Advertisment

24 ಗಂಟೆಯಲ್ಲಿ ಮತ್ತೆ 7 ಜನ ಸಾವು.. ಮಳೆಯಿಂದ ಭಾರೀ ಅನಾಹುತ.. ಎಲ್ಲೆಲ್ಲಿ ಏನೆಲ್ಲ ಆಗ್ತಿದೆ..

author-image
Ganesh
Updated On
24 ಗಂಟೆಯಲ್ಲಿ ಮತ್ತೆ 7 ಜನ ಸಾವು.. ಮಳೆಯಿಂದ ಭಾರೀ ಅನಾಹುತ.. ಎಲ್ಲೆಲ್ಲಿ ಏನೆಲ್ಲ ಆಗ್ತಿದೆ..
Advertisment
  • ಪುಣೆ ನಗರದ ತಗ್ಗು ಪ್ರದೇಶದ ನೂರಾರು ಮನೆಗಳು ಜಲಾವೃತ
  • ವಾಡಾ ಮತ್ತು ವಿಕ್ರಮಗಡ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ
  • ನದಿಯಲ್ಲಿ ಆಟಿಕೆಯಂತೆ ತೇಲಿ ಹೋಗ್ತಿವೆ ಕಂಟೈನರ್ ವಾಹನಗಳು​

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿದ ಮಳೆಗೆ ಪುಣೆ ನಗರದ ಜನರು ತತ್ತರಿಸಿ ಹೋಗಿದ್ದಾರೆ. ಪುಣೆ ನಗರದ ತಗ್ಗು ಪ್ರದೇಶದ ನೂರಾರು ಮನೆಗಳು ಜಲಾವೃತವಾಗಿದ್ದು, ಮಳೆ ಅವಾಂತರದಿಂದ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Advertisment

ಮಳೆಗೆ 7 ಮಂದಿ ಸಾವು
ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗ್ತಿರೋ ಹಿನ್ನೆಲೆ ಪುಣೆ ನಗರದ ತಗ್ಗು ಪ್ರದೇಶದ ನೂರಾರು ಮನೆಗಳು ಜಲಾವೃತವಾಗಿವೆ. ಮಳೆ ಅವಾಂತರಕ್ಕೆ ನೂರಾರು ಜನರು ಮನೆ-ಮಠ ಕಳೆದುಕೊಂಡಿದ್ದು, ಅವರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮಳೆ ಸಂಬಂಧಿತ ಅವಘಡಗಳಿಂದ ಪುಣೆ ಅಕ್ಕಪಕ್ಕದ ಪ್ರದೇಶಗಳಲ್ಲಿ ಈವೆರಗೂ 7 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಮೂವರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. 12 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ರೆ 160 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ:ಒಬ್ಬಂಟಿಯಾಗಿ ಓಡಾಡೋ ಹೆಣ್ಮಕ್ಕಳೇ ಹುಷಾರ್.. ಬೆಂಗಳೂರಲ್ಲಿ ಓರ್ವ ಯುವತಿಗೆ ಏನಾಯ್ತು ಅಂದರೆ..

Advertisment

ಮುಂಬೈ ಮಹಾನಗರಿಯಲ್ಲೂ ಭಾರೀ ಮಳೆಯಾಗುತ್ತಿದ್ದು ಅಲ್ಲಿನ ಪಾಲಿಕೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಇತ್ತ ಪಾಲ್ಘರ್‌ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಕುಂಡಲಿಕಾ, ಅಂಬಾ, ಸಾವಿತ್ರಿ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಜನರು ಜೀವ ಕೈಯಲ್ಲಿ ಹಿಡಿದು ದಿನಕಳೆಯುತ್ತಿದ್ದಾರೆ. ವಾಹನ ಸವಾರರ ಪಾಡಂತೂ ಹೇಳತೀರದು. ಇನ್ನೂ ರಾಯಗಢ-ಪುಣೆ ಮಾರ್ಗದ ಹೆದ್ದಾರಿಯ ತಮ್ಹಿನಿ ಘಾಟ್​ನಲ್ಲಿ ಭೂಕುಸಿತ ಉಂಟಾಗಿದ್ದು ರಸ್ತೆ ಸಂಚಾರ ಬಂದ್​ ಮಾಡಲಾಗಿದೆ. ಇತ್ತ ಮುಂಬೈ ವಿಮಾನ ನಿಲ್ದಾಣದ 11 ವಿಮಾನಗಳು ರದ್ದಾಗಿವೆ.

ಮುಂದಿನ 24 ಗಂಟೆಗಳ ಕಾಲ ಪುಣೆಯಲ್ಲಿ ರೆಡ್​ ಅಲರ್ಟ್​!
ಭಾರೀ ಮಳೆ ಹಿನ್ನೆಲೆ ಹವಾಮಾನ ಇಲಾಖೆ ಪುಣೆಯಾದ್ಯಂತ ಮುಂದಿನ 24 ಗಂಟೆಗಳ ಕಾಲ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಾಡಾ ಮತ್ತು ವಿಕ್ರಮಗಡ ತಾಲೂಕಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಮಾತ್ರವಲ್ಲದೇ ಮಳೆಯ ಕಾರಣ ಮಹಾರಾಷ್ಟ್ರದ ಬೋರ್ಡ್​ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪುಣೆ ಸುತ್ತಮುತ್ತಲಿನ ತಾಲ್ಲೂಕುಗಳಲ್ಲಿರುವ ಅನೇಕ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಖಡಕ್‌ ವಾಸ್ಲಾ ಜಲಾಶಯದಲ್ಲಿಯೂ ನೀರಿನ ಮಟ್ಟ ಏರಿಕೆಯಾಗಿದ್ದು ಈಗಾಗಲೇ 35,000 ಕ್ಯುಸೆಕ್‌ಗಿಂತ ಹೆಚ್ಚು ನೀರನ್ನು ನದಿಗೆ ಬಿಡಲಾಗುತ್ತಿದೆ.

ಇದನ್ನೂ ಓದಿ:‘ವಿರಾಟ್ ಪಾಕಿಸ್ತಾನಕ್ಕೆ ಬರಲಿ.. ಅಲ್ಲಿ ತಾಕತ್ತು ತೋರಿಸಲಿ’ -ಕೊಹ್ಲಿಗೆ ಚಾಲೆಂಜ್

Advertisment

ಅಪಾಯ ಮಟ್ಟ ಮೀರಿದ ಮಹಾರಾಷ್ಟ್ರದ ಜೀವನದಿಗಳು
ಮುಂಬೈ ಮಹಾನಗರಿಯಲ್ಲೂ ಭಾರೀ ಮಳೆಯಾಗುತ್ತಿದ್ದು ಅಲ್ಲಿನ ಪಾಲಿಕೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಇತ್ತ ಪಾಲ್ಘರ್‌ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಕುಂಡಲಿಕಾ, ಅಂಬಾ, ಸಾವಿತ್ರಿ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಜನರು ಜೀವ ಕೈಯಲ್ಲಿ ಹಿಡಿದು ದಿನಕಳೆಯುತ್ತಿದ್ದಾರೆ.. ವಾಹನ ಸವಾರರ ಪಾಡಂತೂ ಹೇಳತೀರದು. ಇನ್ನೂ ರಾಯಗಢ-ಪುಣೆ ಮಾರ್ಗದ ಹೆದ್ದಾರಿಯ ತಮ್ಹಿನಿ ಘಾಟ್​ನಲ್ಲಿ ಭೂಕುಸಿತ ಉಂಟಾಗಿದ್ದು ರಸ್ತೆ ಸಂಚಾರ ಬಂದ್​ ಮಾಡಲಾಗಿದೆ. ಇತ್ತ ಮುಂಬೈ ವಿಮಾನ ನಿಲ್ದಾಣದ 11 ವಿಮಾನಗಳು ರದ್ದಾಗಿವೆ.

Advertisment

ಒಟ್ನಲ್ಲಿ ಮಹಾರಾಷ್ಟ್ರದ ಪಶ್ಚಿಮ ಘಟ್ಟದ ರಣಮಳೆಗೆ ಪುಣೆ ತತ್ತರಿಸಿಹೋಗಿದ್ದು ಜನರು ಮಳೆರಾಯನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಎರಡ್ಮೂರು ದಿನಗಳ ಕಾಲ ಮಳೆ ಮುಂದುವರೆದರೆ ಪುಣೆ, ಮುಂಬೈ ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment