Advertisment

Rain: ಭಾರೀ ಮಳೆ ಎಚ್ಚರಿಕೆ.. ಹವಾಮಾನ ಇಲಾಖೆ ಕೊಟ್ಟ ಮಾಹಿತಿ ಏನು..?

author-image
Ganesh
Updated On
ಬೆಂಗಳೂರಿಗರೇ ಎಚ್ಚರ! ಮತ್ತೆ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ; ಅದೇನೆಂದರೆ..
Advertisment
  • ಕರ್ನಾಟಕ ಮಾತ್ರವಲ್ಲ, 12 ರಾಜ್ಯಗಳಲ್ಲಿ ಮಳೆ ಬೀಳಲಿದೆ
  • ಬಂಗಾಳ ಕೊಲ್ಲಿಯಲ್ಲಿ ಚಂಡ ಮಾರುತದ ಅಬ್ಬರ ಜೋರು
  • ರಾಜಧಾನಿ ದೆಹಲಿಯ ಜನರಿಗೆ ಎಂದಿನಂತೆ ಬಿಸಿಲು ಕಾಡಲಿದೆ

ದೇಶದ 12 ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈಶಾನ್ಯ ರಾಜ್ಯಗಳು ಮತ್ತು ಕೇರಳ, ದಕ್ಷಿಣ ಕರ್ನಾಟಕ ಮತ್ತು ಲಕ್ಷದ್ವೀಪಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

Advertisment

ಬಂಗಾಳಕೊಲ್ಲಿ ಮತ್ತು ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರ ಪ್ರದೇಶದ ಕರಾವಳಿಯ ಸುತ್ತಲೂ ಚಂಡಮಾರುತದ ಅಬ್ಬರ ಜೋರಾಗಿರಲಿದೆ. ಪರಿಣಾಮ ಭಾರೀ ಮಳೆ ಬೀಳಲಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ ಮತ್ತು ನಾಗಲ್ಯಾಂಡ್​ನಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:ಬೆಂಗಳೂರಿಗರೇ ಎಚ್ಚರ.. ಇಂದು ರಾತ್ರಿ ಇಡೀ ನಗರದ ಹಲವೆಡೆ ಭಾರೀ ಮಳೆ; ಎಲ್ಲೆಲ್ಲಿ ವರುಣನ ಆರ್ಭಟ?

ಉತ್ತರ ಪ್ರದೇಶದಲ್ಲಿ ಮತ್ತೆ ಮಳೆರಾಯ ಎಂಟ್ರಿ ಕೊಟ್ಟಿದ್ದಾನೆ. ಇಂದು ಕೂಡ ಕೆಲವು ಜಿಲ್ಲೆಗಳಲ್ಲಿ ಭಾರೀ ಮತ್ತು ಲಘು ಮಳೆಯಾಗುವ ಸಾಧ್ಯತೆ ಇದೆ. ಸಹರಾನ್‌ಪುರ, ಮುಜಾಫರ್‌ನಗರ, ಶಾಮ್ಲಿ, ಬಾಗ್‌ಪತ್, ಮೀರತ್, ಫತೇಪುರ್‌ನಲ್ಲಿ ಮಳೆಯಾಗಬಹುದು ಎಂದಿದೆ. ಬಿಹಾರದಲ್ಲಿ ಮಳೆ ಎಚ್ಚರಿಕೆ ಇಲ್ಲ. ಇಲ್ಲಿ ಹವಾಮಾನವು ಸಾಮಾನ್ಯವಾಗಿರುತ್ತದೆ. ಅಕ್ಟೋಬರ್ 11ರ ನಂತರ ಮಳೆ ಬೀಳುವ ಸಾಧ್ಯತೆ ಇದೆ. ರಾಜಸ್ಥಾನದಲ್ಲೂ ಶುಭ್ರ ವಾತಾವರಣ ಇರಲಿದೆ. ಅಕ್ಟೋಬರ್ 8ರ ನಂತರ 10 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

Advertisment

ರಾಜಧಾನಿ ದೆಹಲಿಯ ಜನರು ಎಂದಿನಂತೆ ಬಿಸಿಲು ಮತ್ತು ಶಾಖವನ್ನು ಎದುರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನವು 35 ಡಿಗ್ರಿ ಇರಲಿದೆ. ಅದೇ ಸಮಯದಲ್ಲಿ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿದ ಮಳೆ.. ಅಪಾರ್ಟ್​ಮೆಂಟ್​​ಗೆ ನುಗ್ಗಿದ ನೀರು, ನಗರದಲ್ಲಿ ಅವಾಂತರಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment