ಇಂದು KRS ಡ್ಯಾಂ ನೀರಿನ ಮಟ್ಟ ಎಷ್ಟಿದೆ? ಉಕ್ಕಿ ಹರಿಯುವ ರಭಸಕ್ಕೆ ಬೃಂದಾವನ ಬೋಟಿಂಗ್ ಪಾಯಿಂಟ್ ಜಲಾವೃತ!

author-image
AS Harshith
Updated On
ಇಂದು KRS ಡ್ಯಾಂ ನೀರಿನ ಮಟ್ಟ ಎಷ್ಟಿದೆ? ಉಕ್ಕಿ ಹರಿಯುವ ರಭಸಕ್ಕೆ ಬೃಂದಾವನ ಬೋಟಿಂಗ್ ಪಾಯಿಂಟ್ ಜಲಾವೃತ!
Advertisment
  • ಹಾಲುಕ್ಕಿದಂತೆ ಹರಿಯುತ್ತಿದ್ದಾಳೆ ಕನ್ನಡಿಗರ ತಾಯಿ
  • ಕಾವೇರಿ ಕಣಿವೆಯ 4 ಡ್ಯಾಮ್​ಗಳು ಶೇ.94 ರಷ್ಟು ಭರ್ತಿ
  • ಇಂದು KRS ಡ್ಯಾಂನ ಹೊರ ಹರಿವು? ಒಳ ಹರಿವು ಎಷ್ಟಿದೆ?

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಕಾವೇರಿ ಕಣಿವೆಯ ಡ್ಯಾಮ್ ಗಳಲ್ಲಿ 108 ಟಿಎಂಸಿ ನೀರು ಸಂಗ್ರಹವಾಗಿದೆ.

ಕಾವೇರಿ ಕಣಿವೆಯ 4 ಡ್ಯಾಮ್ ಗಳ ಗರಿಷ್ಠ ಸಂಗ್ರಹ ಸಾಮರ್ಥ್ಯ 114 ಟಿಎಂಸಿ ಅಡಿಯಾಗಿದ್ದು, ಕಳೆದ ವರ್ಷ ಇದೇ ದಿನ ಕಾವೇರಿ ಕಣಿವೆಯ ಡ್ಯಾಮ್ ಗಳಲ್ಲಿ 56 ಟಿಎಂಸಿ ನೀರು ಸಂಗ್ರಹವಾಗಿತ್ತು.  ಕಳೆದ ವರ್ಷಕ್ಕಿಂತ ಈ ಬಾರಿ ಬೇಗನೇ ಕಾವೇರಿ ಕಣಿವೆಯ ಡ್ಯಾಮ್ ಗಳು ಭರ್ತಿಯಾಗಿವೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಬೆಳ್ಳಂ‌ಬೆಳಗ್ಗೆ ಹರಿದ ನೆತ್ತರು.. ಮಾರಕಾಸ್ತ್ರಗಳಿಂದ‌ ಕೊಚ್ಚಿ ಯುವಕನ ಬರ್ಬರ ಹತ್ಯೆ

ಕೆ.ಆರ್‌.ಎಸ್, ಕಬಿನಿ, ಹಾರಂಗಿ, ಹೇಮಾವತಿ ಡ್ಯಾಮ್ ಗಳು ಸರಾಸರಿ ಶೇ.94 ರಷ್ಟು ಭರ್ತಿಯಾಗಿವೆ.  ಹಾರಂಗಿ ಡ್ಯಾಮ್ ಮಾತ್ರ ಶೇ.85 ರಷ್ಟು ಭರ್ತಿಯಾಗಿದೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ: 7 ದಿನವಾದ್ರೂ ಸಿಗದ ಮೃತದೇಹ; ಮಿಲಿಟರಿ ತಂಡ ಆಗಮನ

ಕಾವೇರಿ ಕಣಿವೆಯ ಡ್ಯಾಮ್ ಗಳಿಗೆ ಇಂದು 98,577 ಕ್ಯೂಸೆಕ್ ಒಳ ಹರಿವು ಹರಿದು ಬರುತ್ತಿದೆ. ಇಂದು ಬೆಳಿಗ್ಗೆ 70,645 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಇದರ ಪರಿಣಾಮ ಬೃಂದಾವನದ ಬೋಟಿಂಗ್ ಪಾಯಿಂಟ್ ಜಲಾವೃತವಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಸಂಗೀತ ನೃತ್ಯ ಕಾರಂಜಿಯನ್ನು ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 123.20 ಅಡಿ.
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ.
ಇಂದಿನ ಸಾಮರ್ಥ್ಯ - 47.242 ಟಿಎಂಸಿ
ಒಳ ಹರಿವು - 60,016 ಕ್ಯೂಸೆಕ್
ಹೊರ ಹರಿವು - 52020 ಕ್ಯೂಸೆಕ್

ಕೃಷ್ಣಾ ಕಣಿವೆಯ ಡ್ಯಾಂಗಳು

ಕೃಷ್ಣಾ ಕಣಿವೆಯ 6 ಡ್ಯಾಮ್ ಗಳಲ್ಲಿ ಇಂದು 313 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 130 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತು. ಕೃಷ್ಣಾ ಕಣಿವೆಯ 6 ಡ್ಯಾಮ್ ಗಳ ಗರಿಷ್ಠ ಸಂಗ್ರಹ ಸಾಮರ್ಥ್ಯ 422 ಟಿಎಂಸಿ ಅಡಿಯಷ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment