newsfirstkannada.com

ಬೆಂಗಳೂರಿಗರಿಗೆ ಗುಡ್‌ನ್ಯೂಸ್‌.. ವಾರವಿಡೀ ಮತ್ತೆ ಮಳೆರಾಯನ ಅಬ್ಬರ; ಎಲ್ಲಿ? ಯಾವಾಗ?

Share :

Published May 5, 2024 at 5:33pm

    ಎಸಿ, ಕೂಲರ್, ಫ್ಯಾನ್‌ಗಳ ಮೊರೆ ಹೋಗಿ ಸುಸ್ತಾಗಿದ್ದವರಿಗೆ ಸಿಹಿಸುದ್ದಿ!

    ಇಂದಿನಿಂದ ನಾಲ್ಕು ದಿನ 8 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಮೇತ ಮಳೆ

    ಬಿಸಿಗಾಳಿ ಅಲೆ ಜೊತೆಗೆ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ

ಬೆಂಗಳೂರು: ಎಂಥಾ ಬಿಸಿಲು, ಸೆಖೆ ತಾಳಲಾರೆವು. ಎಸಿ, ಕೂಲರ್, ಫ್ಯಾನ್‌ಗಳ ಮೊರೆ ಹೋಗಿ ಸುಸ್ತಾಗಿದ್ದ ಸಿಲಿಕಾನ್ ಸಿಟಿ ಮಂದಿಗೆ ನಿಜಕ್ಕೂ ಇದು ಗುಡ್‌ನ್ಯೂಸ್‌. ಸುಮಾರು 5 ತಿಂಗಳು ಕಳೆದ ಮೇಲೆ ನಮ್ಮ ಬೆಂಗಳೂರು ಮತ್ತೆ ಕೂಲ್ ಸಿಟಿಯಾಗಿ ಬದಲಾಗುತ್ತಿದೆ. ಬೇಸಿಗೆಯ ಬಿಸಿಯ ಮಧ್ಯೆ ಹವಾಮಾನ ಇಲಾಖೆ ಬೆಂಗಳೂರಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆ ನೀಡಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮುಂದಿನ ವಾರ ಕೂಡ ಮಳೆಯಾಗುವ ಸಾಧ್ಯತೆ ಇದೆ. ಬಿರು ಬಿಸಿಲಿನಲ್ಲಿ ಬೆಂಡಾದವರಿಗೆ ಕಳೆದ ಎರಡು ದಿನದ ಹಿಂದೆ ಮಳೆ ತಂಪೆರೆದಿತ್ತು. ಎರಡು ದಿನ ಸುರಿದ ಮಳೆಯನ್ನು ನೋಡಿದ ಸಿಟಿ ಮಂದಿ ನಿಜಕ್ಕೂ ನಿಟ್ಟುಸಿರು ಬಿಟ್ಟಿದ್ದರು. ಕೊನೆಗೂ ಬಂದ ಮಳೆರಾಯ ಇನ್ನು ಎರಡು ದಿನ ಸುರಿದು ಬಿಡಲಿ ಎಂದು ಪ್ರಾರ್ಥನೆ ಮಾಡುತ್ತಿದ್ದರು. ಮಳೆಗಾಗಿ ಪ್ರಾರ್ಥಿಸುತ್ತಿದ್ದವರಿಗೆ ವರುಣನ ಕೃಪೆಯಾಗಿದೆ.

ಬೆಂಗಳೂರಲ್ಲಿ ಮೇ 6ರಂದು ಬಿಸಿಲಿನ ಜೊತೆಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಮೇ 7 ಮತ್ತು 8 ರಂದು ಮೋಡ ಕವಿದ ವಾತಾವರಣ ಸಿಲಿಕಾನ್ ಸಿಟಿಯನ್ನು ಆವರಿಸಲಿದೆ. ಮೇ7 ಹಾಗೂ 8ರಂದು ಬೆಂಗಳೂರಲ್ಲಿ ಗುಡುಗು, ಸಿಡಿಲು ಸಹಿತ ಒಂದೆರಡು ಬಾರಿ ಮಳೆಯಾಗುವ ಮುನ್ಸೂಚನೆ ಇದೆ. ಮೇ 9 ಮತ್ತು 10 ರಂದು ಸಹ ಮಳೆಯ ವಾತಾವರಣ ಮುಂದುವರಿಯಲಿದೆ. ಮುಂದಿನ ವಾರ ಬೆಂಗಳೂರಿಗರಿಗೆ ಮಳೆಗಾಲದ ಅನುಭವ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ದೀಪಿಕಾ ದಾಸ್ ಹನಿಮೂನ್ ಟ್ರಿಪ್​; ಈ ಬಾರಿ ಬಿಗ್​ಬಾಸ್​​ ಬೆಡಗಿ ಹೋಗಿದ್ದು ಎಲ್ಲಿಗೆ ಗೊತ್ತಾ? 

ಬೆಂಗಳೂರು ಹೊರೆತುಪಡಿಸಿ ಇಂದಿನಿಂದ ನಾಲ್ಕು ದಿನಗಳ ಕಾಲ 8 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಮೇತ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಯಲ್ಲಿ ಬೆಂಗಳೂರು ಗ್ರಾಮಾಂತರ, ಹೊಸಕೋಟೆ, ಮೈಸೂರು, ಹುಣಸೂರು, ಕೊಡಗು, ಕೆ.ಆರ್ ನಗರ, ಹಾಸನ, ಮಂಡ್ಯ ಜಿಲ್ಲೆಯಲ್ಲಿ 2 ಸೆಂಟಿಮೀಟರ್‌ನಷ್ಟು ಮಳೆಯಾಗುವ ಮುನ್ಸೂಚನೆ ಇದೆ.

ಉಳಿದಂತೆ ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಜಿಲ್ಲೆಯ ವಿವಿಧೆಡೆ ಮಳೆಯಾಗುವ ಮುನ್ಸೂಚನೆ ಇದೆ. ಮಳೆಯ ಜೊತೆ, ಜೊತೆಗೆ ಮೇ 7ರವರೆಗೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಜೊತೆಗೆ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರಿಗೆ ಗುಡ್‌ನ್ಯೂಸ್‌.. ವಾರವಿಡೀ ಮತ್ತೆ ಮಳೆರಾಯನ ಅಬ್ಬರ; ಎಲ್ಲಿ? ಯಾವಾಗ?

https://newsfirstlive.com/wp-content/uploads/2024/05/BNG-RAIN.jpg

Load More