newsfirstkannada.com

×

ಮುಳುಗಿದ ಬೆಂಗಳೂರು.. ರಣ ಭಯಂಕರ ಮಳೆಯ ನರಕ ದರ್ಶನ ಹೇಗಿದೆ? ಎಲ್ಲಿ ಏನೇನು ಆಗಿದೆ..?

Share :

Published October 22, 2024 at 10:24am

Update October 23, 2024 at 8:20am

    ಭೀಕರ ಮಳೆಗೆ ಬೆಂಗಳೂರಲ್ಲಿ ಏನೇನು ಆಗಿದೆ..?

    ಅಪಾರ್ಟ್​ಮೆಂಟ್​ನಿಂದ ಹೊರ ಬರಲಾಗದ ಸ್ಥಿತಿ

    ರಕ್ಷಣೆಗೆ ಬಂದ NDRF ಸಿಬ್ಬಂದಿ, ಭಾರೀ ಅನಾಹುತ

ಬೆಂಗಳೂರು ಈಗ ದ್ವೀಪ ನಗರಿಯಾಗಿ ಬದಲಾಗಿದೆ.. ಹಗಲು ರಾತ್ರಿ ಮಳೆ.. ರಸ್ತೆಗಳೆಲ್ಲೆಲ್ಲಾ ನೀರು ನಿಂತು ರಗಳೆ.. ಮನೆಗಳಿಗೂ ನುಗ್ಗಿ ವರುಣನ ದಾಂಧಲೆ.. ಇದು ನಮ್ಮ ಬ್ರ್ಯಾಂಡ್ ಬೆಂಗಳೂರಿನ ಕಳೆದೊಂದು ವಾರದ ಸ್ಥಿತಿ! ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಭಾರೀ ಅನಾಹುತ ಸೃಷ್ಟಿಯಾಗಿದೆ.

ಎಲ್ಲಿ ಏನೇನು ಆಗಿದೆ..?
ಭಾರೀ ಮಳೆಗೆ ನಗರದ ಕೋಗಿಲು ಕ್ರಾಸ್ ರಸ್ತೆಗಳು ಕೆರೆಯಂತಾಗಿದ್ದು ಜನರು ಹೈರಾಣಾಗಿದ್ದಾರೆ. ಧಾರಕಾರವಾಗಿ ಸುರಿದ ಮಳೆಯಿಂದಾಗಿ ಕೋಗಿಲು ಕ್ರಾಸ್ ರಸ್ತೆಗಳಲ್ಲಿ ಮಳೆ ನೀರು ನಿಂತು ಸಂಪೂರ್ಣ ಜಲಾವೃತವಾಗಿದೆ. ಇದ್ರಿಂದಾಗಿ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗೋಕೆ ಆಗದೇ ಪರದಾಡುವಂತಾಗಿದೆ. ಬಿಎಂಟಿಸಿ ಬಸ್, ಕಾರು, ಆಟೋ, ರಸ್ತೆಯಲ್ಲಿಯೇ ಕೆಟ್ಟು ನಿಂತಿದ್ದು, ರಣ ಮಳೆಗೆ ಇಡೀ ಯಲಹಂಕ ಕ್ಷೇತ್ರದ ಜನತೆ ಹೈರಾಣಾಗಿದ್ದಾರೆ.

ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಯಲಹಂಕದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ನ್ಯೂಟೌನ್​ನ 3ನೇ ಹಂತದಲ್ಲಿರೋ ಖುಶಿ ಆಸ್ಪತ್ರೆಯ ಬಳಿ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿದ್ರಿಂದ ನಿವಾಸಿಗಳು ರಾತ್ರಿ ಇಡೀ ಜಾಗರಣೆ ಮಾಡುವಂತಾಗಿತ್ತು. ಸದ್ಯ ನೀರು ಹೊರಹಾಕೋದಕ್ಕೆ ಜನರು ಪರದಾಡ್ತಿದ್ದಾರೆ.

ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಬೇಸ್ ಮೆಂಟ್, ನೆಲ ಮಹಡಿ ಮತ್ತೆ ಮುಳುಗಡೆಯಾಗಿದೆ. ಹೀಗಾಗಿ ಅಪಾರ್ಟ್​ಮೆಂಟ್​ನ 2500 ಸಾವಿರ ಜನರನ್ನ ಬೇರೆಡೆಗೆ ಶಿಫ್ಟ್​ ಮಾಡಲಾಗ್ತಿದೆ. ಒಂದು ವಾರದ ಮಟ್ಟಿಗೆ ಅಪಾರ್ಟ್ಮೆಂಟ್ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಅಪಾರ್ಟ್ಮೆಂಟ್ ನಲ್ಲಿರುವ 150 ಅಧಿಕ ದ್ವಿಚಕ್ರ ವಾಹನ ಮುಳುಗಡೆಯಾಗಿದ್ದು, ಮಾಲೀಕರು ಕಂಗಾಲಾಗಿದ್ದಾರೆ. ಹಾಗಾಗಿ ಮುನ್ನೆಚರಿಕೆ ಕ್ರಮವಾಗಿ ಸುಮಾರು 14 ಬೋಟ್ ಮೂಲಕ NDRF ಕಾರ್ಯಾಚರಣೆ ನಡೆಸಲಾಗುತ್ತದೆ. ಸ್ಥಳಕ್ಕೆ ಯಲಹಂಕ ಶಾಸಕ ವಿಶ್ವನಾಥ್ ಕೂಡಾ ಬಂದು ರಕ್ಷಣಾ ಕಾರ್ಯಾಚರಣೆಯನ್ನ ಪರಿಶೀಲಿಸಿದ್ದಾರೆ.

NDRF ಪಡೆಯಿಂದ ರಕ್ಷಣೆ
ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್​ ಬಳಿ ರಕ್ಷಣಾ ಕಾರ್ಯದಲ್ಲಿ 70ಕ್ಕೂ ಹೆಚ್ಚು ಎನ್​ಡಿಆರ್​ಎಫ್​ ಸಿಬ್ಬಂದಿ ಭಾಗಿಯಾಗಿದ್ದಾರೆ. ರಕ್ಷಣಾ ಕಾರ್ಯಾಚಣೆ ಬಗ್ಗೆ ರೀಜನಲ್ ರೆಸ್ಪಾನ್ಸ್ ಸೆಂಟರ್ ಡೆಪ್ಯೂಟಿ ಕಮಾಂಡೆಂಟ್, ಅಖಿಲೇಷ್ ಕುಮಾರ್ ಚೋಭೆ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾತನಾಡಿರೋ ಅಖಿಲೇಷ್ ಕುಮಾರ್, ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡ್ತಿದ್ದೇವೆ. ಈಗಾಗಲೇ ಕೆಲವರನ್ನ ಸ್ಥಳಾಂತರ ಮಾಡಲಾಗಿದೆ.10ಕ್ಕೂ ಹೆಚ್ಚು ಬೋಟ್​ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸ್ತಿದ್ದೇವೆ ಅಂತ ತಿಳಿಸಿದ್ದಾರೆ.

ಮೀನು ಹಿಡಿದ ಜನ
ಮಳೆಯಬ್ಬರಕ್ಕೆ ಕೆರೆಯಲ್ಲಿದ್ದ ಮೀನುಗಳು ರಸ್ತೆಗೆ ಹರಿದು ಬಂದಿವೆ. ಯಲಹಂಕ ರಸ್ತೆಯ ಪೆಟ್ರೋಲ್ ಬಂಕ್​ನ ಮುಂಭಾಗದ ರಸ್ತೆಯಲ್ಲಿ ರಾಶಿ ರಾಶಿ ಮೀನುಗಳು ನೀರಿನಲ್ಲಿ ಕಾಣಿಸಿಕೊಂಡಿದ್ದು, ಪೆಟ್ರೋಲ್ ಬಂಕ್ ಸಿಬ್ಬಂದಿ ಬಲೆ ಮೂಲಕ ಮೀನುಗಳನನ್ನು ಹಿಡಿದಿರುವ ದೃಶ್ಯ ಕಂಡು ಬಂತು.

ಮುಳುಗಿದ ಮನೆ
ಚಿಕ್ಕಬೊಮ್ಮಸಂದ್ರದಲ್ಲೂ ಹತ್ತಾರು ಮನೆಗಳು ಜಲಾವೃತಗೊಂಡಿದೆ. ಬೆಂಬಿಡದೆ ಧಾರಕಾರವಾಗಿ ಮಳೆ ಸುರಿದ ಪರಿಣಾಮ ಸಾಕಷ್ಟು ಮನೆಗಳು ಜಲಾವೃತವಾಗಿದೆ. ಮಳೆ ನೀರನ್ನ ಹೊರ ಹಾಕಲು ನಿವಾಸಿಗಳು ರಾತ್ರಿ ಇಡೀ ಜಾಗರಾಣೆ ಮಾಡುವಂತಾಗಿದೆ.

ಚಿಕ್ಕಬೊಮ್ಮಸಂದ್ರದಲ್ಲಿ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದ್ದರೂ ಯಾವುದೇ ಅಧಿಕಾರಿಗಳು ಸ್ಪಂದಿಸಿಲ್ಲ ಅಂತ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ನ್ಯೂಸ್ ಫಸ್ಟ್ ಕ್ಯಾಮರಾ ಮುಂದೆ ಅಳಲು ತೋಡಿಕೊಂಡಿರೋ ನಿವಾಸಿಗಳು, ನಮ್ಮ ಕಷ್ಟ ಯಾರೂ ಕೇಳೋರಿಲ್ಲ, ನಿನ್ನೆ ರಾತ್ರಿಯೇ ಅಧಿಕಾರಿಗಳಿಗೆ ಕರೆ ಮಾಡಿದ್ರೂ ಯಾರೂ ಸ್ಪಂದನೆ ನೀಡಿಲ್ಲ ಅಂತ ಬೇಸರ ಹೊರಹಾಕಿದ್ದಾರೆ. ಬೆಂಗಳೂರಿನ ಸರ್ಜಾಪುರ ರಸ್ತೆ ಸಂಪೂರ್ಣ ಜಲಾವೃತವಾಗಿದೆ.ಧಾರಕಾರವಾಗಿ ಸುರಿದ ಮಳೆಯಿಂದಾಗಿ ಸರ್ಜಾಪುರ, ಆರ್​ಜಿಕೆ ಟೆಕ್ ಪಾರ್ಕ್ ಮುಂಭಾಗದ ರಸ್ತೆಗಳಲ್ಲಿ ಮಳೆ ನೀರು ತುಂಬಿ ಜಲಾವೃತವಾಗಿದೆ.ಇದ್ರಿಂದಾಗಿ ವಾಹನ ಸವಾರರು ಹೈರಾಣಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಳುಗಿದ ಬೆಂಗಳೂರು.. ರಣ ಭಯಂಕರ ಮಳೆಯ ನರಕ ದರ್ಶನ ಹೇಗಿದೆ? ಎಲ್ಲಿ ಏನೇನು ಆಗಿದೆ..?

https://newsfirstlive.com/wp-content/uploads/2024/10/BNG-RAIN-7.jpg

Load More