/newsfirstlive-kannada/media/post_attachments/wp-content/uploads/2025/03/BNG-RAIN.jpg)
ಇಷ್ಟು ದಿನ ರಣ..ರಣ.. ಬಿಸಿ.. ಬಿಸಿ ಕಾವಲಿಯಂತಿದ್ದ ಸಿಲಿಕಾನ್ ಸಿಟಿ ಬೆಂಗಳೂರು ನಿನ್ನೆ ಇದ್ದಕ್ಕಿಂದ್ದಂತೆ ಕೂಲ್ ಕೂಲ್ ಆಗ್ಬಿಟ್ಟಿತ್ತು.. ಧರೆಗೆ ಇಳಿದ ಜಲದೇವಿ ಬೆಂದು ಹೋಗಿದ್ದ ಬೆಂದಕಾಳೂರು ಜನ್ರಿಗೆ ತಂಪೆರೆದು ಮುಖದಲ್ಲಿ ಮಂದಹಾಸ ಮೂಡಿಸಿದ್ಲು.. ಆದ್ರೆ ವಿಧಿಯಾಟ ಹೇಗಿತ್ತು ಅಂದ್ರೆ, ಬದುಕಿ ಬಾಳಬೇಕಿದ್ದ ಪುಟ್ಟ ಕಂದಮ್ಮನ ಜೀವ ತೆಗೆದು ಬಿಟ್ಟಿದೆ.. ಈ ಸುದ್ದಿ ನೋಡ್ತಿದ್ರೆ ಧರೆಗುರುಳಿದ ಜಲದೇವಿ ಬಾಲಕಿಯನ್ನ ಬಲಿ ಪಡೆಯೋದಕ್ಕೆಂದೇ ಬಂತಂತಿತ್ತು..
ಮಳೆಯಾರ್ಭಟಕ್ಕೆ ಬುಡ ಸಮೇತ ಕಿತ್ತು ಅಪ್ಪಳಿಸಿತು ಮರ!
ಎಷ್ಟು ಮುದ್ದು ಮುದ್ದಾಗಿ ಇದ್ದಾಳೆ ನೋಡಿ, ಬದುಕಿ ಬಾಳಬೇಕಿದ್ದ ‘ರಕ್ಷಾ’ ವಿಧಿಯಾಟಕ್ಕೆ ಬಲಿಯಾಗ್ಬಿಟ್ಟಿದ್ದಾಳೆ.. ಮಳೆ ಸಿಂಚನಕ್ಕೆ ಕಿಲ ಕಿಲ ಅಂತ ನಗ್ತಾ ಖುಷಿಯಾಗಿದ್ದ ಕಂದಮ್ಮ ಕಣ್ಣು ಮುಚ್ಚಿ ಉಸಿರು ನಿಲ್ಲಿಸಿ ಬಿಟ್ಟಿದ್ದಾಳೆ.
ಅದು ನಿನ್ನೆ ರಾತ್ರಿ 8.10ರ ಸಮಯ ಮಳೆ ಜೋರಾಗಿ ಆರ್ಭಟಿಸುತ್ತಿದ್ದಂತೆ ಪುಲಕೇಶಿನಗರದ ಜೀವನಹಳ್ಳಿಯಲ್ಲಿ ರಸ್ತೆಯಾಗಿ ತಂದೆ ಸತ್ಯ, ತನ್ನ 3 ವರ್ಷದ ಮಗಳು ರಕ್ಷಾ ಜೊತೆ ಬೈಕ್ನಲ್ಲಿ ಬರ್ತಿದ್ರು.. ಸರ್ ಹೋಗ್ಬೇಡಿ ಮಳೆ ನಿಂತು ಮೇಲೆ ಹೋಗಿ ಅಂತ ಒಂದಷ್ಟು ಮಂದಿ ಅಲ್ಲಿದ್ದ ಜನ್ರು ತಂದೆ ಸತ್ಯ ಅವರನ್ನ ಎಚ್ಚರಿಸಿದ್ರಂತೆ.. ಆದ್ರೆ ಮುಂದುಗಡೆ ಕುಳಿತಿದ್ದ ರಕ್ಷಾ ಒದ್ದೆಯಾಗ್ಬಿಡ್ತಾಳೆ.. ಬೇಗ ಹೋಗಿ ಮನೆಗೆ ಸೇರೋಣ ಅಂತಿದ್ದ ತಂದೆ ಇನ್ನೇನೂ ಜೀವಹಳ್ಳಿ ರಸ್ತೆ ಕ್ರಾಸ್ ಮಾಡೋಣ ಅನ್ನುವಷ್ಟರಲ್ಲಿ ಬಲಿಗಾಗಿ ಹೊಂಚು ಹಾಕ್ತಿದ್ದಂತೆ ಕಾದಿದ್ದ ಹೆಮ್ಮರವೊಂದು ಬುಡ ಸಮೇತ ಕಿತ್ತು ಬೈಕ್ ಮೇಲೆ ಬಿದ್ದಿತ್ತು.
ಇದನ್ನೂ ಓದಿ:150 ಅಡಿ ಎತ್ತರದ ತೇರು.. ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಘೋರ ದುರಂತ! VIDEO
ಮರ ಬಿದ್ದ ರಭಸಕ್ಕೆ ಬಾಲಕಿಯ ತಲೆಗೆ ಗಂಭೀರವಾಗಿ ಪೆಟ್ಟಾಗಿ ರಕ್ತ ಸೋರ್ತಿತ್ತು.. ಬೈಕ್ ಹ್ಯಾಂಡಲ್ ಫುಲ್ ಲಾಕ್ ಆಗಿ, ಅರೆ ಪ್ರಜ್ಞೆಯಲ್ಲಿದ್ದ ತಂದೆ ಮಗಳನ್ನ ಸ್ಥಳೀಯರು ರಕ್ಷಣೆ ಮಾಡಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರು.. ಆದ್ರೆ ಅಷ್ಟರಲ್ಲೇ ರಕ್ಷಾ ಉಸಿರು ನಿಂತು ಬಿಟ್ಟಿತ್ತು.. ಮುದ್ದಾದ ಮಗಳನ್ನ ಕಳೆದುಕೊಂಡ ಕುಟುಂಬ ಕಣ್ಣೀರು ಸುರಿಸಿದೆ.
ಸದ್ಯ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಮರ ತೆರವು ಮಾಡೋ ಕೆಲ್ಸ ನಡೆಸಿದ್ದಾರೆ.
ಇದನ್ನೂ ಓದಿ:ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್.. ಟಾಕ್ಸಿಕ್ ಸಿನಿಮಾ ಬಿಡುಗಡೆಯ ಡೇಟ್ ಫಿಕ್ಸ್! ಯಾವಾಗ?
ನಿನ್ನೆ ರಾತ್ರಿ ಏಕಾಏಕಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ಹಲವೆಡೆ ಸುಮಾರು 48 ಮರಗಳು ಧರೆಗೆ ಉರುಳಿರೋ ಮಾಹಿತಿ ಇದೆ.. ಇನ್ನು ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಚಿಕ್ಕಬಳ್ಳಾಪುರ, ಕೋಲಾರ, ಮತ್ತು ರಾಮನಗರದಲ್ಲೂ ಮಳೆ ಆಗಮನ ಆಗಿದೆ.. ಅದೇನೆ ಹೇಳಿ ಬಿಸಿಯಾಗಿದ್ದ ವೆದರ್ ತಂಪಾಯ್ತಲ್ಲ ಅಂತ ಖುಷಿಯಲ್ಲಿದ್ದ ಸಿಟಿ ಜನರಿಗೆ ಮೂರು ವರ್ಷದ ಕಂದಮ್ಮನ ಸಾವು ಬರಸಿಡಿಲು ಬಡಿದಂತೆ ಆಗ್ಬಿಟ್ಟಿದೆ...ಇನ್ನಾದ್ರೂ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತು, ಬೀಳೋ ಹಂತದಲ್ಲಿರೋ, ಹಳೆಯ ಮರಗಳನ್ನ ತೆರವುಗೊಳಿಸ್ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ