newsfirstkannada.com

ಕಚೇರಿಗೆ ಮಳೆ ನೀರು ನುಗ್ಗಿ ಅವಾಂತರ.. ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ.. ಎಲ್ಲೆಲ್ಲಿ!

Share :

Published May 23, 2024 at 8:38am

    ಕೊಚ್ಚಿ ಪ್ರದೇಶದ ಇನ್ಫೋಪಾರ್ಕ್ ದಕ್ಷಿಣ ಗೇಟ್ ಬಳಿ ಜಲಾವೃತ

    ಗುರುವಾಯೂರ್ ದೇವಸ್ಥಾನದಲ್ಲಿ ಮೊಣಕಾಲಿನವರೆಗೆ ನೀರು

    ಹಾರಿಹೋದ ತಗಡಿನ ಶೆಡ್​ಗಳು, ಶಿಕ್ಷಕಿ ಮನೆಯ ಮೇಲೆ ಬಿದ್ದ ತಡೆಗೋಡೆ

ರಾಜ್ಯದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರೋ ಮಳೆ ಹಲವರನ್ನ ಸಂಕಷ್ಟಕ್ಕೆ ದೂಡಿದೆ.. ಮಳೆ ಸಂಬಂಧಿತ ಘಟನೆಯಿಂದಾಗಿ ಸಂಕಟಗಳ ಸರಮಾಲೆ ಹೆಚ್ಚಾಗಿದ್ದು, ಇನ್ನೂ ಮೂರು ದಿನ ವ್ಯಾಪಕ ಮಳೆಯಾಗಿವ ಮುನ್ಸೂಚನೆ ಸಿಕ್ಕಿದೆ.

ಭಾರೀ ಮಳೆಗೆ ಹಾರಿಹೋದ ತಗಡಿನ ಶೆಡ್​ಗಳು
ಯಾದಗಿರಿ ಜಿಲ್ಲೆಯಲ್ಲಿ ಸುರಿಯುತ್ತಿರೋ ಬಿರುಗಾಳಿ ಸಹಿತ ಭಾರೀ ಮಳೆಗೆ ತಗಡಿನಲ್ಲಿ ಶೆಡ್​​ಗಳು ಹಾರಿಹೋಗಿವೆ.. ಶೆಡ್​ಗಳು ಬಿದ್ದು ಪ್ರಿಯಾಂಕಾ ಎಂಬ ಮಹಿಳೆ ಹಾಗೂ 2 ಕುರಿಗಳಿಗೆ ಗಾಯಗಳಾಗಿದೆ.. ಕಂಚಗಾರಹಳ್ಳಿ ತಾಂಡಾದಲ್ಲಿ 6 ಕ್ಕೂ ಹೆಚ್ಚು ಮನೆಗಳ ಶೆಡ್ ಹಾರಿಹೋಗಿದ್ದು, ಅವಾಂತರ ಸೃಷ್ಟಿಯಾಗಿದೆ. ಅತ್ತ ರಾಷ್ಟ್ರೀಯ ಹೆದ್ದಾರಿ 150ರಲ್ಲಿ 20ಕ್ಕೂ ಹೆಚ್ಚು ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಅಪಘಾತ.. ಇಬ್ಬರು ಮಹಿಳೆಯರು ಸಾವು.. 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಶಾಲಾ ಶಿಕ್ಷಕಿ ಮನೆಯ ಮೇಲೆ ಬಿದ್ದ ತಡೆಗೋಡೆ
ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಕೂಡ್ಲೂರಿನ ಕೆ.ಕೆ.ನಿಂಗಪ್ಪ ಬಡಾವಣೆಯಲ್ಲಿ ಅಪಾರ ಹಾನಿ ಉಂಟಾಗಿದೆ. ಕುಶಾಲನಗರ ಉರ್ದು ಶಾಲಾ ಶಿಕ್ಷಕಿ ಶಾಂತಲಾ ಮನೆಯ ಪಕ್ಕದಲ್ಲಿ ಜಮೀನಿನಿಂದ ಮಳೆ‌ ನೀರು ಹರಿದು ಬರದಂತೆ ತಡೆಗೋಡೆ ನಿರ್ಮಿಸಿದ್ದರು. ಸುರಿದ ಭಾರೀ‌ ಮಳೆಗೆ ಎತ್ತರ ಪ್ರದೇಶದಿಂದ ತಗ್ಗು ಪ್ರದೇಶದತ್ತ ಹರಿದು ಬಂದ‌ ಮಳೆ‌ ನೀರಿನ ಒತ್ತಡಕ್ಕೆ ಬರೆ ಕುಸಿದಿದೆ. ಪರಿಣಾಮ ತಡೆಗೋಡೆ ಜರಿದು ಶಾಂತಲಾ ಮನೆಗೆ ಅಪ್ಪಳಿಸಿದೆ. ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಪಿಡಿಒ ಭೇಟಿ ನೀಡಿ ಪರಿಶೀಲಿಸಿದ್ದಾರೆ‌.

ಇದನ್ನೂ ಓದಿ:ಸೋತ ಆರ್​ಸಿಬಿ.. ನಾಯಕ ಫಾಫ್ ಡು ಪ್ಲೆಸ್ಸಿಸ್ ಹೇಳಿದ್ದೇನು..?

ಕೇರಳದ ಕೆಲ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ
ಕೇರಳದ ತಿರುವನಂತಪುರಂ ಹಾಗೂ ಇತರ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯಿಂದ ಆರಂಭವಾದ ಮಳೆ ನಿಲ್ಲದೆ ಸುರಿಯುತ್ತಲೇ ಇದೆ. ಇನ್ನೂ ಇಂದು ಸಹ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಮಾನಾ ಇಲಾಖೆ, ಕೇರಳದ ಹಲವು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಿದೆ.

ವರ್ಕ್ ಫ್ರಮ್ ಹೋಂ ಅಲ್ಲ.. ಇದು ವರ್ಕ್ ವಿತ್ ರೈನ್!
ವರ್ಕ್ ಫ್ರಮ್ ಆಫೀಸ್.. ವರ್ಕ್ ಫ್ರಮ್ ಹೋಂ.. ವರ್ಕ್ ಫ್ರಮ್ ಥೀಮ್ ಪಾರ್ಕ್.. ಇದನ್ನೆಲ್ಲಾ ನಾವು ಕೇಳಿದ್ವಿ.. ಆದ್ರೆ ಇದು ವರ್ಕ್ ವಿತ್ ರೈನ್.. ಕೇರಳದಲ್ಲಿ ಮಳೆರಾಯನ ಅಬ್ಬರಕ್ಕೆ ಕೊಚ್ಚಿನ್ ಇನ್ಫೋಪಾರ್ಕ್​ನಲ್ಲಿ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.. ಮಳೆ ನೀರು ಬಿದ್ದ ಪರಿಣಾಮ ಎಲ್ಲಾ ಸಿಬ್ಬಂದಿ ತಾವು ಕೆಲಸ ಮಾಡ್ತಿದ್ದ ಕಂಪ್ಯೂಟರ್​ಗಳನ್ನ ಆಫ್​ ಮಾಡಿ.. ಮಳೆಯಿಂದ ತಪ್ಪಿಸಿ ಕೊಳ್ಳಲು ಯತ್ನಿಸಿದ ಪ್ರಸಂಗವೂ ನಡೆದಿದೆ..

ಇದನ್ನೂ ಓದಿ:ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲ್ಸಕ್ಕೆ ಹೋಗೋ ಪೋಷಕರೇ ಇರಲಿ ಎಚ್ಚರ.. ಇಲ್ಲಿ 5 ವರ್ಷದ ಮಗು ಸಾವನ್ನಪ್ಪಿದೆ..

ಕೇರಳದ ಪ್ರಸಿದ್ಧ ಗುರುವಾಯೂರ್ ದೇವಸ್ಥಾನದಲ್ಲಿ ಮೊಣಕಾಲಿನವರೆಗೆ ನೀರು ನಿಂತಿದ್ರಿಂದ ಭಕ್ತಾದಿಗಳು ಪರದಾಡುವಂತಾಗಿತ್ತು. ಕೊಚ್ಚಿ ಪ್ರದೇಶದ ಇನ್ಫೋಪಾರ್ಕ್ ದಕ್ಷಿಣ ಗೇಟ್ ಬಳಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ.

ಮಳೆಯ ಜೊತೆಗೆ ಕೇರಳದ ಕರಾವಳಿಯಲ್ಲಿ ಅಲೆಗಳು ಹೆಚ್ಚಾಗುವ ಮುನ್ಸೂಚನೆಯನ್ನು ಹವಾಮಾನ ನೀಡಿದೆ. ಹೀಗಾಗಿ ಈ ಹಿಂದೆ ಘೋಷಿಸಿದ್ದ ಮೀನುಗಾರಿಕೆ ನಿಷೇಧ ಇಂದೂ ಸಹ ಮುಂದುವರಿಯಲಿದೆ. ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ:ಡಿನ್ನರ್ ಪಾರ್ಟಿ ಮೂಲಕ ರಣತಂತ್ರ ಹೆಣೆದ DK ಶಿವಕುಮಾರ್.. ಸಚಿವರಿಗೆ ಸಿದ್ದರಾಮಯ್ಯ ಕ್ಲಾಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಚೇರಿಗೆ ಮಳೆ ನೀರು ನುಗ್ಗಿ ಅವಾಂತರ.. ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ.. ಎಲ್ಲೆಲ್ಲಿ!

https://newsfirstlive.com/wp-content/uploads/2024/05/RAIN-22.jpg

Load More