/newsfirstlive-kannada/media/post_attachments/wp-content/uploads/2024/08/Rain-In-Bengaluru-1.jpg)
ಬೆಂಗಳೂರಿನಲ್ಲಿ 2 ದಿನಗಳ ಕಾಲ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಮತ್ತು ನಾಳೆ ಮಳೆಯ ಮುನ್ಸೂಚನೆ ಸಿಕ್ಕಿದೆ.
ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ ಇದೆ. ದಕ್ಷಿಣ ಒಳನಾಡಿಗೆ ಅಕ್ಟೋಬರ್ 10ರ ವರೆಗೆ ಮಳೆಯ ಮುನ್ಸೂಚನೆ ಎಂದು ತಿಳಿಸಲಾಗಿದೆ. ದಕ್ಷಿಣ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಅಕ್ಟೋಬರ್ 10 ರವರೆಗೆ ಮಳೆ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ:ಪ್ರವಾಹದಲ್ಲಿ ಹೆಲಿಕಾಪ್ಟರ್ ಪತನ.. ಸ್ಥಳೀಯರು ಮಾಡಿದ್ದೇನು ಗೊತ್ತಾ..? ವಿಡಿಯೋ
ಉತ್ತರ ಒಳನಾಡಿನಲ್ಲೂ ಅಕ್ಟೋಬರ್ 10 ವರಗೆಗೆ ಕೆಲವು ಕಡೆ ಮಾತ್ರ ಮಳೆ ಬೀಳುವ ಸಾಧ್ಯತೆ ಇದೆ. ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಭಾರೀ ಮಳೆ ಸಾಧ್ಯತೆ ಇದೆ. ಅಕ್ಟೋಬರ್ 9ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:Rain: ಭಾರೀ ಮಳೆ ಎಚ್ಚರಿಕೆ.. ಹವಾಮಾನ ಇಲಾಖೆ ಕೊಟ್ಟ ಮಾಹಿತಿ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ