ಮಂಡ್ಯ ರೈತರಿಗೆ ಬಂಪರ್‌ ಸುದ್ದಿ.. ನಾಳೆಯೇ KRS ಡ್ಯಾಂ ಸಂಪೂರ್ಣ ಭರ್ತಿ; ಇನ್ನೆಷ್ಟು ಅಡಿ ಬಾಕಿ?

author-image
Veena Gangani
Updated On
ಮಂಡ್ಯ ರೈತರಿಗೆ ಬಂಪರ್‌ ಸುದ್ದಿ.. ನಾಳೆಯೇ KRS ಡ್ಯಾಂ ಸಂಪೂರ್ಣ ಭರ್ತಿ; ಇನ್ನೆಷ್ಟು ಅಡಿ ಬಾಕಿ?
Advertisment
  • ನಿರಂತರ ಮಳೆಯಿಂದ KRS ಡ್ಯಾಂ‌ನಲ್ಲಿ ನೀರಿನ ಮಟ್ಟ ಹೆಚ್ಚಳ
  • ಕೃಷ್ಣರಾಜ ಸಾಗರದ ಸುತ್ತಲೂ ಮಳೆಯ ಆರ್ಭಟ ಬಲು ಜೋರು
  • ಡ್ಯಾಂನಿಂದ ಹಂತ ಹಂತವಾಗಿ ನಾಲೆಗಳಿಗೆ ನೀರು ಹರಿಸಲು ನಿರ್ಧಾರ

ಮಂಡ್ಯ:  ಕಾವೇರಿ ತೀರದಲ್ಲಿ ನಿರಂತರ ಸುರಿದ ಮಳೆಯಿಂದಾಗಿ ನದಿ ತುಂಬಿ ಹರಿಯುತ್ತಿದೆ. ಕೃಷ್ಣರಾಜ ಸಾಗರದ ಸುತ್ತಲೂ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ ಕಾವೇರಿ ಒಡಲು ಕೆಆರ್‌ಎಸ್‌ ಡ್ಯಾಂ ಸಂಪೂರ್ಣ ಭರ್ತಿಯಾಗಲು ಕ್ಷಣಗಣನೆ ಶುರುವಾಗಿದೆ. ಕೆಆರ್‌ಎಸ್ ಡ್ಯಾಂ‌ನಿಂದ ನಾಲೆಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.

publive-image

ಇದನ್ನೂ ಓದಿ:KRS ಡ್ಯಾಂನ ನೀರಿನ ಮಟ್ಟ ಏರಿಕೆ.. ರಂಗನತಿಟ್ಟು ಹೋಗುವ ಪ್ರವಾಸಿಗಳಿಗೆ ಇಲ್ಲಿದೆ ಮಹತ್ವದ ಸುದ್ದಿ..

ಕೆಆರ್‌ಎಸ್‌ ಡ್ಯಾಂ

ಗರಿಷ್ಠ ಮಟ್ಟ -124.80 ಅಡಿ
ಇಂದಿನ ಮಟ್ಟ -121.40 ಅಡಿ
ಒಳ ಹರಿವು - 60,224 ಕ್ಯೂಸೆಕ್
ಹೊರ ಹರಿವು -15,000 ಕ್ಯೂಸೆಕ್
ಬಾಕಿ - 3 ಅಡಿ

ಕಬಿನಿ ಜಲಾಶಯ

ಗರಿಷ್ಠ ಮಟ್ಟ: 84 ಅಡಿ
ಇಂದಿನ ಮಟ್ಟ: 82 ಅಡಿ
ಒಳಹರಿವು: 45,658 ಕ್ಯೂಸೆಕ್
ಹೊರಹರಿವು: 40,408 ಕ್ಯೂಸೆಕ್

ತುಂಗಾಭದ್ರಾ ಡ್ಯಾಂ

ಗರಿಷ್ಟ ಮಟ್ಟ: 105 TMC
ಇಂದಿನ ಮಟ್ಟ: 65.110 TMC
ಒಳ ಹರಿವು : 1,16,040 ಕ್ಯೂಸೆಕ್‌
ಹೊರ ಹರಿವು : 1,267 ಕ್ಯೂಸೆಕ್‌

ಆಲಮಟ್ಟಿ ಜಲಾಶಯ

ಗರಿಷ್ಠ ಮಟ್ಟ : 123.081 ಟಿಎಂಸಿ
ಇಂದಿನ ಮಟ್ಟ : 97.416 ಟಿಎಂಸಿ
ಒಳಹರಿವು : 65,480 ಕ್ಯೂಸೆಕ್
ಹೊರಹರಿವು : 65,480 ಕ್ಯೂಸೆಕ್

ನಾಳೆಯೂ ಇದೇ ರೀತಿ ಒಳ ಹರಿವು ಬಂದ್ರೆ KRS ಡ್ಯಾಂನಲ್ಲಿ ನೀರು ಮತ್ತಷ್ಟು ಹೆಚ್ಚಳವಾಗಲಿದೆ. ಕೆಆರ್​ಎಸ್​ ಸಂಪೂರ್ಣವಾಗಿ ಭರ್ತಿಯಾಗಲು ಕೇವಲ 5 ಟಿಎಂಸಿ ನೀರು ಬೇಕಾಗಿದೆ. ಈಗಾಗಲೇ 121.40 ಅಡಿ ಭರ್ತಿಯಾಗಿದ್ದು, ಇನ್ನು, ಡ್ಯಾಂ ಭರ್ತಿಯಾಗಲು 3 ಅಡಿ ನೀರು ಮಾತ್ರ ಬೇಕಾಗಿದೆ. ಒಳ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಡ್ಯಾಂನಿಂದ ಹಂತ ಹಂತವಾಗಿ ನಾಲೆಗಳಿಗೆ ಹೆಚ್ಚಿನ ನೀರು ಹರಿಸಲು ನಿರ್ಧರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment