Advertisment

ಮಳೆ ನೀರಿಗೆ ಮಗು ಸಾವು, ನದಿಗೆ ಬಿದ್ದ ಪರ್ವತದ ಒಂದು ಭಾಗ.. ಹತೋಟಿಗೆ ಬಾರದ ಪ್ರವಾಹ

author-image
AS Harshith
Updated On
ಮಳೆ ನೀರಿಗೆ ಮಗು ಸಾವು, ನದಿಗೆ ಬಿದ್ದ ಪರ್ವತದ ಒಂದು ಭಾಗ.. ಹತೋಟಿಗೆ ಬಾರದ ಪ್ರವಾಹ
Advertisment
  • ಕಾರು ಸಮೇತ ನಡುರಸ್ತೆಯಲ್ಲಿ ಸಿಲುಕಿಕೊಂಡ ಕುಟುಂಬ
  • ಮಳೆಗೆ ಪರ್ವತದ ಬಹುಭಾಗ ಒಡೆದು ನದಿಗೆ ಬಿದ್ದಿದೆ
  • ಉಗ್ರ ರೂಪ ತಾಳಿದ ನದಿಗಳು , ಭರ್ತಿಯಾದ ಅಣೆಕಟ್ಟುಗಳು

ದೇಶದ ಯಾವ ರಾಜ್ಯಗಳಿಗೂ ಭೇದ ಭಾವ ತೋರದ ಮೇಘರಾಜ ಮಳೆ ರೂಪದಲ್ಲಿ ದರ್ಶನ ನೀಡ್ತಿದ್ದಾನೆ. ಸಾವಿನ ಆಟ ಮುಂದುವರೆಸಿದ್ದಾರೆ. ಮಳೆ ಕೆಲವರಿಗೆ ವರವಾಗಿದ್ರೆ. ಕೆಲವರಿಗೆ ಕುಟುಂಬವನ್ನ ಕಳೆದುಕೊಳ್ಳುವ ಶಾಪವಾಗಿದೆ.

Advertisment

ಒಡೆದು ಮಂದಾಕಿನಿ ನದಿಗೆ ಬಿದ್ದ ಪರ್ವತದ ಬಹುಭಾಗ

ಇದು ಉತ್ತರಾಖಂಡದ ರುದ್ರಪ್ರಯಾಗ. ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಸಂಭವಿಸಿರೋ ಭೂಕುಸಿತ. ಪರ್ವತದ ಬಹುಭಾಗ ಒಡೆದು ಮಂದಾಕಿನಿ ನದಿಗೆ ಬಿದ್ದ ಘಟನೆ ಕಂಡ ಜನ ಬೆಚ್ಚಿದ್ದಾರೆ.

ಇವತ್ತೂ ಸಹ ಉತ್ತರಾಖಂಡವನ್ನ ಕಾಡಲಿದ್ದಾನಾ ವರುಣ?

ಉತ್ತರಾಖಂಡದ ಡೆಹ್ರಾಡೂನ್, ತೆಹ್ರಿ, ಚಂಪಾವತ್, ನೈನಿತಾಲ್, ಚಮೋಲಿ, ಬಾಗೇಶ್ವರದಲ್ಲಿ ಮಳೆಯಾಗ್ತಿದೆ. ಇಂದೂ ಕೂಡ ಮಳೆ ಅಬ್ಬರಕ್ಕೆ ಈ ಭಾಗಗಳು ತುತ್ತಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ದರ್ಶನ್​ ಗ್ಯಾಂಗ್​ನಿಂದ ಕೊಲೆ ಕೇಸ್​ಗೆ ಟ್ವಿಸ್ಟ್​; ಆರೋಪಿಗಳ ಫೋನ್​​ನಲ್ಲಿ ಸ್ಫೋಟಕ ಮಾಹಿತಿ ಬಯಲು

Advertisment

ಕಾರು ಸಮೇತ ನಡುರಸ್ತೆಯಲ್ಲಿ ಸಿಲುಕಿಕೊಂಡ ಕುಟುಂಬ

ಮಳೆ ಕೋಪಕ್ಕೆ ಪಂಜಾಬ್ ಕೂಡ ಹೊರತಾಗಿಲ್ಲ. ಚಂಡೀಗಢದಲ್ಲಿ ಭಾರೀ ಮಳೆಯಿಂದಾಗಿ ಕಾರಿನಲ್ಲಿ ಬರುತ್ತಿದ್ದ ಕುಟುಂಬವೊಂದು ಪ್ರವಾಹದಲ್ಲಿ ಸಿಲುಕಿ ಪರದಾಡುವಂತಾಗಿತ್ತು. ಕಾರಿನಲ್ಲಿದ್ದ ಕುಟುಂಬವನ್ನ ಸ್ಥಳೀಯರು ಕೂಡಲೇ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ: ಹೊಸ ದಾಖಲೆ ಬರೆಯಲಿರೋ ಪ್ರಧಾನಿ ನರೇಂದ್ರ ಮೋದಿ ಭಾಷಣ

ಮಳೆ ಅಬ್ಬರಕ್ಕೆ ದೆಹಲಿ, ಉತ್ತರ ಪ್ರದೇಶ, ಹರಿಯಾಣ ತತ್ತರ

ದೆಹಲಿಯಲ್ಲಿ ಸುರಿಯುತ್ತಿರುವ ಸಾವಿನ ಮಳೆ, ಮತ್ತೊಂದು ಬಲಿ ಪಡೆದಿದೆ. ಪಾರ್ಕ್‌ನಲ್ಲಿ ಆಟವಾಡುತ್ತಿದ್ದ ಮಗು, ಮಳೆ ನೀರಿನಲ್ಲಿ ಸಾವನ್ನಪ್ಪಿದೆ. ಇತ್ತ ಹೈಟೆಕ್ ಸಿಟಿ ನೋಯ್ಡಾ ನಗರದಲ್ಲಿ ಶೋಚನೀಯ ಸ್ಥಿತಿ ಇದ್ರೆ, ಅತ್ತ ಹರಿಯಾಣದ ಗುರುಗ್ರಾಮದಲ್ಲೂ ಮಳೆಯಿಂದಾಗಿ ಇಡೀ ನಗರದ ಸ್ಥಿತಿ ಹೇಗಿತ್ತು ಅಂದ್ರೆ. ರಸ್ತೆಗಳೆಲ್ಲಾ ನದಿಗಳಂತಾಗಿತ್ತು. ಕಾಲೋನಿಗಳೆಲ್ಲಾ ಕೆರೆಗಳಂತಾಗಿತ್ತು.

Advertisment

ಇದನ್ನೂ ಓದಿ: ಕೊಹ್ಲಿ, ರೋಹಿತ್​ ನಿವೃತ್ತಿ ಬಗ್ಗೆ ಬಿಗ್​ ಅಪ್ಡೇಟ್​​.. ಶಾಕಿಂಗ್​ ಸತ್ಯ ಬಿಚ್ಚಿಟ್ಟ ಹರ್ಭಜನ್​ ಸಿಂಗ್​​!

ಹತೋಟಿಗೆ ಬಾರದ ಪ್ರವಾಹದ ಪರಿಸ್ಥಿತಿ

ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿನ ಪ್ರವಾಹ ಹತೋಟಿಗೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಯಿಂದಾಗಿ ರಾಜಸ್ಥಾನದ ನದಿಗಳು ಮತ್ತು ರಸ್ತೆಗಳ ನಡುವಿನ ಅಂತರವು ಮಸುಕಾಗಿದೆ. ಖಂಡರ್ ರಸ್ತೆಯ ಪ್ರವಾಹದಲ್ಲಿ ಸಿಕಿದ್ದ ಟಿಕ್ಕಿ ಕಲ್ಯಾಣ್ ಯಾತ್ರೆಯ 100 ಪ್ರಯಾಣಿಕರ ಪೈಕಿ ಓರ್ವ ಸಾವನ್ನಪ್ಪಿದ್ದು, ಇನ್ನುಳಿದವರನ್ನ ರಕ್ಷಣೆ ಮಾಡಲಾಗಿದೆ.

ಧೋಲ್ಪುರದಲ್ಲಿ ‘ಧೂಳೆಬ್ಬಿಸಿದ’ ವರುಣನ ಅಬ್ಬರ!

ರಾಜಸ್ಥಾನದ ಧೋಲ್ಪುರದಲ್ಲಿ ಪಾರ್ವತಿ, ಬಾಮ್ನಿ, ಖರೇರ್ ಮತ್ತು ಶೆರ್ನಿ ನದಿಗಳ ಉಗ್ರ ರೂಪ ಬೆಚ್ಚಿ ಬೀಳಿಸ್ತಿದೆ.. ಪಾರ್ವತಿ ಅಣೆಕಟ್ಟು ಭರ್ತಿಯಾಗಿದ್ದು, ಗೇಟ್ ಓಪನ್​​ನಿಂದ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಅಪಾಯ ಹೆಚ್ಚಾಗಿದೆ.. ಇಂದು ಧೋಲ್ಪುರ್ ಜಿಲ್ಲೆಯ ಎಲ್ಲಾ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಒಟ್ಟಾರೆ, ದೇಶದ ಎಂಟೂ ದಿಕ್ಕಿನಲ್ಲೂ ಮಳೆರಾಯ ಟ್ರಾವಲ್​ ಮಾಡ್ತಾ ಅವಾಂತರಕ್ಕೆ ಕಾರಣನಾಗ್ತಿದ್ದಾನೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment