newsfirstkannada.com

ಬೆಳ್ಳಂಬೆಳಗ್ಗೆ ಮಳೆರಾಯನ ಸಿಂಚನ; ರಾಜ್ಯದ ಐದು ಜಿಲ್ಲೆಗಳು ಕೂಲ್ ಕೂಲ್​..!

Share :

Published April 20, 2024 at 11:28am

    ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆಯ ದರ್ಶನ ಆಗಿದೆ

    ಸಂಜೆ ಮಾತ್ರವಲ್ಲ, ಬೆಳಗ್ಗೆಯೂ ಕೂಡ ಮಳೆ ಮಳೆ ಎಂದ ಜನ

    ರೈತರ ಮೊಗದಲ್ಲಿ ಸಂತಸ, ಬಿಸಿಲಿನಿಂದ ತತ್ತರಿಸಿದವರೂ ಖುಷ್

ಉರಿ ಬಿಸಿಲಿನ ಸೆಕೆಯಿಂದ ಕಂಗೆಟ್ಟು ದೇವರಿಗಾಗಿ ಪ್ರಾರ್ಥಿಸುತ್ತಿದ್ದ ಜನರಿಗೆ ಕೊನೆಗೂ ವರುಣದೇವ ಕೃಪೆ ತೋರುತ್ತಿದ್ದಾನೆ. ರಾಜ್ಯದ ಹಲವೆಡೆ ಕಳೆದ ಮೂರ್ನಾಲ್ಕು ದಿನಗಳಿಂದ ಸಂಜೆ ವೇಳೆಗೆ ಮಳೆಯಾಗುತ್ತಿದೆ. ಖುಷಿ ವಿಚಾರ ಏನೆಂದರೆ ಇಂದು ಬೆಳಗ್ಗೆ ಕೂಡ ಕೆಲವು ಜಿಲ್ಲೆಯಲ್ಲಿ ಜಿಟಿಜಿಟಿ ಮಳೆಯಾಗಿದೆ.

ಎಲ್ಲೆಲ್ಲಿ ಮಳೆಯಾಗಿದೆ..?
ಗದಗ ಜಿಲ್ಲೆಯ ಮುಂಡರಗಿ, ಶಿರಹಟ್ಟಿ ಸೇರಿದಂತೆ ಹಲವೆಡೆ ಮಳೆಯಾಗಿದೆ. ಜೋರಾದ ಗಾಳಿ, ಗುಡುಗು ಸಹಿತ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಜನರು ಮತ್ತಷ್ಟು ಮಳೆಯನ್ನು ನಿರೀಕ್ಷೆ ಮಾಡಿದ್ದಾರೆ.

ಇದನ್ನೂ ಓದಿ: ನೇಹಾ ಹಿರೇಮಠ್ ಕೊಲೆ ಕೇಸ್; ರಾಜ್ಯದ ಕ್ಷಮೆ ಕೇಳಿ ಗಳಗಳನೇ ಕಣ್ಣೀರಿಟ್ಟ ಆರೋಪಿ ಫಯಾಜ್ ತಾಯಿ

ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಬೆಳ್ಳಂಬೆಳ್ಳಿಗೆ ವರುಣನ ಆರ್ಭಟ ಜೋರಾಗಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ಮಳೆರಾಯ ಸುರಿದಿದೆ. ಮಳೆರಾಯನ ಆರ್ಭಟಕ್ಕೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ:INSPIRING: ಹಳಿ ತಪ್ಪಿದ್ದ SRH​​ಗೆ ಹೊಸ ದಾರಿ ತೋರಿಸಿದ ದಂಡನಾಯಕ, ಕಮ್ಮಿನ್ಸ್ ​ಯಶಸ್ಸಿನ ರೋಚಕ ಸ್ಟೋರಿ..!

ಬರದನಾಡು ಕೊಪ್ಪಳ ಮಳೆಯಾಗಿದೆ. ಬೆಳ್ಳಗ್ಗೆಯಿಂದ ಜಿಟಿ ಜಿಟಿ ಮಳೆ ಬರುತ್ತಿದ್ದು, ಸಂಪೂರ್ಣ ಮೋಡ ಕವಿದ ವಾತಾವರಣ ನಿರ್ಮಾಣ ಆಗಿದೆ. ಬಿಸಿಲಿನ ಸೆಕೆಗೆ ಬೆಂಡಾಗಿದ್ದ ಕೊಪ್ಪಳ ಮಂದಿಗೆ ಮಳೆರಾಯ ತಂಪೆರೆದಿದ್ದಾನೆ. ಜಿಟಿಜಿಟಿ ಮಳೆಯಿಂದಾಗಿ ಬೀದಿ ಬದಿ ವ್ಯಾಪಾರಸ್ಥರಿಗೆ ಮಳೆರಾಯ ಅಡ್ಡಿ ಉಂಟುಮಾಡಿದೆ.

ಯಾದಗಿರಿಯಲ್ಲಿ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ನಗರದ ಹಲವೆಡೆ ಗಾಳಿ ಸಹಿತ ತುಂತುರು ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರು ಕೂಲ್ ಕೂಲ್ ಆಗಿದ್ದಾರೆ. ಬೆಳಗ್ಗೆಯಿಂದ ಸತತವಾಗಿ ತುಂತುರ ಮಳೆ ಸುರಿದಿದೆ.

ಇದನ್ನೂ ಓದಿ:ಮುದ್ದಾದ ಬಲೆ ಹೆಣೆದು ಕೊನೆಯ ಭೇಟಿಗೆ ಕರೆದ; ಇಬ್ಬರ ಜೀವ ತೆಗೆದ ‘ಆ ಹತ್ತು ನಿಮಿಷ’..!

ಉತ್ತರ ಕನ್ನಡ ಕರಾವಳಿಗೂ ವರುಣ ಕಾಲಿಟ್ಟಿದ್ದಾನೆ. ಕಳೆದೆರಡು ದಿನಗಳಿಂದ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಮಳೆ ಅಬ್ಬರಿಸಿತ್ತು. ಇಂದು ಬೆಳ್ಳಂಬೆಳಿಗ್ಗೆ ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ ಭಾಗದಲ್ಲಿ ಮಳೆ ತಂಪೆರೆದಿದೆ. ಎಪ್ರಿಲ್ 22ರವರೆಗೆ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಶಿರಸಿ, ಸಿದ್ದಾಪುರ, ಮುಂಡಗೋಡ, ಹಳಿಯಾಳ ಭಾಗದಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗಿದೆ. ಬೀದರ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಇಡೀ ಮಳೆ ಸುರಿದಿದೆ.

ಇದನ್ನೂ ಓದಿ:ಐಪಿಎಲ್​​ ಟೂರ್ನಿಯಿಂದಲೇ ಧೋನಿ ಹೊರಬಿದ್ದರೂ ಅಚ್ಚರಿ ಇಲ್ಲ..! ಸಿಎಸ್​ಕೆ ಫ್ಯಾನ್ಸ್​ಗೆ ಇದು ನೋವಿನ ಸುದ್ದಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳಂಬೆಳಗ್ಗೆ ಮಳೆರಾಯನ ಸಿಂಚನ; ರಾಜ್ಯದ ಐದು ಜಿಲ್ಲೆಗಳು ಕೂಲ್ ಕೂಲ್​..!

https://newsfirstlive.com/wp-content/uploads/2024/04/RAIN-4.jpg

Load More