿ ಹರಿದಿದ್ದೇ ದಾರಿ.. ಸೇತುವೆಗಳಿಗೆ ವರಿ

ಮನುಷ್ಯ ನದಿಯ ಮೇಲೆ ಸವಾರಿ ಮಾಡೋಕೆ ಸೇತುವೆಗಳನ್ನ ನಿರ್ಮಾಣ ಮಾಡಿಕೊಳ್ತಾನೆ. ಆದ್ರೆ ಅದೇ ಸೇತುವೆಗಳ ಮೇಲೆ ಈಗ ನದಿ ಸವಾರಿ ಮಾಡ್ತಿದೆ. ಹಿಮಾಚಲದ ಮಂಡಿ ಜಿಲ್ಲೆಯ ಶಿಮ್ಲಾ, ಪನ್ಡೋವ, ಕುಲ್ಲು ಪ್ರದೇಶದಲ್ಲಿ ನದಿ ಅಬ್ಬರಕ್ಕೆ ದೈತ್ಯ ಸೇತುವೆಗಳೇ ಧೂಳಿಪಟವಾಗಿವೆ.

ಮಳೆಯ ಅಬ್ಬರಕ್ಕೆ ಮೈದುಂಬಿದ​ ಡ್ಯಾಮ್​

ಇತ್ತ ಮಳೆ ಬಂದು ಜನ ಪರಿಸ್ಥಿತಿ ಮುರಾಬಟ್ಟೆ ಆಗ್ತಿದ್ರೆ ಅತ್ತ ಜಲಾಶಯಗಳಿಗೆ ಜೀವಕಳೆ ಬಂದಿದೆ. ಎಡೆಬಿಡದೇ ಸುರಿಯುತ್ತಿರೋ ವರ್ಷಧಾರೆಗೆ ಹಿಮಾಚಲದ ಪಂಡೋವ ಡ್ಯಾಂ ಭರ್ತಿಯಾಗಿದೆ. ಜಲಶಾಯದ ಗೇಟ್​ನಿಂದ ನೀರು ಧುಮ್ಮಿಕ್ಕುತ್ತಿರೋ ದೃಶ್ಯ ನಯನಮನೋಹರವಾಗಿದೆ.

ಹೆದ್ದಾರಿ ಸಂಪರ್ಕವನ್ನ ಕಡಿತಗೊಳಿಸಿದ ಮಳೆರಾಯ

ಮಂಡಿ ಜಿಲ್ಲೆಯಲ್ಲಿ ಅಬ್ಬರಿಸಿ ಬೊಬ್ಬರಿಯುತ್ತಿರೋ ಬಿಯಾಸ್​ ನದಿ ರಾಷ್ಟ್ರೀಯ ಹೆದ್ದಾರಿ 3ಕ್ಕೆ ಕಂಟಕ ತಂದೊಡ್ಡಿದೆ. ಮನಾಲಿ ಬಳಿ ನದಿಯ ಹರಿವಿನ ರಭಸಕ್ಕೆ ಹೆದ್ದಾರಿ ಕೊಚ್ಚಿ ಹೋಗಿದ್ದು, ವಾಹನ ಸಂಚಾರ ಬಂದ್​ ಆಗಿದೆ.

ನೆರೆಯ ಅಬ್ಬರಕ್ಕೆ ನದಿ ಮಧ್ಯೆ ಸಿಲುಕಿ ಜನರ ಪರದಾಟ

ಜೀವನ ನಡೆಸಲು ನದಿಯನ್ನ ನಂಬಿ ಅದರ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಜನರಿಗೆ ಈಗ ಅದೇ ನದಿ ಸಂಚಕಾರ ತಂದಿದೆ. ಕುಲ್ಲು ಜಿಲ್ಲೆಯ ಚರೂಡು ಗ್ರಾಮದಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿ ದಡದಲ್ಲಿದ್ದ ಮನೆಯ ಜನರು ಕಂಗಾಲಾಗಿದ್ರು. ಸ್ಥಳಕ್ಕಾಗಮಿಸಿದ ಎನ್​ಡಿಆರ್​ಎಫ್​ ಸಿಬ್ಬಂದಿ ಸಂಕಷ್ಟದಲ್ಲಿದ್ದ 5 ಜನರನ್ನ ಪಾರುಮಾಡಿದ್ರು.

ನದಿಯ ಒಡಲಿಗೆ ಬಲಿಯಾಯ್ತು ದಡದಲ್ಲಿದ್ದ ಮನೆ

ಉಗ್ರಸ್ವರೂಪ ತಾಳಿ ಸಿಕ್ಕಿದ್ದನೆಲ್ಲಾ ತನ್ನೊಡಲಿಗೆ ಸೇರಿಸಿಕೊಂಡು ಹರಿಯುತ್ತಿರೋ ಬಿಯಾಸ್​ ನದಿ, ಬಹನಾಗ್​ನಲ್ಲಿ ಮನೆಯೊಂದನ್ನ ನಾಶ ಮಾಡಿದೆ. ನದಿ ಅಬ್ಬರಕ್ಕೆ ಮನೆ ಕುಸಿದು ನೀರುಪಾಲಾಗಿದೆ.

ಮನೆಯ ಮಹಡಿಯಿಂದ ಸಂತ್ರಸ್ತರ ರಕ್ಷಣೆ

ಮಂಡಿ ಜಿಲ್ಲೆಯ ಹಲವಡೆ ಜಲದಿಗ್ಭಂದನ ವಿಧಿಸಿರೋ ಮಳೆರಾಯ ಜನ ಜೀವನವನ್ನ ಸಂಕಷ್ಟಕ್ಕೆ ಸಿಲುಕಿಸಿದ್ದಾನೆ.. ನೆರೆ ಭೀತಿಗೆ ಬೆದರಿ ಮನೆಯಲ್ಲಿ ಜೀವ ಬಿಗಿಹಿಡಿದು ಕುಳಿತಿದ್ದ ಜನರನ್ನ ಎನ್​ಡಿಆರ್​ಎಫ್​ ಸಿಬ್ಬಂದಿ ಮಹಡಿ ಮೂಲಕ ರಕ್ಷಣೆ ಮಾಡಿದ್ದಾರೆ.

ಹಿಮಾಚಲ ಪ್ರದೇಶವನ್ನ ಕಾಡ್ತಿರೋ ಮಳೆರಾಯ ಮೂರು ಜನರನ್ನ ಅದಾಗಲೇ ಬಲಿ ಪಡೆದುಬಿಟ್ಟಿದ್ದಾನೆ. ಶಿಮ್ಲಾದಲ್ಲಿ ಮನೆ ಕುಸಿದು 3 ಮಂದಿ ಸಾವನ್ನಪಿದ್ದಾರೆ. ಮಳೆ ಅಬ್ಬರದಿಂದ ಶ್ರೀಕಂಡ್​ನ ಮಹಾದೇವ್​ ಯಾತ್ರೆಯನ್ನ 2 ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಭಾರೀ ಮಳೆ ಹಿನ್ನೆಲೆ ನಾಳೆ ಮತ್ತು ನಾಡಿದ್ದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಂಡಿ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಎನ್​ಡಿಆರ್​ಎಫ್​ ಪಡೆಗಳು ಜನರ ನೆರವಿಗೆ ಮುಂದಾಗ್ತಿವೆ.

ಜಮ್ಮು-ಕಾಶ್ಮೀರದಲ್ಲೂ ಜನರ ಮೈ ಜುಮ್ಮೆನ್ನಿಸಿದ ವರುಣ

ಜಮ್ಮು-ಕಾಶ್ಮೀರದಲ್ಲೂ ಅಬ್ಬರಿಸಿ ಬೊಬ್ಬರಿಯುತ್ತಿರೋ ಮಳೆರಾಯ ಹಲವು ಅವಾಂತಗಳಿಗೆ ಮುನ್ನುಡಿ ಬರೆದಿದ್ದಾನೆ.. ಶ್ರೀನಗರದ ಸುರಂಗಮಾರ್ಗದ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭಾರೀ ಭೂಕುಸಿತ ಸಂಭವಿಸಿದೆ.. ರಸ್ತೆ ಕುಸಿದ ಪರಿಣಾಮ ವಾಹನ ಸಂಚಾರ ಬಂದ್​ ಆಗಿದೆ.

ರಾಷ್ಟ್ರರಾಜಧಾನಿಯಲ್ಲೂ ವರುಣನ ಅವಾಂತರ

ರಾಜಧಾನಿ ದೆಹಲಿಯಲ್ಲೂ ದಾಖಲೆಯ ಮಳೆಯಾಗಿದೆ. ಮಳೆರಾಯನ ಆಗಮನದಿಂದ ದೆಹಲಿ ಜನ ಫುಲ್​ ಖುಷ್ ಆಗಿದ್ದಾರೆ. ರಸ್ತೆಯಲ್ಲಿ ನಿಂತ ನೀರಿನಲ್ಲಿ ಆಟವಾಡುತ್ತಾ ಮೋಜು-ಮಸ್ತಿ ಮಾಡಿದ್ದಾರೆ. ಇನ್ನೂ ದೆಹಲಿಯಲ್ಲಿ ಮಳೆರಾಯ ಕೆಲ ಅವಾಂತಗಳನ್ನೂ ಸೃಷ್ಟಿಸಿದ್ದಾರೆ. ವರುಣನ ಅಬ್ಬರಕ್ಕೆ ಲಜ್​ಪತ್​ ನಗರದಲ್ಲಿ ಶಾಲೆ ಕಟ್ಟಡ ಕುಸಿತವಾಗಿದೆ. ಮತ್ತೊಂದೆಡೆ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಜನರು ಪರದಾಡಿದ್ದಾರೆ.. ಮಳೆಯಿಂದ ಕೆಲ ರಸ್ತೆಗಳು ನದಿಗಳಾಗಿ ಬದಲಾಗಿವೆ.

ಒಟ್ನಲ್ಲಿ ಮಳೆರಾಯನ ಮುನಿಸಿಗೆ ಉತ್ತರ ಭಾರತ ತತ್ತರವಾಗ್ತಿದೆ. ಜನರು ಬದುಕು ತೇಲಿಹೋಗ್ತಿದೆ. ಇನ್ನೂ ಮಳೆ ಅಬ್ಬರ ಹೀಗೆ ಮುಂದುವರೆದರೇ ಮತ್ತಷ್ಟು ಸಂಕಷ್ಟಗಳ ಸರಮಾಲೆಯಲ್ಲಿ ಜನರು ಸಿಲುಕುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಲ್ಲದ ವರುಣನ ಆರ್ಭಟ; ಭಾರೀ ಮಳೆಗೆ ತತ್ತರಿಸಿದ ಭಾರತ; ಹಲವರು ಸಾವು; ಎಲ್ಲೆಲ್ಲಿ ಏನಾಯ್ತು?

https://newsfirstlive.com/wp-content/uploads/2023/07/Rains_4.jpg

Load More