ಬೆಂಗಳೂರಿನಲ್ಲಿ ಧರೆಗುಳಿದ ಮರ, ಕೆರೆಯಂತಾದ ರಸ್ತೆಗಳು
ಗುಂಡಿಮಯ ರಸ್ತೆಯಲ್ಲಿ ಪಲ್ಟಿ ಹೊಡೆದ ಬೈಕ್ ಸವಾರ
ಕಟ್ಟಡದ ಅವಶೇಷಗಳಡಿ ಸಿಲುಕಿರೋ ಇನ್ನಿಬ್ಬರಿಗಾಗಿ ಶೋಧ
ವರುಣ ದೇವ ಕುಲುಕೋ ಚೀಟಿ ಹಾಕಿರೋ ಹಾಗೆ ಕಾಣ್ತಿದೆ. ಸೋಮವಾರ ಉತ್ತರ. ಮೊನ್ನೆ ಪೂರ್ವ. ನಿನ್ನೆ ದಕ್ಷಿಣ ಬೆಂಗಳೂರು ಅಂತಾ ಚೀಟಿ ನೋಡಿ ಟಾರ್ಗೆಟ್ ಫಿಕ್ಸ್ ಮಾಡ್ಕೊಂಡು ಮೋಡಕ್ಕೆ ತೂತು ಮಾಡ್ತಿದ್ದಾನೆ. ಇನ್ನೂ ಮಳೆಯಿಂದಾದ ಅವಾಂತರದ ಬಗ್ಗೆ ಮಾಹಿತಿ ಇಲ್ಲಿದೆ.
ಸಿಲಿಕಾನ್ ಸಿಟಿಯ ಜನತೆಗೆ ಮತ್ತೆ ವರುಣನ ಶಾಕ್
ಅದೆಲ್ಲ್ಲಿ ಕಾದು ಕೂತಿದಿದ್ದನೋ ವರುಣ ನಿನ್ನೆ ಸಂಜೆ ವೇಳೆಗೆ ಎಂಟ್ರಿ ಕೊಟ್ಟು ಆರ್ಭಟಿಸೋದಕ್ಕೆ ಶುರು ಮಾಡೇ ಬಿಟ್ಟ. ಮೆಜೆಸ್ಟಿಕ್, ಮಾರ್ಕೆಟ್, ಎಂಜಿ ರೋಡ್, ರಿಚ್ಮಂಡ್ ಸರ್ಕಲ್, ಶಾಂತಿನಗರದ ರಸ್ತೆಗಳು ಹತ್ತೇ ನಿಮಿಷದ ಮಳೆಗೆ ಮತ್ತೆ ಕೆರೆಯಂತಾಗಿದ್ವು. ಯಲಹಂಕ, ಹೆಬ್ಬಾಳ, ಜೆಪಿ ನಗರದಲ್ಲೂ ಫುಲ್ ಮಳೆಯಾಗಿ ಮರಗಳು ಧರೆಗುರುಳಿದ್ವು.
ಗುಂಡಿಮಯ ರಸ್ತೆಯಲ್ಲಿ ಸಂಚರಿಸುವಾಗ ಸವಾರ ಪಲ್ಟಿ
ವೈಟ್ ಫೀಲ್ಡ್ ಮೆಟ್ರೋ ನಿಲ್ದಾಣದ ಬಳಿ ಗುಂಡಿಮಯ ರಸ್ತೆಯಲ್ಲಿ ಸಂಚರಿಸುವಾಗ ಬೈಕ್ ಸವಾರ ಪಲ್ಟಿ ಹೊಡೆದು ಗುಂಡಿಗೆ ಬಿದ್ದ ಘಟನೆ ನಡೆದಿದೆ.
ವೈಟ್ ಫೀಲ್ಡ್ ಮೆಟ್ರೋ ನಿಲ್ದಾಣದ ಬಳಿ ಗುಂಡಿಮಯ ರಸ್ತೆಯಲ್ಲಿ ಸಂಚರಿಸುವಾಗ ಬೈಕ್ ಸವಾರ ಪಲ್ಟಿ ಹೊಡೆದು ಗುಂಡಿಗೆ ಬಿದ್ದ ಘಟನೆ ನಡೆದಿದೆ.#Bengaluru #RainAlert #raineffect pic.twitter.com/vyD3q8xpig
— Harshith Achrappady (@HAchrappady) October 24, 2024
ನಿನ್ನೆ ಸಂಜೆ ಶುರುವಾದ ಮಳೆ ಅಬ್ಬರಕ್ಕೆ ಕೆರೆಯಂತಾದ ರಸ್ತೆ
ನಿನ್ನೆ ಬೆಳಗ್ಗೆಯಿಂದ ಕೊಂಚ ಗ್ಯಾಪ್ ಕೊಟ್ಟಿದ್ದ ಮಳೆರಾಯ ಸಂಜೆ ಅಬ್ಬರಿಸೋದಕ್ಕೆ ಶುರು ಮಾಡಿದ್ದ. ಜೆ.ಪಿ ನಗರ 6ನೇ ಹಂತದ ಜರಗನಹಳ್ಳಿಯಲ್ಲಿರೋ ನೆಲ ಮಹಡಿಯಲ್ಲಿದ್ದ ಕೆಳ ಮನೆಗಳಿಗೆ ನೀರು ನುಗ್ಗಿ ಸಂಕಷ್ಟ ತಂದೊಡ್ಡಿತ್ತು..
ಜಯನಗರದ ಹಲವೆಡೆ ಭಾರೀ ಮಳೆಯಿಂದಾಗಿ ರಸ್ತೆಗಳು ನದಿಯಂತೆ ಭಾಸವಾಗಿದ್ವು. ಭಾರೀ ನೀರು ಹರಿಯುತ್ತಿದ್ದರಿಂದ ವಾಹನ ಸವಾರರು ಪರದಾಡಿದ್ರು.

ಬಿಹಾರ, ಆಂಧ್ರ, ತಮಿಳುನಾಡು, ಉತ್ತರ ಪ್ರದೇಶ ಅಂತ ದೇಶದ ನಾನಾ ಮೂಲೆಗಳಿಂದ ಬಂದು ಕೆಲಸ ಮಾಡ್ತಿದ್ದ 8 ಮಂದಿ ಕಳಪೆ ಕಾಮಗಾರಿಗೆ ಬಲಿಯಾಗಿದ್ದಾರೆ. ಕಟ್ಟಡದ ಅವಶೇಷಗಳಡಿ ಇನ್ನೂ ಇಬ್ಬರು ಸಿಲುಕಿರೋ ಶಂಕೆ ಇದ್ದು, 14 ಜನರನ್ನ ರಕ್ಷಿಸಿರೋ NDRF, SDRF, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ತಮ್ಮ ರಕ್ಷಣೆ ಕಾರ್ಯವನ್ನ ಮುಂದುವರೆಸಿದೆ.
ಕಟ್ಟಡ ದುರಂತ ಪ್ರಕರಣದಲ್ಲಿ ಇದುವರೆಗೆ ಮೂವರ ಬಂಧನ
ಈ ಪ್ರಕರಣ ಸಂಬಂಧ ಮಾಲೀಕರಾದ ಮುನಿರೆಡ್ಡಿ, ಪುತ್ರ ಭುವನ್ ರೆಡ್ಡಿ, ಗುತ್ತಿಗೆದಾರ ಮುನಿಯಪ್ಪ ಬಂಧನ ಮಾಡಲಾಗಿದೆ. ಕಳೆದ ಏಪ್ರಿಲ್ನಲ್ಲೇ ಮಾಲೀಕ ಮುನಿರೆಡ್ಡಿಗೆ ಬಿಬಿಎಂಪಿ ಕಟ್ಟಡ ನಿರ್ಮಾಣ ಬಗ್ಗೆ ನೋಟಿಸ್ ನೀಡಿತ್ತಂತೆ. ಪಾಲಿಕೆ ನೋಟಿಸ್ಗೂ ಉತ್ತರಿಸದೆ ಐದು, ಆರು ಅಂತಸ್ತು ಕಟ್ಟಡ ನಿರ್ಮಾಣ ಮಾಡಿದ್ದ ಎಂಬ ಆರೋಪದ ಮೇಲೆ ಅರೆಸ್ಟ್ ಮಾಡಲಾಗಿದೆ.
ಇದೆಲ್ಲದೆರ ನಡುವೆ ಬೆಂಗಳೂರಿನಲ್ಲಿ ಮಳೆ ಅಬ್ಬರ ಕಡಿಮೆಯಾಗಿ ಸಾಧಾರಣ ಮಳೆಯಾಗುತ್ತೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ.
ಒಟ್ಟಾರೆ, ಬೆಂಗಳೂರಿನಲ್ಲಿ ಮಳೆರಾಯನ ಆಟಾಟೋಪ ತುಸು ಹೆಚ್ಚಾಗಿದೆ. ಸಾಕು ನಿಲ್ಲಿಸು ವರುಣಾ ಅಂತ ಸಿಲಿಕಾನ್ ಸಿಟಿ ಮಂದಿ ಪ್ರಾರ್ಥಿಸುವಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ